ಆಟೋ ಎಕ್ಸ್ ಪೋಗೆ ಪಿಯಾಜಿಯೊ ಕೊಡುಗೆ

By Nagaraja

ಬಹುತೇಕ ಎಲ್ಲ ಪ್ರಖ್ಯಾತ ಸಂಸ್ಥೆಗಳು 2014 ಆಟೋ ಎಕ್ಸ್ ಪೋಗೆ ಪೂರ್ವ ತಯಾರಿಯನ್ನು ನಡೆಸಿಕೊಂಡಿದೆ. ಇದರಿಂದ ಇಟಲಿಯ ಮೂಲದ ಐಕಾನಿಕ್ ವಾಹನ ತಯಾರಕ ಸಂಸ್ಥೆಯಾಗಿರುವ ಪಿಯಾಜಿಯೊ ಕೂಡಾ ಹೊರತಾಗಿಲ್ಲ.

ಮೊಟೊ ಗುಝಿ ಮತ್ತು ಎಪ್ರಿಲಿಯಾ ಬ್ರಾಂಡ್‌ಗಳನ್ನು ಪಿಯಾಜಿಯೊ ಹೊರತರಲಿದೆ. ಇದರಲ್ಲಿ ಮೊಟೊ ಗುಝಿಯ ಕ್ಯಾಲಿಫೋರ್ನಿಯಾ 1400 ಹಾಗೂ ಬೆಲ್ಲಜಿಯೊ ಮತ್ತು ಏಪ್ರಿಲಿಯಾ ಆರ್‌ಎಸ್‌ವಿ4 ಬೈಕ್ ಪರಿಚಯವಾಗಲಿದೆ.


ಹಾಗಿದ್ದರೂ 2014 ಆಟೋ ಎಕ್ಸ್ ಪೋದಲ್ಲಿ ವೆಸ್ಪಾ ಹೊಸ ಮಾದಿರಿಯಿರುವುದಿಲ್ಲ. ಹಾಗಿದ್ದರೂ ವೆಸ್ಪಾ ಎಸ್ ಮಾದರಿ ಮಾಸಾಂತ್ಯದಲ್ಲಿ ಲಾಂಚ್ ಆಗುವ ನಿರೀಕ್ಷೆಯಿದೆ. ಇದು ಎಲ್ಎಕ್ಸ್ ಹಾಗೂ ವಿಎಕ್ಸ್ ಆವೃತ್ತಿಯಲ್ಲಿರುವುದಕ್ಕೆ ಸಮಾನವಾದ 125 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಕೆಲವೊಂದು ಬದಲಾವಣೆ ಕಂಡುಬರಲಿದೆ.

ಬೇಡಿಕೆಗೆ ಅನುಗುಣವಾಗಿ ಮೊಟೊ ಗುಝಿ ಮತ್ತು ಎಪ್ರಿಲಿಯಾ ಬೈಕ್‌ಗಳು ಲಭ್ಯವಿರಲಿದೆ. ಅಲ್ಲದೆ ಈಗಿರುವ ಪುಣೆ ಹಾಗೂ ನವದೆಹಲಿ ಹೊರತಾಗಿಯೂ ಡೀಲರ್‌ಶಿಪ್ ವಿಸ್ತರಣೆಯ ಯೋಜನೆಯನ್ನು ಹೊಂದಿದೆ. ಕಂಪ್ಲೀಟ್ ನೌಕ್ಡ್ ಡೌನ್ ಮುಖಾಂತರ ಬೈಕ್ ಪ್ರವೇಶವಾಗಲಿದೆ. ಅಲ್ಲದೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಗಳಿಕೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

moto guzzi
Most Read Articles

Kannada
English summary
Piaggio is gearing up for the 2014 Auto Expo and will be showcasing bikes from Moto Guzzi and aprilia stables. In the stalls could be the California 1400 and Bellagio from Moto Guzzi, while the RSV4 from the Italian outfit Aprilia may be displayed.
Story first published: Tuesday, February 4, 2014, 13:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X