ಸೂಪರ್ ಬೈಕ್ ಮೇಲೆ ಕಣ್ಣಿಟ್ಟ ಗುಜರಾತ್ ಪೊಲೀಸ್

Written By:

ಎಲ್ಲದಕ್ಕೂ ಗುಜರಾತನ್ನು ಮಾದರಿ ರಾಜ್ಯವಾಗಿ ಬಿಂಬಿಸಲಾಗುತ್ತದೆ. ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ಗುಜರಾತ್ ಪೊಲೀಸ್, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ 20ರಷ್ಟು ಸೂಪರ್ ಬೈಕ್‌ಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಇರಾದೆಯಲ್ಲಿದೆ.

ಅಷ್ಟೇ ಯಾಕೆ ಹೊಸ ವರ್ಷದಲ್ಲೇ ಈ ಬೈಕ್‌ಗಳು ಅಹಮದಾಬಾದ್ ಪೊಲೀಸ್ ಇಲಾಖೆಯನ್ನು ಸೇರಿಕೊಳ್ಳಲಿದೆ. ವರದಿಗಳ ಪ್ರಕಾರ ದುಬಾರಿ ಸೂಪರ್ ಬೈಕ್‌ಗಳ ಮೇಲೆ ಗುಜರಾತ್ ಪೊಲೀಸ್ ಕಣ್ಣಿಟ್ಟಿದೆ.

super bike

ಡಿಎಸ್‌ಕೆ ಹ್ಯೊಸಂಗ್‌ನಿಂದ ಹಿಡಿದು ಟ್ರಯಂಪ್, ಬಿಎಂಡಬ್ಲ್ಯು, ಹರ್ಲಿ ಡೇವಿಡ್ಸನ್‌ಗಳಂತಹ ಹೆಸರಾಂತ ಸೂಪರ್ ಬೈಕ್‌ಗಳೇ ಇದರ ಪಟ್ಟಿಯಲ್ಲಿದೆ. ಅಷ್ಟೇ ಯಾಕೆ ಟ್ರಯಂಪ್ ಬೊನೆವಿಲ್ಲೆ ಹಾಗೂ ಅಕ್ವಿಲಾ ಪ್ರೊ ಮೋಟಾರ್‌ಸೈಕಲ್‌ಗಳ ಮೇಲೂ ಇಲಾಖೆ ಕಣ್ಣಾಯಿಸಿದೆ.

ಇನ್ನು ಸೂಪರ್ ಬೈಕ್‌ಗಳನ್ನು ಚಾಲನೆ ಮಾಡುವ ಚಾಲಕರಿಗೆ ಪ್ರತ್ಯೇಕ ತರಬೇತಿಯನ್ನು ಕೊಡಲಾಗುವುದು. ಈ ಬೈಕ್‌ಗಳಲ್ಲಿ ಸೈರನ್, ಬದಿಯಲ್ಲಿ ಸ್ಯಾಡಲ್ ಬ್ಯಾಗ್, ಪೊಲೀಸ್ ಲಾಂಛನ ಮುಂತಾದ ವ್ಯವಸ್ಥೆಗಳನ್ನು ಹೊಂದಿರುತ್ತದೆ.

English summary
The Ahmedabad police plans to purchase these motorcycle prior to Gujarat Summit, which is scheduled in January, 2015.
Story first published: Monday, December 29, 2014, 10:51 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark