ಸುಜುಕಿ ಇನಾಝುಮಾ ಬೆಲೆಯಲ್ಲಿ ಭಾರಿ ಇಳಿಕೆ

Written By:

ಜಪಾನ್‌ನ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿರುವ ಸುಜುಕಿ, ಇತ್ತೀಚೆಗಷ್ಟೇ ಭಾರತದಲ್ಲಿ ಇನಾಝುಮಾ ಬೈಕನ್ನು ಲಾಂಚ್ ಮಾಡಿತ್ತು. ಈ ನಡುವೆ ಲೆಟ್ಸ್ ಸ್ಕೂಟರ್ ಹಾಗೂ ಬಹುನಿರೀಕ್ಷಿತ ಜಿಕ್ಸರ್ ಬೈಕನ್ನು ಅನಾವರಣಗೊಳಿಸಿತ್ತು.

ಇನಾಝುಮಾ ಮುಂಬೈ ಎಕ್ಸ್ ಶೋ ರೂಂ ದರ 3.15 ಲಕ್ಷ ರು.ಗಳಿಗೆ ಬಿಡುಗಡೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇನಾಝುಮಾ ಆವೃತ್ತಿಗೆ ಹೆಚ್ಚಿನ ದರ ಹೇರಲಾಗಿದೆಯೆಂಬ ತೀವ್ರ ಅಪವಾದ ಕೇಳಿ ಬಂದಿತ್ತು.

Suzuki Motorcycle

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸುಜುಕಿ, ಇನಾಝುಮಾ ಬೆಲೆಗಳಲ್ಲಿ ಗಣನೀಯವಾದ ಇಳಿಕೆ ತಂದಿದೆ. ವರದಿಗಳ ಪ್ರಕಾರ ಇನಾಝುಮಾ ದರಗಳಲ್ಲಿ ಬರೋಬ್ಬರಿ ಒಂದು ಲಕ್ಷ ರು.ಗಳಷ್ಟು ಇಳಿಕೆಯಾಗಿದೆ. ಹಾಗಿದ್ದರೂ ಪ್ರತಿಯೊಂದು ರಾಜ್ಯದಲ್ಲೂ ವಿಭಿನ್ನ ತೆರಿಗೆ ನೀತಿ ಜಾರಿಯಲ್ಲಿರುವುದರಿಂದ ಇನಾಝುಮಾ ದರ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರಲಿದೆ.

ಸುಜುಕಿ ಇನಾಝುಮಾ ಟ್ವಿನ್ 248 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಪಡೆದುಕೊಳ್ಳಲಿದೆ. ಇದು ಗರಿಷ್ಠ 26 ಅಶ್ವಶಕ್ತಿ (22 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

ಹೋಂಡಾ ಸಿಬಿಆರ್250ಆರ್ ಹಾಗೂ ಕೆಟಿಎಂ ಡ್ಯೂಕ್ 200 ಆಗಮನದೊಂದಿಗೆ 250 ಸಿಸಿ ವಿಭಾಗದಲ್ಲಿ ಪೈಪೋಟಿ ಹೆಚ್ಚುತ್ತಿದೆ. ಇನ್ನಷ್ಟೇ ಲಾಂಚ್ ಆಗಲಿರುವ ಯಮಹಾ ಆರ್25 ಮತ್ತು ಬಜಾಜ್ 200ಎಸ್‌ಎಸ್ ಇನ್ನು ಹೆಚ್ಚಿನ ಪೈಪೋಟಿಗೆ ಕಾರಣವಾಗಲಿದೆ.

English summary
The Japanese manufacturer Suzuki recently launched the Inazuma in India and followed it by showcasing a few other vehicles like the Lets scooter and Gixxer motorcycle. The Inazuma was launched with a price tag of INR 3,15,007 ex-showroom Mumbai.
Story first published: Monday, June 16, 2014, 15:58 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark