ಸದ್ಯದಲ್ಲೇ ಯಮಹಾದಿಂದ ಪರಿಷ್ಕೃತ ಎಫ್‌ಝಡ್-ಎಸ್ ಲಾಂಚ್

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಯಮಹಾ, ಇದೇ ಬರುವ ಜೂನ್ 30ರಂದು ಗ್ರಾಹಕರನ್ನು ಖುಷಿಪಡಿಸಲಿದೆ. ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲವಾದರೂ ವರದಿಗಳ ಪ್ರಕಾರ ಯಮಹಾ ಎಫ್‌ಝಡ್-ಎಸ್ ಪರಿಷ್ಕೃತ ಆವೃತ್ತಿ ಸದ್ಯದಲ್ಲೇ ಬಿಡುಗಡೆಯಾಗುವ ಸಂಭವವಿದೆ.

ಯಮಹಾದ ಹೊಸ ಎಫ್‌ಝಡ್-ಎಸ್ ಮೊದಲ ಬಾರಿಗೆ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿತ್ತು. ಈಗಾಗಲೇ ಹಲವು ಬಾರಿ ಕ್ಯಾಮೆರಾ ಕಣ್ಣುಗಳಿಗೆ ಸೆರೆ ಸಿಕ್ಕಿರುವ ಯಮಹಾದ ಈ ಮಾದರಿಯು ಹಲವಾರು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆಯಲಿದೆ.


ಮುಖ್ಯಾಂಶಗಳು:
  • ಆಕ್ರಮಣಕಾರಿ ಹಾಗೂ ಕ್ರೀಡಾತ್ಮಕ ಹೆಡ್‌ಲೈಟ್,
  • ಹೊಸ ಎಕ್ಸಾಸ್ಟ್, ಹೆಚ್ಚುವರಿ ಶೀಲ್ಡ್ ರಕ್ಷಣೆ,
  • ಇಂಧನ ಟ್ಯಾಂಕ್‌ನಲ್ಲಿ ತಾಜಾ ಹೊಸತಾದ ಏರ್ ಸ್ಕೂಪ್,
  • ಪರಿಷ್ಕೃತ ಟೈಲ್ ಲ್ಯಾಂಪ್,
  • ಸ್ಪೋರ್ಟಿ ನಂಬರ್ ಪ್ಲೇಟ್ ಹೋಲ್ಡರ್,
  • ಕ್ರೀಡಾತ್ಮಕ ವಿಭಜಿತ ಸೀಟು ವಿನ್ಯಾಸ,
  • ಎಲ್ಲ ಹೊಸತನದ ಡಿಜಿಟಲ್ ಕನ್ಸೋಲ್, (ಹೋಂಡಾ ಟ್ರಿಗರ್‌ಗೆ ಸಮಾನವಾದ)

Yamaha
ಹಾಗಿದ್ದರೂ ಒಂದು ಬೇಸರದ ಸಂಗತಿ ಏನೆಂದರೆ ಹಿಂದುಗಡೆ ಚಕ್ರ ಮಾತ್ರ 140 ಎಂಎಂನಿಂದ 120 ಎಂಎಂಗೆ ಇಳಿಕೆ ಮಾಡಲಾಗಿದೆ.

ಇನ್ನು ವಿಶೇಷತೆ ಏನೆಂದರೆ 2014 ಯಮಹಾ ಎಫ್‌ಝಡ್-ಎಸ್ ಫ್ಲೂಯಲ್ ಇಂಜೆಕ್ಟಡ್ ತಂತ್ರಜ್ಞಾನದೊಂದಿಗೆ ಶಕ್ತಿಶಾಲಿ 170 ಸಿಸಿ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ. ಇದು 18 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಡಲಿದೆ.

ಅಷ್ಟೇ ಎಫ್‌ಐ ತಂತ್ರಜ್ಞಾನವನ್ನು ಒಳಗೊಂಡಿರಿಲಿದ್ದು, ಇದು ಎಂಜಿನ್ ಉತ್ತಮ ನಿರ್ವಹಣೆಗೆ ಸಹಕಾರಿಯಾಗಿದೆ. ಅಂತಿಮವಾಗಿ ನೂತನ ಎಫ್‌ಝಡ್-ಎಸ್ ರು. 85,000ದಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಇದು ಪ್ರಮುಖವಾಗಿಯೂ ಸುಜುಕಿಯಿಂದ ಇನ್ನಷ್ಟೇ ಬಿಡುಗಡೆಗೊಳ್ಳಬೇಕಾಗಿರುವ ಜಿಕ್ಸರ್, ಟಿವಿಎಸ್ ಅಪಾಚಿ ಆರ್‌ಟಿಆರ್160, ಹೋಂಡಾ ಸಿಬಿ ಟ್ರಿಗರ್ ಹಾಗೂ ಹೀರೊ ಹಂಕ್ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

Most Read Articles

Kannada
English summary
Japanese two wheeler manufacturer is planning something special for 30th June, 2014. We believe Yamaha could launch a refreshed version of its FZ-S. The manufacturer has not confirmed the speculation and they have revealed it will be an all new chapter.
Story first published: Friday, June 27, 2014, 14:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X