ಸುಜುಕಿ ಲೆಟ್ಸ್ ಸ್ಕೂಟರ್ ಬುಕ್ಕಿಂಗ್ ಆರಂಭ

Written By:

ಎರಡು ತಿಂಗಳುಗಳ ಹಿಂದೆ ಫೆಬ್ರವರಿಯಲ್ಲಿ ದೆಹಲಿಯಲ್ಲಿ ಸಾಗಿದ ಪ್ರತಿಷ್ಠಿತ ಆಟೋ ಎಕ್ಸ್ ಪೋ 2014 ವಾಹನ ಪ್ರದರ್ಶನ ಮೇಳದಲ್ಲಿ ಸುಜುಕಿ ಸಂಸ್ಥೆಯು ನೂತನ 110 ಸಿಸಿ ಆಟೋಮ್ಯಾಟಿಕ್ ಲೆಟ್ಸ್ ಸ್ಕೂಟರನ್ನು ಪ್ರದರ್ಶಿಸಿತ್ತು.

ಪ್ರಸ್ತುತ ಲೆಟ್ಸ್ ಸ್ಕೂಟರ್ ಬಿಡುಗಡೆಯು ಇದೇ ತಿಂಗಳಾಂತ್ಯದಲ್ಲಿ ನಡೆಯುವ ಸಂಭವವಿದೆ. ಇದರಂತೆ ಸುಜುಕಿ ವಿತರಕರು ನೂತನ ಸ್ಕೂಟರ್‌ಗಾಗಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ತೆರೆದುಕೊಂಡಿದೆ.

Suzuki

ಇದುವರೆಗೆ ಸುಜುಕಿ ಲೆಟ್ಸ್ ಸ್ಕೂಟರ್ ಬೆಲೆ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಹಾಗಿದ್ದರೂ ಸುಜುಕಿ 125 ಸಿಸಿ ಸ್ಕೂಟರ್‌ಗಳಾದ ಸ್ವಿಶ್ ಹಾಗೂ ಆಸ್ಸೆಸ್ ಮಾದರಿಗಿಂತಲೂ ಕಡಿಮೆಯಾಗುವ ಸಾಧ್ಯತೆಯಿದೆ. ವರದಿಗಳ ಪ್ರಕಾರ ನೂತನ 110 ಸಿಸಿ ಲೆಟ್ಸ್ ಸ್ಕೂಟರ್ 40,000 ರು.ಗಳ ಅಸುಪಾಸಿನಲ್ಲಿರಲಿದೆ.

ಹಗುರ ಭಾರದ ಲೆಟ್ಸ್ ಸ್ಕೂಟರ್, 110 ಸಿಸಿ ಏರ್ ಕೂಲ್ಡ್ ಫೋರ್ ಸ್ಟ್ರೋಕ್ ಎಂಜಿನ್ ಹೊಂದಿರಲಿದೆ. ಇದು ಕೇವಲ 100 ಕೆ.ಜಿ ಭಾರವನ್ನಷ್ಟೇ ಹೊಂದಿರುತ್ತದೆ. ಇದು ಉತ್ತಮ ಎಂಜಿನ್ ಕ್ಷಮತೆ ನೀಡುವಲ್ಲಿ ನೆರವಾಗಲಿದೆ. ಜಪಾನ್ ಮೂಲದ ಸುಜುಕಿ ಸಂಸ್ಥೆಯ ಪ್ರಕಾರ ಲೆಟ್ಸ್ ಸ್ಕೂಟರ್ ಪ್ರತಿ ಲೀಟರ್‌ಗೆ 63 ಕೀ.ಮೀ. ಮೈಲೇಜ್ ನೀಡಲಿದೆ.

ಅಂದ ಹಾಗೆ ಲೆಟ್ಸ್ ಪ್ರಯಾಣಿಕ ಸ್ಕೂಟರ್ ಮೇಲೆ ಸುಜುಕಿ ಭಾರಿ ನಿರೀಕ್ಷೆಯನ್ನಿಟ್ಟುಕೊಂಡಿದೆ. ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ ಸಾಧನೆಯನ್ನು ಲೆಟ್ಸ್ ಪುನರಾವರ್ತಿಸಿದರೆ ಇದು ದೇಶದಲ್ಲಿನ ಸುಜುಕಿ ಅದೃಷ್ಟವನ್ನೇ ಬದಲಾಯಿಸಿಕೊಳ್ಳಲಿದೆ. ಪ್ರಮುಖವಾಗಿಯೂ ಮಹಿಳಾ ಗ್ರಾಹಕರನ್ನು ಸುಜುಕಿ ಗುರಿಯಾಗಿರಿಸಿಕೊಳ್ಳುತ್ತಿದೆ. ವಾಹನೋದ್ಯಮದ ತಾಜಾ ಸುದ್ದಿಗಳಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ...

English summary
Suzuki had revealed their new 110cc automatic scooter, the Let's at the Auto Expo held in Greater Noida, Delhi in February 2014. They plan to launch the scooter around the end of this month.
Story first published: Monday, April 21, 2014, 11:54 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark