ನವೋ ನವೋ; ಗಮನ ಸೆಳೆದ ರೆಕ್ಸ್‌ನಮೊ ಎಲೆಕ್ಟ್ರಿಕ್ ಬೈಕ್

By Nagaraja

ನಿಮಗೆ ತಿಳಿದಿರುವಂತೆಯೇ ಪ್ರತಿಷ್ಠಿತ ದೆಹಲಿ ಆಟೋ ಎಕ್ಸ್ ಪೋದಲ್ಲಿ ಹಲವಾರು ನೂತನ ಕಾನ್ಸೆಪ್ಟ್‌ಗಳು ಅನಾವರಣಗೊಂಡಿದೆ. ಇಲ್ಲಿ ಜಗತ್ತಿನ ಪ್ರಖ್ಯಾತ ಕಂಪನಿಗಳಿಂದ ಹಿಡಿದು ಉದಯೋನ್ಮುಖ ಸಂಸ್ಥೆಗಳು ಸಹ ತಮ್ಮ ನೂತನ ಕಾನ್ಸೆಪ್ಟ್‌ಗಳೊಂದಿಗೆ ಮುಂದೆ ಬಂದಿದ್ದವು.

ಕೆಲವು ಬಾರಿ ಇಂತಹ ಕಂಪನಿಗಳು ಮಾಧ್ಯಮದಲ್ಲಿ ಹೆಚ್ಚು ಪ್ರಚಾರ ಗಿಟ್ಟಿಸಿಕೊಳ್ಳಲು ವಿಫಲವಾಗುತ್ತದೆ. ಆದರೆ ಇವೆಲ್ಲಕ್ಕಿಂತಲೂ ಭಿನ್ನವಾಗಿರುವ ಸ್ಥಳೀಯ ಸಂಸ್ಥೆಯಾದ ರೆಕ್ಸ್‌ನಮೊ (Rexnamo) ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

Rexnamo Electric Bike

ಹೌದು, ರೆಕ್ಸ್‌ನಮೊ ಎಂಬ ಸಂಸ್ಥೆಯು ನೂತನ ಎಲೆಕ್ಟ್ರಿಕ್ ಕ್ರೂಸರ್ ಬೈಕ್‌ವೊಂದನ್ನು 12ನೇ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿದೆ. ನೀವಿಲ್ಲಿ ನೋಡುತ್ತಿರುವಂತೆಯೇ ಪ್ರಸ್ತುತ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟನ್ನು ಸಂಸ್ಥೆಯ ಸಿಇಒ ಆಘಿರುವ ನಮನ್ ಚೋಪ್ರಾ ಅಭಿವೃದ್ಧಿಪಡಿಸಿದ್ದಾರೆ.

ತಂದೆಯ ಜತೆ ತಮ್ಮ 14ರ ಹರೆಯದಿಂದಲೇ ಬೈಕ್ ಅಭಿವೃದ್ಧಿಯಲ್ಲಿ ತೊಡಗಿರುವ ನಮನ್ ಎಲೆಕ್ಟ್ರಿಕ್ ಬೈಕ್‌ಗಳ ಹೊಸ ಅವತರಣಿಕೆಯನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಇದರ ನಿರ್ಮಾಣ ವರ್ಷನ್ 2015-16ರ ಅವಧಿಯಲ್ಲಿ ಸಿದ್ಧಗೊಳ್ಳಲಿದೆ.

Rexnamo Electric Bike

ಶೇಕಡಾ 80ರಷ್ಟು ಭಾಗಗಳನ್ನು ದೇಶಿಯವಾಗಿ ನಿರ್ಮಿಸಲಾಗಿರುವುದು ಇದರ ವಿಶೇಷತೆಯಾಗಿದೆ. ಆದರೆ ಬ್ಯಾಟರಿಗಳಂತಹ ಅಗತ್ಯ ವಸ್ತುಗಳನ್ನು ಮಾತ್ರ ಆಮದು ಮಾಡಲಾಗಿದೆ. ಐಷಾರಾಮಿ ಸೆಗ್ಮೆಂಟ್‌ನಲ್ಲಿ ಗುರುತಿಸಿಕೊಳ್ಳಲಿರುವ ಈ ಕ್ರೂಸರ್ ಬೈಕ್ ಮೂರು ಲಕ್ಷ ರು.ಗಿಂತಲೂ ಹೆಚ್ಚು ದುಬಾರಿಯಾಗಲಿದೆ.

ಈ ಸೂಪರ್ ಕ್ರೂಸರ್ ಬೈಕ್ ಗಂಟೆಗೆ 130 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಬ್ಯಾಟರಿ ಸಂಪೂರ್ಣ ಚಾರ್ಜ್ ಮಾಡಿಸಿದರೆ 200 ಕೀ.ಮೀ. ರೇಂಜ್ ವರೆಗೂ ಚಲಿಸಬಹುದಾಗಿದೆ. ಪ್ರಸ್ತುತ ಬ್ಯಾಟರಿ 10 ವರ್ಷಗಳ ವರೆಗೂ ಬಾಳ್ವಿಕೆ ಬರಲಿದೆ. ಅಂತೆಯೇ ಚಾರ್ಜ್ ಮಾಡಿಸಲು ಮೂರು ತಾಸು ತಗುಲಲಿದೆ. ಇದರಲ್ಲಿ ಗ್ರಾಹಕರ ಇಷ್ಟಾನುಸಾರವಾಗಿ ಕಸ್ಟಮೈಸ್ಡ್ ಮಾಡುವ ಅವಕಾಶವೂ ಇದೆ. ಒಟ್ಟಾರೆಯಾಗಿ ನಮನ್ ಪ್ರಯತ್ನವನ್ನು ಇಡೀ ದೇಶದ ಜನತೆಯು ಹೆಮ್ಮೆಪಡುವಂತಾಗಿದೆ.

Most Read Articles

Kannada
English summary
The Image displayed below is their first concept electric bike developed by Mr. Naman Chopra CEO of Rexnamo. Who has been building bikes from the tender age of 14 alongside his dad. However, Naman has just begin his venture with electric bikes.
Story first published: Friday, February 14, 2014, 11:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X