ಕೇರಳದಲ್ಲಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ

Posted By:

ರಾಜ್ಯದಲ್ಲಿ ದ್ವಿಚಕ್ರ ವಾಹನ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಶಿಫಾರಸು ಮಾಡುವ ಕುರಿತಂತೆ ಚರ್ಚೆ ಜಾರಿಯಲ್ಲಿರುವಂತೆಯೇ ಅತ್ತ ನೆರೆಯ ಕೇರಳ ರಾಜ್ಯದಲ್ಲಿ ಮಧ್ಯಂತರ ತೀರ್ಪು ಹೊರಡಿಸಿರುವ ಹೈಕೋರ್ಟ್, ಹಿಂಬದಿ ಸವಾರರಿಗೂ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಿದೆ.

2003ರಲ್ಲಿ ಕೇರಳ ಸರಕಾರ ವಿಧಿಸಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಮೂಲಕ ಈ ಮಹತ್ವದ ತೀರ್ಪನ್ನು ಕೇರಳ ಹೈಕೋರ್ಟ್ ನೀಡಿದೆ.

ಕೇರಳ ಹೆಲ್ಮೆಟ್ ಕಡ್ಡಾಯ

ಈ ಸಂಬಂಧ ಹೇಳಿಕೆ ಕೊಟ್ಟಿರುವ ಕೇರಳ ಸಾರಿಗೆ ಆಯುಕ್ತ ಟೊಮಿನ್ ಜೆ ತಚ್ಚಂಗೇರಿ, "ನ್ಯಾಯಾಲದ ಆದೇಶವನ್ನು ಜಾರಿಗೆ ತರಲು ಬೇಕಾಗಿರುವ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ" ತಿಳಿಸಿದ್ದಾರೆ.

ಕೇರಳದಲ್ಲಿ ದ್ವಿಚಕ್ರ ವಾಹನ ಹಿಂಬದಿ ಸವಾರರಿಗೂ ಹೆಲ್ಮೆಟ್ ಕ್ಡಡಾಯಗೊಳಿಸುವ ಬಗ್ಗೆ ಈ ಹಿಂದೆಯೇ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈಗ ನ್ಯಾಯಾಲಯ ಹೊರಡಿಸಿರುವ ಆದೇಶಕ್ಕೆ ಸಾರ್ವಜನಿಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಬೆಂಗಳೂರು ಪರಿಸ್ಥಿತಿ ಹೇಗಿದೆ?

ಸಾರ್ವಜನಿಕ ಹಿತದೃಷ್ಟಿ ಹಾಗೂ ರಸ್ತೆ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಸಾರಿಗೆ ಇಲಾಖೆಯು ರಾಜ್ಯ ಸರಕಾರದ ಅನುಮೋದನೆಗಾಗಿ ಹಿಂಬದಿ ಸವಾರರು ಹೆಲ್ಮೆಟ್ ಕಡ್ಡಾಯ ಬಳಕೆಯ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಒಮ್ಮೆ ರಾಜ್ಯ ಸರಕಾರದ ಅನುಮತಿ ದೊರಕಿದ ಬಳಿಕ ನಗರದೆಲ್ಲೆಡೆ ನೂತನ ನಿಯಮ ಜಾರಿಗೆ ಬರಲಿದೆ.

English summary
Helmets made mandatory for pillion riders in Kerala
Story first published: Wednesday, September 16, 2015, 13:15 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark