ದಿಲ್ಲಿಯಲ್ಲಿ ಸದ್ದು ಮಾಡಿದ ಪ್ರೋಟಾನ್ ಎಲೆಕ್ಟ್ರಿಕ್ ಬೈಕ್

By Nagaraja

ಇದೀಗಷ್ಟೇ ಅಂತ್ಯಗೊಂಡಿರುವ 2014 ಆಟೋ ಎಕ್ಸ್ ಪೋದಲ್ಲಿ ಅನೇಕ ನೂತನ ಕಾನ್ಸೆಪ್ಟ್‌ಗಳು ಅನಾವರಣಗೊಂಡಿದ್ದವು. ಈ ಪೈಕಿ ತನ್ನದೇ ಆದ ಛಾಪು ಮೂಡಿಸುವುದರಲ್ಲಿ ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ಮಗ್ನವಾಗಿದ್ದವು.

ಹಾಗಿರುವಾಗ ನೂತನ ಸಂಸ್ಥೆಯೊಂದು ತನ್ನ ಹೊಸ ಕಾನ್ಸೆಪ್ಟ್‌ನೊಂದಿಗೆ 12ನೇ ಆಟೋ ಎಕ್ಸ್ ಪೋಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಹೌದು, ರಾಷ್ಟ್ರ ರಾಜಧಾನಿಯಲ್ಲಿ ಸಾಗಿದ 2014 ಆಟೋ ಎಕ್ಸ್ ಪೋದಲ್ಲಿ ಪುಣೆ ತಲಹದಿಯ ಏರಿಯಾನ್ (Areion) ಸಂಸ್ಥೆಯು ನೂತನ ಪ್ರೋಟಾನ್ ಎಲೆಕ್ಟ್ರಿಕ್ ಮೋಟಾರುಸೈಕಲ್ ಕಾನ್ಸೆಪ್ಟ್ ಪ್ರದರ್ಶಿಸಿದೆ.


ಈ ಮೂಲಕ ಉದಯೋನ್ಮುಖ ಸಂಸ್ಥೆಯೊಂದು 2014 ಆಟೋ ಎಕ್ಸ್ ಪೋದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ಪ್ರೋಟಾನ್ ಗರಿಷ್ಠ ನಿರ್ವಹಣೆಯ ಎಲೆಕ್ಟ್ರಿಕ್ ಬೈಕ್ ಆಗಿರಲಿದೆ. ಏರಿಯಾನ್ ಸಂಸ್ಥೆಯ ಎಂಜಿನಿಯರುಗಳು ಇದನ್ನು ಅಭಿವೃದ್ಧಪಡಿಸಿದ್ದು, ಸಂಪೂರ್ಣ ವಿದ್ಯುತ್ ಚಾಲಿತ ಬೈಕ್ ಎನಿಸಿಕೊಳ್ಳಲಿದೆ. ಇದಕ್ಕಾಗಿ ಎಲ್‌ಟೆಕ್ ಎಲೆಕ್ಟ್ರೊಡಿಸೈನ್ ಸಹಾಯವನ್ನು ಪಡೆಯಲಾಗಿದೆ.

ಇದರ ಪ್ರಮುಖ ವಿಶೇಷತೆಯೆಂದರೆ ಎಲೆಕ್ಟ್ರಿಕ್ ಕಂಟ್ರೋಲರ್ ಅನ್ನು, ಕೆಲವೊಂದು ಮಾರ್ಪಾಡುಗಳೊಂದಿಗೆ ಬೇರೆ ವಿದ್ಯುತ್ ಚಾಲಿತ ದ್ವಿಚಕ್ರಗಳಿಗೆ ಜೋಡಣೆ ಮಾಡಿಕೊಳ್ಳಬಹುದಾಗಿದೆ. ಇದು ಮುಂದಿನ ದಿನಗಳಲ್ಲಿ ಏರಿಯಾನ್‌ಗೆ ಉಜ್ವಲ ಭವಿಷ್ಯ ಪ್ರದಾನ ಮಾಡುವ ಸಾಧ್ಯತೆಯಿದೆ.

Areion Motors Proton Electric Motorcycle

ಪ್ರಸ್ತುತ ಏರಿಯಾನ್ ಪ್ರೋಟಾನ್ 24 ಅಶ್ವಶಕ್ತಿ ಉತ್ಪಾದಿಸುವ ಅಗ್ನಿ ಮೋಟಾರ್ಸ್‌ನ ಡಿಸಿ ಮೋಟಾರ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ 72 ವಾಟ್ ಬ್ಯಾಟರಿ ಪ್ಯಾಕ್ ಹೊಂದಿದೆ. ತಾಸು ತಾಸಿನಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಿಸಬಲ್ಲ ಇದರ ಬ್ಯಾಟರಿ 150 ಕೀ.ಮೀ. ವರೆಗೂ ಚಲಿಸಬಹುದಾಗಿದೆ.

ಏರಿಯಾನ್ ಪ್ರಕಾರ, ಪ್ರೋಟಾನ್ ಎಲೆಕ್ಟ್ರಿಕ್ ಬೈಕ್ ಕೇವಲ 8.6 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವರೆಗೆ ವೇಗವರ್ಧಿಸಲಿದೆ. ಹಾಗೆಯೇ ಗಂಟೆಗೆ ಗರಿಷ್ಠ 140 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಅಷ್ಟೇ ಅಲ್ಲದೆ ಸಂಪೂರ್ಣ ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.

Most Read Articles

Kannada
English summary
The Auto Expo 2014, India's biggest automotive gathering, attracts some of the largest four wheeler and two wheeler manufacturers from all over the world. But this is not a playing ground for just the high and mighty.
Story first published: Thursday, February 13, 2014, 15:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X