ಕ್ರೀಡಾ ಬೈಕ್ ಪ್ರಿಯರಿಗಾಗಿ ಹೀರೊ ಎಕ್ಸ್ ಟ್ರೀಮ್ ಸ್ಪೋರ್ಟ್ಸ್ ಲಾಂಚ್

Written By:

ಹೊಸ ಹೊಸ ಆಕ್ರಮಣಕಾರಿ ಶೈಲಿಯ ಉತ್ಪನ್ನಗಳನ್ನು ಬಿಡುಗಡೆ ಮಾಡುವುದರಲ್ಲಿ ತಲ್ಲೀನವಾಗಿರುವ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಕ್ರೀಡಾ ಬೈಕ್ ಪ್ರಿಯರಿಗಾಗಿ ಜನಪ್ರಿಯ ಎಕ್ಸ್ ಟ್ರೀಮ್ ಸ್ಪೋರ್ಟ್ಸ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಇದು ಸಾಮಾನ್ಯ ಎಕ್ಸ್ ಟ್ರೀಮ್ ಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿರಲಿದ್ದು, ಹೆಚ್ಚು ಕ್ರೀಡಾತ್ಮಕ ವಿನ್ಯಾಸವನ್ನು ಪಡೆದುಕೊಳ್ಳಲಿದೆ. ಪ್ರಸ್ತುತ ಬೈಕ್ ಸದ್ದಿಲ್ಲದೆ ಮಾರುಕಟ್ಟೆ ಪ್ರವೇಶಿಸಿದ್ದು, ಸಂಸ್ಥೆಯು ಮಾರಾಟ ಉತ್ತೇಜಿಸುವ ನಿರೀಕ್ಷೆಯಲ್ಲಿದೆ.

To Follow DriveSpark On Facebook, Click The Like Button
ಕ್ರೀಡಾ ಬೈಕ್ ಪ್ರಿಯರಿಗಾಗಿ ಹೀರೊ ಎಕ್ಸ್ ಟ್ರೀಮ್ ಸ್ಪೋರ್ಟ್ಸ್ ಲಾಂಚ್

ನೂತನ ಎಕ್ಸ್ ಟ್ರೀಮ್ ಸ್ಪೋರ್ಟ್ಸ್ ಬೈಕ್ ಅನ್ನು ಮೊದಲ ಬಾರಿಗೆ 2014ರಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಪರಿಚಯಿಸಲಾಗಿತ್ತು. ಇದು 149.2 ಸಿಸಿ ಏರ್ ಕೂಲ್ಡ್, 4 ಸ್ಟ್ರೋಕ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 15.2 ಅಶ್ವಶಕ್ತಿ (13.5 ಎನ್‌ಎಂ ತಿರುಗುಬಲ) ಉತ್ಪಾದಿಸಲಿದೆ. ಅಲ್ಲದೆ 4.7 ಸೆಕೆಂಡುಗಳಲ್ಲೇ ಗಂಟೆಗೆ 0-60 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಪಡೆದುಕೊಂಡಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ)

ಬೆಂಗಳೂರು: 71,729 ರು.

ದೆಹಲಿ: 72,725 ರು.

ಮುಂಬೈ: 73,194 ರು.

ಕೋಲ್ಕತ್ತಾ: 73,902 ರು.

ಚೆನ್ನೈ: 71,515 ರು.

ಗೇರ್ ಬಾಕ್ಸ್, ಚಾಸೀ

ಗೇರ್ ಬಾಕ್ಸ್, ಚಾಸೀ

ಕ್ಲಚ್: ಮಲ್ಟಿಪ್ಲೇಟ್ ವೆಟ್

ಗೇರ್ ಬಾಕ್ಸ್: 5 ಸ್ಪೀಡ್ ಕಾಸ್ಟಂಟ್ ಮೆಶ್

ಚಾಸೀ ವಿಧ: ಟ್ಯೂಬುಲರ್, ಡೈಮಂಡ್ ವಿಧ

ಸಸ್ಫೆಷನ್

ಸಸ್ಫೆಷನ್

ಮುಂಭಾಗ: ಟೆಲಿಸ್ಕಾಪಿಕ್ ಹೈಡ್ರಾಲಿಕ್ ವಿಧ

ಹಿಂಭಾಗ: ಆಯಾತಾಕಾರದ ಸ್ವಿಂಗ್ ಆರ್ಮ್ ಜೊತೆ 5 ವಿಧದಲ್ಲಿ ಹೊಂದಾಣಿಸಬಹುದಾದ ಗ್ಯಾಸ್ ರಿಸರ್ವಿಯರ್ ಸಸ್ಪೆಷನ್

ಆಯಾಮ

ಆಯಾಮ

ಉದ್ದ: 2100 ಎಂಎಂ

ಅಗಲ: 780 ಎಂಎಂ

ಎತ್ತರ: 1080 ಎಂಎಂ

ವೀಲ್ ಬೇಸ್: 1325 ಎಂಎಂ

ಗ್ರೌಂಡ್ ಕ್ಲಿಯರನ್ಸ್: 145 ಎಂಎಂ

ಕರ್ಬ್ ಭಾರ (ಡಿಸ್ಕ್/ಡ್ರಮ್): 146 ಕೆ.ಜಿ

ಕರ್ಬ್ ಭಾರ(ಡಿಸ್ಕ್/ಡಿಸ್ಕ್): 147 ಕೆ.ಜಿ

ವೈಶಿಷ್ಟ್ಯ

ವೈಶಿಷ್ಟ್ಯ

ತೋಳದ ಕಣ್ಣಿನಂತಹ ಹೆಡ್ ಲ್ಯಾಂಪ್,

ಹಿಂದುಗಡೆ ಅಗಲವಾದ ಟ್ಯೂಬ್ ಲೆಸ್ ಚಕ್ರ,

15.2 ಅಶ್ವಶಕ್ತಿ,

ಸ್ಟ್ರೀಟ್ ಫೈಟರ್ ನೋಟ ಮತ್ತು ಗ್ರಾಫಿಕ್ಸ್

ಬಣ್ಣಗಳು

ಬಣ್ಣಗಳು

ಫೀಯರಿ ರೆಡ್,

ಪ್ಯಾಂಥರ್ ಬ್ಲ್ಯಾಕ್,

ಪೈರೊ ಆರಂಜ್,

ಮೆರ್ಕ್ಯೂರಿಕ್ ಸಿಲ್ವರ್,

ಬ್ಲ್ಯಾಕ್ ಆ್ಯಂಡ್ ರೆಡ್

ಸುರಕ್ಷತೆ ಮತ್ತು ಅನುಕೂಲ

ಸುರಕ್ಷತೆ ಮತ್ತು ಅನುಕೂಲ

ಟ್ಯೂಬ್ ಲೆಸ್ ಚಕ್ರ,

ಹಿಂದುಗಡೆ ಅಗಲವಾದ ಚಕ್ರ,

ಡಿಜಿಟಲ್ ಅನಲಾಗ್ ಕನ್ಸೋಲ್ ಜೊತೆ ಸೈಡ್ ಸ್ಟ್ಯಾಂಡ್ ಇಂಡಿಕೇಟರ್,

ಡಿಸ್ಕ್ ಬ್ರೇಕ್

ಕ್ರೀಡಾ ಬೈಕ್ ಪ್ರಿಯರಿಗಾಗಿ ಹೀರೊ ಎಕ್ಸ್ ಟ್ರೀಮ್ ಸ್ಪೋರ್ಟ್ಸ್ ಲಾಂಚ್

'ಲೈವ್ ಆಫ್ ದಿ ಎಡ್ಜ್' ಎಂಬ ಘೋಷವ್ಯಾಕದೊಂದಿಗೆ ನೂತನ ಹೀರೊ ಎಕ್ಸ್ ಟ್ರೀಮ್ ಸ್ಪೋರ್ಟ್ಸ್ ಬೈಕ್ ನ ಪ್ರಚಾರವಾಗಲಿದೆ. ಈ ಅಭಿಯಾನವನ್ನು ಬಾಲಿವುಡ್ ನಟ ರಣಬೀರ್ ಕಪೂರ್ ನಡೆಸಿಕೊಡಲಿದ್ದಾರೆ.

English summary
Hero MotoCorp recently launched its new Passion Pro for the Indian market and they are now following it up with a second two-wheeler launch in the same month.
Story first published: Thursday, July 2, 2015, 12:42 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark