ಜೂನಲ್ಲಿ ಯಮಹಾ ಮೆಜೆಸ್ಟಿ ಎಸ್ 125 ಸ್ಕೂಟರ್ ಲಾಂಚ್

By Nagaraja

ದೇಶಿಯ ಮಾರುಕಟ್ಟೆಯಲ್ಲಿ 125 ಸಿಸಿ ಸ್ಕೂಟರ್ ವಿಭಾಗ ಅಭಿವೃದ್ಧಿ ಸಾಧಿಸುತ್ತಿರುವಂತೆಯೇ ಪೈಪೋಟಿಯ ಅಲೆಯು ಜೋರಾಗಿ ಕಂಡುಬರುತ್ತಿದೆ. ಇತ್ತೀಚೆಗಷ್ಟೇ ದೇಶದ ಎರಡನೇ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಮೋಟಾರ್‌ಸೈಕಲ್ಸ್, ಆಕ್ಟಿವಾ 125 ಸಿಸಿ ಸ್ಕೂಟರನ್ನು ಲಾಂಚ್ ಮಾಡಿತ್ತು.

ಈ ಎಲ್ಲ ಬೆಳವಣಿಗೆಯನ್ನು ನಿಕಟವಾಗಿ ಗಮನಿಸುತ್ತಿರುವ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯೇ ಆಗಿರುವ ಯಮಹಾ, ಸಹ 125 ಸಿಸಿ ವಿಭಾಗದಲ್ಲಿ ಹೊಸ ಲಾಂಚ್ ಮಾಡುವ ಇರಾದೆ ಹೊಂದಿದೆ. ವರದಿಗಳ ಪ್ರಕಾರ ಯಮಹಾ ಮೆಜೆಸ್ಟಿ ಎಸ್ 125 ಪ್ರಸಕ್ತ ಸಾಲಿನಲ್ಲೇ ಅಂದರೆ ಜೂನ್ ವೇಳೆಗೆ ಬಿಡುಗಡೆಯಾಗಲಿದೆ.


ಇದರಂತೆ ಈ ನಗರ ಪ್ರದೇಶದ ಸ್ಕೂಟರನ್ನು ಅವಾರಣಗೊಳಿಸಲಾಗಿದೆ. ಆದರೆ ಈ ಸ್ಟೈಲಿಷ್ ಸ್ಕೂಟರ್ ಭಾರತ ಮಾರುಕಟ್ಟೆ ಪ್ರವೇಶಿಸಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಯಾಕೆಂದರೆ ಇದು ಎಲ್ಲ ಹಂತದಲ್ಲೂ ಆಕ್ಟಿವಾ 125 ಆವೃತ್ತಿಗಿಂತಲೂ ಪ್ರೀಮಿಯಂ ಆಗಿರಲಿದೆ.

ನೂತನ 125 ಸಿಸಿ ಸ್ಕೂಟರ್‌ಗೆ ಆಧುನಿಕ ಹಾಗೂ ಕ್ರೀಡಾತ್ಮಕ ವಿನ್ಯಾಸ ಕಲ್ಪಿಸುವುದರಲ್ಲಿ ಸಂಸ್ಥೆ ಯಶ ಕಂಡಿದೆ. ಇದು ದೊಡ್ಡದಾದ ಹೆಡ್‌ಲೈಟ್ ಬಹುತೇಕ ಮುಂಭಾಗವನ್ನು ಆವರಿಸಲಿದೆ. ಹಾಗೆಯೇ ಎಲ್‌ಇಡಿ ಹಾಗೂ ಟೈಲ್ ಲ್ಯಾಂಪ್‌ಗಳ ಸೇವೆ ಲಭ್ಯವಾಗಲಿದೆ. ಅಂದ ಹಾಗೆ ಯಮಹಾ ಮೆಜೆಸ್ಟಿ 125 ಸಿಸಿ ಸ್ಕೂಟರಲ್ಲಿ, 125 ಸಿಸಿ 4 ಸ್ಟ್ರೋಕ್ ಎಂಜಿನ್ ಆಳವಡಿಸಲಾಗಲಿದ್ದು, 11.9 ಅಶ್ವಶಕ್ತಿ (11.6 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಆಟೋಮ್ಯಾಟಿಕ್ ಸಿವಿಟಿ ಟ್ರಾನ್ಸ್‌ಮಿಷನ್ ಸಹ ಇರಲಿದೆ.

 Majesty S 125

ಮುಂದುಗಡೆ ಹಾಗೂ ಹಿಂದುಗಡೆ ಡಿಸ್ಕ್ ಬ್ರೇಕ್ ಸೌಲಭ್ಯವಿರಲಿದೆ (267ಎಂಎಂ, 245ಎಂಎಂ). ಅಂತೆಯೇ ಎದುರುಗಡೆ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಹಾಗೂ ಹಿಂದುಗಡೆ ಸ್ವಿನ್‌ಗ್ರಾಂ ಸಸ್ಪೆಷನ್ ಪಡೆಯಲಿದೆ. ಹಾಗಿದ್ದರೂ ಶಕ್ತಿಶಾಲಿ ಸ್ಕೂಟರ್ ಎಂದು ಗುರುತಿಸಿಕೊಳ್ಳಲಿರುವ ಯಮಹಾ ಎಸ್ 125, 148 ಕೆ.ಜಿಗಳಷ್ಟು ಭಾರ ಹೊಂದಿರಲಿದೆ. ಸಂಸ್ಥೆಯ ಪ್ರಕಾರ ಫುಲ್ ಫೇಸ್ ಹೆಲ್ಮೆಟನ್ನು ಇದರ ಸೀಟಿನಡಿಯಲ್ಲಿ ಇಡಬಹುದಾಗಿದೆ. ಹಾಗೆಯೇ 7.4 ಲೀಟರ್ ಇಂಧನ ಟ್ಯಾಂಕ್ ಪಡೆಯಲಿದ್ದು, ಮಿಡ್ ನೈಟ್ ಬ್ಲ್ಯಾಕ್, ಸಿಲ್ಕಿ ವೈಟ್ ಹಾಗೂ ಮ್ಯಾಟ್ ಟೈಟಾನ್‌ಗಳೆಂಬ ಮೂರು ಬಣ್ಣಗಳಲ್ಲಿ ಆಗಮನವಾಗಲಿದೆ.
Most Read Articles

Kannada
English summary
Yamaha will be offering an all new 125cc scooter which, will bring together style, fun as well as convenience
Story first published: Saturday, May 17, 2014, 12:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X