ಗಮನಾರ್ಹ ಪ್ರದರ್ಶನ ಮುಂದುವರಿಸಿದ ಸಂತೋಷ್

Written By:

ದಕ್ಷಿಣ ಅಮೆರಿಕಾದಲ್ಲಿ ನಡೆಯುತ್ತಿರುವ 2015 ಡಕಾರ್ ರಾಲಿಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿರುವ ದೇಶದ ಹೆಮ್ಮೆಯ ಕನ್ನಡಿಗ ಹಾಗೂ ಬೆಂಗಳೂರು ಮೂಲದ ಸಿಎಸ್ ಸಂತೋಷ್, ಐದನೇ ಹಂತದ ರೇಸ್‌ನಲ್ಲೂ ಗಮನಾರ್ಹ ಸಾಧನೆ ಮಾಡುವ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಡಕಾರ್ ರಾಲಿಯಿಂದ ಬಂದಿರುವ ತಾಜಾ ಮಾಹಿತಿಯ ಪ್ರಕಾರ ಐದನೇ ಹಂತದಲ್ಲೂ 51ನೇ ಸ್ಥಾನವನ್ನು ಕಾಯ್ದುಕೊಂಡಿರುವ ಸಂತೋಷ್ ಸ್ಥಿರತೆಯ ಪ್ರದರ್ಶನವನ್ನು ಕಾಯ್ದುಕೊಂಡಿದ್ದಾರೆ.

ಸಂತೋಷ್ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿಯಿಲ್ಲದಿದ್ದರೆ ಇಲ್ಲಿ ನಾವು ಮಗದೊಮ್ಮೆ ಉಲ್ಲೇಖಿಸ ಬಯಸುತ್ತಿದ್ದು, ಪ್ರಖ್ಯಾತ ಹಾಗೂ ಅತ್ಯಂತ ಅಪಾಯಕಾರಿ ಡಕಾರ್ ರಾಲಿಯಲ್ಲಿ ಭಾಗವಹಿಸುತ್ತಿರುವ ಮೊಟ್ಟ ಮೊದಲ ಭಾರತೀಯನೆಂಬ ಗೌರವಕ್ಕೆ ಪಾತ್ರವಾಗಿದ್ದಾರೆ.

dakar rally

ಕೆಟಿಎಂ 450 ಬೈಕ್‌ನಲ್ಲಿ ಸಂತೋಷ್ ತಮ್ಮ ಡ್ರೈವಿಂಗ್ ಕೌಶಲ್ಯವನ್ನು ಮೆರೆಯುತ್ತಿದ್ದಾರೆ. ಕ್ರಿಕೆಟ್ ಪ್ರಿಯ ರಾಷ್ಟ್ರದಲ್ಲಿ ಮೋಟಾರು ಸ್ಪೋರ್ಟ್ಸ್ ಕ್ರೀಡೆಯನ್ನು ಆಯ್ದುಕೊಂಡಿರುವ ಸಂತೋಷ್ ಇಡೀ ದೇಶಕ್ಕೆ ಹೆಮ್ಮೆಯಾಗಿದ್ದಾರೆ.

ಜನವರಿ 4ರಂದು ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಿಂದ ಆರಂಭವಾಗಿರುವ ರೇಸ್ ಚೀಲಿ ಹಾಗೂ ಬೊಲಿವಿಯಾ ಕ್ರಮಿಸಿ ಮತ್ತೆ ಬ್ಯೂನಸ್ ಐರಿಸ್‌ನಲ್ಲಿ ಜನವರಿ 17ರಂದು ಕೊನೆಗೊಳ್ಳಲಿದೆ. ಒಟ್ಟು 13 ಹಂತಗಳಾಗಿ (ಸ್ಟೇಜ್) ಡಕಾರ್ ರಾಲಿ ಆಯೋಜನೆಯಾಗಲಿದೆ. ಇಲ್ಲಿ ಕಾರು ಬೈಕ್ ಸೇರಿದಂತೆ ಟ್ರಕ್ ಹಾಗೂ ಕ್ವಾಡ್ ರೇಸ್ ಸಹ ನಡೆಯುತ್ತಿದೆ.

ಮರಭೂಮಿ, ಪರ್ವತ ಶಿಖರ , ಅಟ್ಲಾಂಟಿಕ್ ಹಾಗೂ ಫೆಸಿಫಿಕ್ ಮಹಾಸಾಗರ ಕಿನಾರೆಯಲ್ಲಿ ಸುತ್ತುವರಿಯಲಿರುವ ಡಕಾರ್ ರಾಲಿಯಲ್ಲಿ ದಿನಕ್ಕೆ 800ರಿಂದ 900 ಕೀ.ಮೀ.ಗಳನ್ನು ಕ್ರಮಿಸಬೇಕಾಗುತ್ತದೆ. ಈ ಮೂಲಕ ಒಟ್ಟು 9000 ಕೀ.ಮೀ. ಉದ್ದಕ್ಕೂ ಸ್ಪರ್ಧೆ ನಡೆಯಲಿದೆ.

English summary
CS Santosh, the veteran racer who set his eyes for the Dakar Rally to prove the world that cricket is not the only thing in India, has finished stage 5 of the Dakar Rally 2015 in the 55th position. His overall standing is number 51.
Story first published: Friday, January 9, 2015, 16:09 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more