ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಲೆಟ್ಸ್ ಸ್ಕೂಟರ್

Written By:

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಸುಜುಕಿ ಲೆಟ್ಸ್ ಸ್ಕೂಟರ್ ಇತ್ತೀಚೆಗಷ್ಟೇ ಭರ್ಜರಿ ಲಾಂಚ್ ಕಂಡಿತ್ತು. ಪ್ರಸ್ತುತ ಆಟೋಮ್ಯಾಟಿಕ್ ಸ್ಕೂಟರ್ ಈಗಾಗಲೇ 15,000ದಷ್ಟು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲೂ ಪ್ರದರ್ಶನಗೊಳಿಸಲಾಗಿದ್ದು ಲೆಟ್ಸ್ ಸ್ಕೂಟರ್ ಮುಂಬೈ ಎಕ್ಸ್ ಶೋ ರೂಂ ದರ 51.912 ರು.ಗಳಿಗೆ ಬಿಡುಗಡೆಗೊಳಿಸಿತ್ತು.

To Follow DriveSpark On Facebook, Click The Like Button
Suzuki

ಇದು ಆಟೋಮ್ಯಾಟಿಕ್ ಸ್ಕೂಟರ್ ವಿಭಾಗದಲ್ಲಿ ಜಪಾನ್‌ನ ವಾಹನ ತಯಾರಕ ಸಂಸ್ಥೆ ಪರಿಚಯಿಸುತ್ತಿರುವ ಮೊದಲ ಸ್ಕೂಟರ್‌ವೇನಲ್ಲ. ಸಂಸ್ಥೆಯು ಈಗಾಗಲೇ ಸ್ವಿಸ್ ಹಾಗೂ ಆಕ್ಸೆಸ್ ಆವೃತ್ತಿಗಳನ್ನು ಪರಿಚಯಿಸಿತ್ತು.

ಸುಜುಕಿ ಲೆಟ್ಸ್ ಪ್ರಮುಖವಾಗಿಯೂ ಹೋಂಡಾ ಆಕ್ಟಿವಾ ಐ ಮತ್ತು ಯಮಹಾ ರೇ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿದೆ. 112 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಲೆಟ್ಸ್ ಸ್ಕೂಟರ್ 8.7 ಅಶ್ವಶಕ್ತಿ (9 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಷ್ಟೇ ಅಲ್ಲದೆ ಸಿವಿಟಿ ಗೇರ್ ಬಾಕ್ಸ್ ಕೂಡಾ ಇದೆ.

ಸಂಸ್ಥೆಯ ಪ್ರಕಾರ ನೂತನ ಸುಜುಕಿ ಇಕೊ ತಂತ್ರಜ್ಞಾನ (ಎಸ್‌ಇಟಿ) ಆಳವಡಿಸಲಾಗಿರುವ ಲೆಟ್ಸ್ ಸ್ಕೂಟರ್ ಪ್ರತಿ ಲೀಟರ್‌ಗೆ 63 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಅಲ್ಲದೆ ಮೆಟ್ಯಾಲಿಕ್ ಸೊನಿಕ್ ಸಿಲ್ವರ್, ಪಿಯರ್ಲ್ ಮೈರೇಜ್ ವೈಟ್, ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್, ಪಿಯರ್ಲ್ ಮೈರಾ ರೆಡ್ ಮತ್ತು ಮೆಟ್ಯಾಲಿಕ್ ಟ್ರೈಟಾನ್ ಬ್ಲ್ಯೂಗಳೆಂಬ ಐದು ಬಣ್ಣಗಳ ಆಯ್ಕೆಯನ್ನು ಹೊಂದಿರುತ್ತದೆ. ಇವೆಲ್ಲದರ ಜೊತೆಗೆ ಐಚ್ಛಿಕ ಮೊಬೈಲ್ ಚಾರ್ಜರ್ ಮತ್ತು ನಿರ್ವಹಣಾ ರಹಿತ ಬ್ಯಾಟರಿ ಪಡೆದುಕೊಳ್ಳಲಿದೆ.

ಈ ನಡುವೆ ಇನ್ನಷ್ಟೇ ಬಿಡುಗಡೆಯಾಗಲಿರುವ 150 ಸಿಸಿ ಜಿಕ್ಸರ್ ಮಾರಾಟಕ್ಕೆ ಇನ್ನಷ್ಟು ಉತ್ತೇಜನ ನೀಡುವ ನಿರೀಕ್ಷೆಯಿದೆ. ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ ಇನಾಝುಮಾ ದರಗಳನ್ನು ಒಂದು ಲಕ್ಷ ರು.ಗಳಷ್ಟು ಕಡಿತಗೊಳಿಸಿತ್ತು.

English summary
Suzuki have reported that the Let's scooter has received positive feedback from buyers and roughly 15,000 booking have been made across the nation.
Story first published: Monday, June 23, 2014, 15:57 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark