1.5 ಕೋಟಿ ಗ್ರಾಹಕ ಮೈಲುಗಲ್ಲು ತಲುಪಿದ ಹೋಂಡಾ

By Nagaraja

ದೇಶದ ಎರಡನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಮೋಟಾರು ಸೈಕಲ್ಸ್ ಆಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್‌ಎಂಎಸ್‌ಐ) 1.5 ಕೋಟಿ ಯಶಸ್ವಿ ಗ್ರಾಹಕರ ಮೈಲುಗಲ್ಲು ತಲುಪಿದೆ.

ಕಳೆದ 13 ವರ್ಷಗಳಲ್ಲಿ ಹೋಂಡಾ ಇಂತಹದೊಂದು ಸಾಧನೆ ಮಾಡಿದೆ. ಈ ಪೈಕಿ ಕೊನೆಯ 5 ದಶ ಲಕ್ಷ ಗ್ರಾಹಕರು ಕೇವಲ ಒಂದು ವರೆ ವರ್ಷದಲ್ಲೇ ದಾಖಲಾಗಿದ್ದವು. ಹಾಗೆಯೇ ದೇಶದಲ್ಲಿ ಹೋಂಡಾ ಯಶಸ್ಸಿಗೆ ಕಾರಣಭೂತರಾದ ಎಲ್ಲ ಗ್ರಾಹಕರಿಗೂ ಸಂಸ್ಥೆ ಕೃತಜ್ಞತೆ ಸಲ್ಲಿಸಿದೆ.

Honda Motorcycle And Scooter

ಪ್ರಯಾಣಿಕ ವಿಭಾಗದಲ್ಲಿ ಡ್ರೀಮ್ ಯುಗಾ ಹಾಗೂ ಡ್ರೀಮ್ ನಿಯೋ ಬೈಕುಗಳಿಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಹಾಗೆಯೇ ಆಟೋಮ್ಯಾಟಿಕ್ ಸ್ಕೂಟರ್ ವಿಭಾಗದಲ್ಲಿ ಹೋಂಡಾ ಅಬ್ಬರ ಬಲು ಜೋರಾಗಿಯೇ ನಡೆಯುತ್ತಿದೆ.

1999ನೇ ಇಸವಿಯಲ್ಲಿ ದೇಶಕ್ಕೆ ಪಾದಾರ್ಪಣೆ ಮಾಡಿದ್ದ ಹೋಂಡಾ 2001ನೇ ಇಸವಿಯಲ್ಲಿ ಮಾನೇಸರ್‌ನಲ್ಲಿ ಮೊದಲ ಘಟಕ ಆರಂಭಿಸಿತ್ತು. ಪ್ರಸ್ತುತ ಮಾನೇಸರ್ ಜತೆಗೆ ರಾಜಸ್ತಾನ ಹಾಗೂ ಕರ್ನಾಟಕದಲ್ಲೂ ಘಟಕ ಹೊಂದಿರುವ ಹೋಂಡಾ, ವಾರ್ಷಿಕವಾಗಿ 46 ಲಕ್ಷ ಯುನಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Most Read Articles

Kannada
English summary
Honda Motorcycle and Scooter India Pvt. Ltd. (HMSI), one of India's fastest growing two wheeler company has 15 million satisfied customers, in just 13 years.
Story first published: Friday, January 24, 2014, 14:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X