ಇದೀಗ ಅಧಿಕೃತ; ಸ್ಪ್ಲೆಂಡರ್ ಹಿಂದಿಕ್ಕಿದ ಆಕ್ಟಿವಾ ನಂ.1

Written By:

ಇದೀಗ ಎಲ್ಲವೂ ಅಧಿಕೃತಗೊಂಡಿದ್ದು, ಹೀರೊ ಸ್ಪ್ಲೆಂಡರ್ ಹಿಂದಿಕ್ಕಿರುವ ಹೋಂಡಾ ಆಕ್ಟಿವಾ ದೇಶದ ನಂ.1 ದ್ವಿಚಕ್ರ ವಾಹನ ಎನಿಸಿಕೊಂಡಿದೆ. ಕಳೆದ ಮಾರ್ಚ್ ತಿಂಗಳ ಅಂಕಿಅಂಶ ಪ್ರಕಾರ ಇದು ದಾಖಲಾಗಿದೆ.

ಇದುವರೆಗೆ ಸ್ಪ್ಲೆಂಡರ್ ದೇಶದ ಅತ್ಯಂತ ಜನಪ್ರಿಯ 100ಸಿಸಿ ಮೋಟಾರುಸೈಕಲ್‌ವೆಂಬ ಕೀರ್ತಿಗೆ ಪಾತ್ರವಾಗಿತ್ತು. ಆದರೆ ಇದನ್ನು ಹಿಮ್ಮೆಟ್ಟಿಸಿರುವ ಹೋಂಡಾ ಆಕ್ಟಿವಾ, ಮಾರ್ಚ್ ತಿಂಗಳ ಮಾರಾಟದಲ್ಲಿ ಅತಿ ಹೆಚ್ಚು ಮಾರಾಟ ದಾಖಲಿಸುವ ಮೂಲಕ ಅಗಸ್ಥಾನಕ್ಕೆ ದಾಪುಗಾಲನ್ನಿಟ್ಟಿದೆ.

Honda Activa

ಈ ಮೂಲಕ 2013-14ನೇ ಆರ್ಥಿಕ ಸಾಲಿನಲ್ಲಿ ಎರಡನೇ ಬಾರಿಗೆ ಆಕ್ಟಿವಾ ಇಂತಹದೊಂದು ಗೌರವಕ್ಕೆ ಪಾತ್ರವಾಗಿದೆ. ಈ ಹಿಂದೆ 2013 ಸೆಪ್ಟೆಂಬರ್ ತಿಂಗಳ ಮಾರಾಟದಲ್ಲೂ ಸ್ಪ್ಲೆಂಡರ್ ಓವರ್‌ಟೇಕ್ ಮಾಡುವಲ್ಲಿ ಆಕ್ಟಿವಾ ಯಶಸ್ವಿಯಾಗಿತ್ತು.

2013 ಮಾರ್ಚ್ ಹಾಗೂ 2014 ಮಾರ್ಚ್ ಅವಧಿಯಲ್ಲಿ ಶೇಕಡಾ 65ರಷ್ಟು ಭರ್ಜರಿ ಏರುಗತಿ ಸಾಧಿಸಿರುವ ಆಕ್ಟಿವಾ, 179956 ಯುನಿಟ್ ಮಾರಾಟ ಗಿಟ್ಟಿಸಿಕೊಂಡಿದೆ. ಕಳೆದ ಬಾರಿಯಿದು 108815 ಯುನಿಟ್‌ಗಳಾಗಿದ್ದವು. ಈ ಮೂಲಕ ಸ್ಪ್ಲೆಂಡರ್‌ಗಿಂತಲೂ ಕೇವಲ 13,000 ಯುನಿಟ್‌ಗಳ ಅಂತರದಲ್ಲಿ ಅಗ್ರಸ್ಥಾನ ಕಳೆದುಕೊಂಡಿದೆ.

ಈ ನಡುವೆ ಆಕ್ಟಿವಾಗೆ ಇನ್ನಷ್ಟು ಉತ್ತೇಜನ ತುಂಬಲು ಇದೀಗಷ್ಟೇ ಆಕ್ಟಿವಾ 125 ಸಿಸಿ ಸ್ಕೂಟರ್ ಲಾಂಚ್ ಮಾಡಲಾಗಿದೆ.

English summary
It's official. Honda Activa has emerged as the numero uno in India in terms of number of units sold in the two wheeler segment during the month of March.
Please Wait while comments are loading...

Latest Photos