ಬಿಎಂಡಬ್ಲ್ಯು 2015 ಎಫ್ 800 ಆರ್ ರೋಡ್‌ಸ್ಟರ್ ಅನಾವರಣ

Written By:

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಕೇವಲ ಕಾರು ನಿರ್ಮಾಣದಲ್ಲಿ ಮಾತ್ರ ಹೆಸರು ಮಾಡಿಲ್ಲ. ಬದಲಾಗಿ ಐಕಾನಿಕ್ ಬೈಕ್ ಉತ್ಪಾದನೆಯಲ್ಲೂ ಜಗತ್ತಿನಾದ್ಯಂತ ಪ್ರಖ್ಯಾತಿ ಗಿಟ್ಟಿಸಿಕೊಂಡಿದೆ ಎಂಬುದನ್ನು ಮರೆಯುವಂತಿಲ್ಲ.

ನಿಮ್ಮ ಮಾಹಿತಿಗಾಗಿ ಜರ್ಮನಿಯ ಈ ಐಕಾನಿಕ್ ಸಂಸ್ಥೆಯ ಬೈಕ್‌ಗಳು ಬಿಎಂಡಬ್ಲ್ಯು ಮೊಟೊರಾಡ್ ಬ್ರಾಡಿಂಗ್‌ನಲ್ಲಿ ಮಾರಾಟವಾಗುತ್ತಿದೆ. ಇದರಂತೆ ಮಿಲಾನ್‌ನಲ್ಲಿ ಸಾಗಿದ ಇಐಸಿಎಂಎ ಮೋಟಾರ್‌ಸೈಕಲ್ ಶೋದಲ್ಲಿ ಸಂಸ್ಥೆಯು ಹೊಸ ರೋಡ್‌ಸ್ಟರ್ ಮಾದರಿಯನ್ನು ಅನಾವರಣಗೊಳಿಸಿದೆ.

ಅದುವೇ 2015 ಎಫ್ 800 ಆರ್ ರೋಡ್‌ಸ್ಟರ್. ಈ ನೆಕ್ಡ್ ಬೈಕ್‌ನಲ್ಲಿ 798 ಸಿಸಿ ಎಂಜಿನ್ ಆಳವಡಿಸಲಾಗಿದ್ದು ಗರಿಷ್ಠ 88.7 ಅಶ್ವಶಕ್ತಿ (86 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅಂತೆಯೇ ಲಿಕ್ವಿಡ್ ಕೂಲಿಂಗ್ ವ್ಯವಸ್ಥೆ ಪಡೆದುಕೊಳ್ಳಲಿರುವ ಈ ಎಂಜಿನ್ 6 ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆಯಲಿದೆ.

ಅಂದ ಹಾಗೆ ಇದು ಎರಡನೇ ಪೀಳಿಯ ಎಫ್ 800 ಆರ್ ಮಾದರಿಯಾಗಿದ್ದು, ಹ್ಯಾಂಡಲ್ ಬಾರ್, ಫೂಟ್ ಸ್ಟೆಪ್ ಪರಿಷ್ಕೃತಗೊಳಿಸಲಾಗಿದೆ. ಇದಲ್ಲದೆ ಹೆಡ್‌ಲೈಟ್, ಫೆಂಡರ್, ಚಕ್ರಗಳು ಮತ್ತು ರೇಡಿಯೇಡರ್ ಶೀಲ್ಡ್‌ನಲ್ಲೂ ಬದಲಾವಣೆ ಕಂಡುಬರಲಿದೆ.

ಜರ್ಮನಿಯ ಬಿಎಂಡಬ್ಲ್ಯು ಎಂಜಿನಿಯರ್‌ಗಳು ಇದರಲ್ಲಿ ಡಬಲ್ ಫ್ರಂಟ್ ಡಿಸ್ಕ್ ಜೊತೆ ರೇಡಿಯಲ್ ಬ್ರೇಕ್ ಕ್ಯಾಲಿಪರ್ ಒದಗಿಸಿರುತ್ತಾರೆ. ಅಂತೆಯೇ ಅಪ್ ಸೈಡ್ ಡೌನ್ ಫ್ರಂಟ್ ಫಾರ್ಕ್ ಹಾಗೂ ಮೊನೊ ಶಾಕ್ ರಿಯರ್ ವ್ಯವಸ್ಥೆ ಪಡೆದುಕೊಳ್ಳಲಿದೆ.

2015 F 800 R Roadster

ಇನ್ನುಳಿದಂತೆ ಎಫ್ 800 ಆರ್ ಮಾದರಿಯಲ್ಲಿ ಆಟೋಮ್ಯಾಟಿಕ್ ಸ್ಟೆಬಿಲಿಟಿ ಕಂಟ್ರೋಲ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಸಸ್ಪೆಷನ್ ಮತ್ತು ಕಡಿಮೆ ವಿದ್ಯುತ್ ಉತ್ಪಾದನಾ ವೈಶಿಷ್ಟ್ಯಗಳನ್ನು ಪಡೆಯಲಿದೆ. ಇವೆಲ್ಲವೂ ಐಚ್ಛಿಕ ಆಯ್ಕೆಗಳಾಗಿದ್ದು, ಸ್ಡಾಂಡರ್ಡ್ ಆಗಿ ಲಭ್ಯವಿರುವುದಿಲ್ಲ. ಹಾಗಿದ್ದರೂ ಎಬಿಎಸ್ ಸ್ಟಾಂಡರ್ಡ್ ಆಗಿ ದೊರಕಲಿದೆ ಎಂಬುದರಲ್ಲಿ ಯಾವುದೇ ಅನುಮಾನ ಬೇಡ.

English summary
German manufacturer BMW produces cars as well as motorcycles. Their bikes are sold under BMW Motorrad branding. Currently the 2014 EICMA motorcycle show is ongoing in Milan, Paris. They have introduced their new roadster model for 2015.
Story first published: Friday, November 14, 2014, 7:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark