2017 ಮೊಟೊ ಜಿಪಿಯಲ್ಲಿ ಭಾಗವಹಿಸಲಿರುವ ಕೆಟಿಎಂ
ಆಸ್ಟ್ರಿಯಾದ ವಾಹನ ತಯಾರಕ ಸಂಸ್ಥೆಯಾಗಿರುವ ಕೆಟಿಎಂ, 2017ನೇ ಮೊಟೊಜಿಪಿಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದೆ.
ಸಣ್ಣ ಹಾಗೂ ಹಗುರ ವಿಭಾಗದ ರೇಸ್ ಬೈಕ್‌ಗಳಲ್ಲಿ ಯಶಸ್ಸು ಸಾಧಿಸಿರುವ ಕೆಟಿಎಂ ಜಿಪಿ ಕ್ಲಾಸ್ ರೇಸಿಂಗನ್ನು ತೊರೆದು ಒಂದು ದಶಕದಷ್ಟು ಸಮಯವಾಗಿದೆ.

ಇದೀಗ ಹೇಳಿಕೆ ಕೊಟ್ಟಿರುವ ಕೆಟಿಎಂ ಮೋಟಾರು ಸ್ಪೋರ್ಟ್ಸ್ ನಿರ್ದೇಶಕರಾಗಿರುವ ಪಿಟ್ ಬಿರೆರ್, ಮೊಟೊಜಿಪಿಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ.
ಈ ಮೂಲಕ ಕೆಟಿಎಂ ಮೊಟೊಜಿಪಿ ಕ್ರೀಡೆಯತ್ತ ದೊಡ್ಡ ಹೆಜ್ಜೆಯನ್ನೇ ಇಟ್ಟಿದೆ. ಒಳಗಡೆ ಹೋಂಡಾ ಎಂಜಿನ್ ಆಳವಡಿಸುವುದು ಸಂಸ್ಥೆಯ ಯೋಜನೆಯಾಗಿದೆ.
ಇದರಂತೆ ಈಗಾಗಲೇ ತಯಾರಿಯನ್ನು ಆರಂಭಿಸಿರುವ ಕೆಟಿಎಂ, 2017 ಮೊಟೊಜಿಪಿಯಲ್ಲಿ ಭಾಗವಹಿಸಲು ಎಲ್ಲ ರೀತಿ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದೆ.


Click it and Unblock the Notifications








