ಬಜಾಜ್‌ನಿಂದ ಬರುತ್ತಿದೆ 150ಸಿಸಿ ಬೈಕ್; ಮೋಡಿ ಮಾಡಿತೇ?

Posted By:

ಅತಿ ಶೀಘ್ರದಲ್ಲೇ ಅತಿ ನೂತನ ಬಜಾಜ್ ಅವೆಂಜರ್ ಕ್ರೂಸರ್ ಬೈಕ್ ಬಿಡುಗಡೆ ಮಾಡುವ ಬಗ್ಗೆ ವರದಿ ಮಾಡಿರುತ್ತೇವೆ. ಈಗ ಮಗದೊಂದು ಖುಷಿ ಸುದ್ದಿ ಬಂದಿದ್ದು, ಬಜಾಜ್‌ನಿಂದ ಮಗದೊಂದು 150 ಸಿಸಿ ಬೈಕ್ ಗರಡಿಯಲ್ಲಿ ಸಿದ್ಧಗೊಳ್ಳುತ್ತಿದೆ.

Also Read: ಹಾರ್ಲೆ ಡೇವಿಡ್ಸನ್ ನಕಲು ಮಾಡಿತೇ ಹೊಸ ಅವೆಂಜರ್? ಮುಂದಕ್ಕೆ ಓದಿ

ಪ್ರಸ್ತುತ ಅವೆಂಜರ್ 220 ಸಿಸಿ ಮಾರುಕಟ್ಟೆಯಲ್ಲಿದೆ. ಈಗ ಈ ಸಾಲಿಗೆ ಅವೆಂಜರ್ 220 ಸ್ಟ್ರೀಟ್, ಅವೆಂಜರ್ 220 ಕ್ರೂಸ್ ಹಾಗೂ ಅವೆಂಜರ್ 150 ಸಿಸಿ ಬೈಕ್ ಗಳು ಸೇರಿಕೊಳ್ಳಲಿದೆ. ಇದರೊಂದಿಗೆ ಅವೆಂಜರ್ ಶ್ರೇಣಿಯ ಬೈಕ್ ಗಳು ಮತ್ತಷ್ಟು ಬಲಗೊಳ್ಳಲಿದೆ.

ಬಜಾಜ್ ಅವೆಂಜರ್ ಶ್ರೇಣಿಯ ಬೈಕ್ ಗಳು ಭಾರತಕ್ಕೆ

ಬಲ್ಲ ಮೂಲಗಳ ಪ್ರಕಾರ ಬಜಾಜ್ ಅವೆಂಜರ್ ಶ್ರೇಣಿಯ ಬೈಕ್ ಗಳು ಮುಂಬರುವ ಅಕ್ಟೋಬರ್ 27ರಂದು ಬಿಡುಗಡೆಯಾಗಲಿದೆ.

ಬಜಾಜ್ ಅವೆಂಜರ್ ಶ್ರೇಣಿಯ ಬೈಕ್ ಗಳು ಭಾರತಕ್ಕೆ

ಬಜಾಜ್ ಎಎಸ್150 ಬೈಕ್ ನಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಅವೆಂಜರ್ 150 ಬೈಕ್ ನಲ್ಲೂ ಬಳಕೆಯಾಗಲಿದೆ. ಇದರ 149 ಸಿಸಿ ಎಂಜಿನ್ 12.5 ಎನ್ ಎಂ ತಿರುಗುಬಲದಲ್ಲಿ 16.8 ಅಶ್ವಶಕ್ತಿ ಉತ್ಪಾದಿಸಲಿದ್ದು, 5 ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ.

ಬಜಾಜ್ ಅವೆಂಜರ್ ಶ್ರೇಣಿಯ ಬೈಕ್ ಗಳು ಭಾರತಕ್ಕೆ

ಸದ್ಯಕ್ಕೆ ಅವೆಂಜರ್ 150 ಹಾಗೂ 200 ಸಿಸಿ ವಿನ್ಯಾಸ ಬಗ್ಗೆ ಹೆಚ್ಚಿನ ಮಾಹಿತಿಗಳು ದೊರಕಿಲ್ಲ. ಹಾಗಿದ್ದರೂ ಸಾಂಪ್ರಾದಾಯಿಕ ಕ್ಲಾಸಿಕ್ ಕ್ರೂಸರ್ ವಿನ್ಯಾಸ ಶೈಲಿಯನ್ನು ಕಾಪಾಡಿಕೊಳ್ಳುವ ಸಾಧ್ಯತೆಯಿದೆ.

ಬಜಾಜ್ ಅವೆಂಜರ್ ಶ್ರೇಣಿಯ ಬೈಕ್ ಗಳು ಭಾರತಕ್ಕೆ

ಇನ್ನು ಬೆಲೆಯ ಬಗ್ಗೆ ಮಾತನಾಡವುದಾದ್ದಲ್ಲಿ ಬಜಾಜ್ ಅವೆಂಜರ್ 200 ಹಾಗೂ 150 ಆವೃತ್ತಿಗಳು ಅನುಕ್ರಮವಾಗಿ ಒಂದು ಲಕ್ಷ ಹಾಗೂ 75,000 ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಬಜಾಜ್ ಅವೆಂಜರ್ ಶ್ರೇಣಿಯ ಬೈಕ್ ಗಳು ಭಾರತಕ್ಕೆ

ಈ ಎಲ್ಲ ಬೆಳವಣಿಗೆಗಳು ದೀಪಾವಳಿ ಹಾಗೂ ನವರಾತ್ರಿ ಹಬ್ಬದ ಆವೃತ್ತಿಯ ವೇಳೆಯಲ್ಲಿ ವಾಹನ ಪ್ರೇಮಿಗಳಿಗೆ ಪರಿಪೂರ್ಣ ಕೊಡುಗೆಯಾಗಲಿದೆ.

Read more on ಬಜಾಜ್ bajaj
English summary
Bajaj To Launch Avenger 150cc In Street & Cruise Models
Story first published: Wednesday, October 21, 2015, 10:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark