ಯಮಹಾ ರೇ ಝಡ್‌ಗೆ ಇಂಡಿಯಾ ಡಿಸೈನ್ ಮಾರ್ಕ್ ಪ್ರಶಸ್ತಿ

Written By:

ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ವಿನ್ಯಾಸದ ವಿಚಾರದಲ್ಲಿ ಯಮಹಾ ತನ್ನದೇ ಆದ ವಿಶಿಷ್ಟತೆಯನ್ನು ಕಾಪಾಡಿಕೊಂಡಿದೆ. ಇದೀಗ ಚೂಪಾದ ವಿನ್ಯಾಸ ಹೊಂದಿರುವ ರೇ ಝಡ್ ಸ್ಕೂಟರ್, ಇಂಡಿಯಾ ಡಿಸೈನ್ ಮಾರ್ಕ್ ಪ್ರಶಸ್ತಿಗೆ ಭಾಜನವಾಗಿದೆ.

ಇಂಡಿಯಾ ಡಿಸೈನ್ ಕೌನ್ಸಿಲ್ಸ್ ತೀರ್ಪುಗಾರರು ಕೆಲವೊಂದು ನಿರ್ದಿಷ್ಟ ಮಾನದಂಡಗಳಲ್ಲಿ ವಿಜೇತರನ್ನು ಘೋಷಿಸಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಯಮಹಾ ಮೋಟಾರು ಇಂಡಿಯಾ ಸೇಲ್ಸ್ ವ್ಯವಸ್ಥಾಪಕ ನಿರ್ದೇಶಕ ಮಸಕಿ ಅಸನೊ, ದೇಶದ ಗ್ರಾಹಕರಿಗೆ ತಕ್ಕಂತೆ ನಮ್ಮ ಎಂಜಿನಿಯರಿಂಗ್ ತಂಡವು ರೇ ಝಡ್ ಉತ್ಪನ್ನವನ್ನು ವಿನ್ಯಾಸಗೊಳಿಸಿದ್ದಾರೆ ಎಂದಿದ್ದಾರೆ.

ಪ್ರಸ್ತುತ ಪ್ರಶಸ್ತಿ ಬಂದಿರುವುದು ಇನ್ನಷ್ಟು ನಾವೀನ್ಯತೆಯಿಂದ ತುಂಬಿಕೊಂಡಿರುವ ಉತ್ಪನ್ನಗಳನ್ನು ನಿರ್ಮಿಸಲು ಸ್ಫೂರ್ತಿ ತುಂಬುವಂತಿದೆ ಎಂದಿದ್ದಾರೆ.

ಯಮಹಾ ರೇ ಸಿಂಗಲ್ ಸಿಲಿಂಡರ್ 113 ಸಿಸಿ ಏರ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 7.1 ಪಿಎಸ್ (8.1 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 47.735 ರು.ಗಳಾಗಿವೆ.

ಅಷ್ಟಕ್ಕೂ ನೀವು ಯಮಹಾ ರೇ ಝಡ್ ಮಾಲಿಕರೇ? ಅಥವಾ ಯಮಹಾ ಸ್ಕೂಟರ್, ಬೈಕ್‌ಗಳನ್ನು ಹೊಂದಿದ್ದಾರೆಯೇ? ಹಾಗಿದ್ದಲ್ಲಿ ಯಮಹಾ ವಿನ್ಯಾಸದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೆಳಗಡೆ ಕೊಟ್ಟಿರುವ ಕಾಮೆಂಟ್ ಬಾಕ್ಸ್‌ನಲ್ಲಿ ನಿಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿ.

English summary
The Ray Z is the more sportier version among the two and was recently awarded the India Design Mark title.
Story first published: Tuesday, May 13, 2014, 14:50 [IST]
Please Wait while comments are loading...

Latest Photos