ಹೀರೊ ಎಚ್‌ಎಫ್ ಡಿಲಕ್ಸ್ ಇಕೊ ಬೈಕ್ ಲಾಂಚ್; ದರ ಎಷ್ಟು?

Written By:

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ನೂತನ ಎಚ್‌ಎಫ್ ಡಿಲಕ್ಸ್ ಇಕೊ ಪ್ರಯಾಣಿಕ ಬೈಕನ್ನು ಲಾಂಚ್ ಮಾಡಿದೆ.

ದರ ಮಾಹಿತಿ: 50,500 ರು.

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದ್ದ ಹೀರೊ ಎಚ್‌ಎಫ್ ಡಿಲಕ್ಸ್ ಇಕೊ, ಇದೀಗ ಮಾರುಕಟ್ಟೆಯನ್ನು ತಲುಪಿದೆ. ಅಷ್ಟೇ ಅಲ್ಲದೆ ಪರಿಸರ ಸ್ನೇಹಿ ಸಂಕೇತವಾಗಿ ಹಸಿರುವ ಬಣ್ಣವನ್ನು ಪಡೆಯಲಾಗಿದೆ.

Hero HF Deluxe Eco

ಎಂಜಿನ್...

ಅಂದ ಹಾಗೆ ಹೀರೊ ಎಚ್‌ಎಫ್ ಡಿಲಕ್ಸ್ ಇಕೊ ಬೈಕ್, 97.2 ಸಿಸಿ, ಫೋರ್ ಸ್ಟ್ರೋಕ್, ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್. ಒಎಚ್‌ಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಫೋರ್ ಸ್ಪೀಡ್ ಗೇರ್ ಬಾಕ್ಸ್ ಪೆಡದುಕೊಳ್ಳಲಿದೆ. ಇದು 7.7 ಅಶ್ವಶಕ್ತಿ (8.04 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅದೇ ರೀತಿ ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಮತ್ತು ಹಿಂದುಗಡೆ ಟು ಸ್ಟೆಪ್ ಹೊಂದಾಣಿಸಬಹುದಾದ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಪಡೆದುಕೊಂಡಿದೆ.

ಇನ್ನುಳಿದಂತೆ ಮುಂದೆ ಹಾಗೂ ಹಿಂದುಗಡೆ ಡ್ರಮ್ ಬ್ರೇಕ್ ಇರಲಿದೆ. ಅಲ್ಲದೆ ಏರ್ ಫಾಯಿಲ್ಸ್ ಮತ್ತು ಪರಿಷ್ಕೃತ ಮಿರರ್‌ಗಳಂತಹ ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಲೊ ರಾಲಿಂಗ್ ಫ್ರಿಕ್ಷನ್ ಚಕ್ರ, ಸೈಡ್ ಸ್ಟಾಂಡ್ ಇಂಡಿಕೇಟರ್, ಕ್ಲಿಯರ್ ಲೆನ್ಸ್ ಇಂಡಿಕೇಟರ್, ಮಲ್ಟಿ ರಿಫ್ಲೆಕ್ಟರ್ ಹೆಡ್‌ಲ್ಯಾಂಪ್, ಇಂಧನ ಟ್ಯಾಕ್, ಸೀಟು ಮತ್ತು ಅಲಾಯ್ ವೀಲ್ಸ್‌ಗಳಂತಹ ಸೌಲಭ್ಯಗಳನ್ನು ಒಳಗೊಂಡಿದೆ.

English summary
Hero Motocorp has launched its commuter motorcycle, HF Deluxe Eco priced at at Rs.50,500. The company has also showcased this HF-Deluxe Eco at the 2014 Auto Expo.
Story first published: Monday, March 10, 2014, 12:29 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark