ನಿರ್ಮಾಣ ಸಾಮರ್ಥ್ಯ ಹೆಚ್ಚಿಸಲಿರುವ ಹೋಂಡಾ

Written By:

ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚು ಗ್ರಾಹಕ ಸ್ನೇಹಿ ಎನಿಸಿಕೊಂಡಿರುವ ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರ್‌ಸೈಕಲ್ಸ್ ಆಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಸಂಸ್ಥೆಯು 2016ರ ಬಳಿಕ ನಿರ್ಮಾಣ ಸಾಮರ್ಥ್ಯ ಹೆಚ್ಚುಸುವ ಗುರಿ ಹೊಂದಿದೆ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಹೋಂಡಾ ಅಧ್ಯಕ್ಷ ಹಾಗೂ ಸಿಇಒ ಆಗಿರುವ ಕೀಟಾ ಮುರಮಟ್ಸು, "ಈಗ ನಮ್ಮ ಮೂರು ಘಟಕಗಳ ನಿರ್ಮಾಣ ಸಾಮರ್ಥ್ಯ 4.6 ಮಿಲಿಯನ್‌ಗಳಿಷ್ಟಿದೆ. 2016ರಲ್ಲಿ ಗುಜರಾತ್‌ನಲ್ಲಿ ಹೊಸ ಘಟಕದಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗುವುದರೊಂದಿಗೆ ನಿರ್ಮಾಣ ಸಾಮರ್ಥ್ಯ 1.2 ಮಿಲಿಯನ್‌ಗಳಿಗೆ ಏರಿಕೆಯಾಗಲಿದೆ" ಎಂದಿದೆ.

To Follow DriveSpark On Facebook, Click The Like Button
honda india

ಇದಕ್ಕೂ ಮೊದಲು 2015-16ನೇ ಆರ್ಥಿಕ ಸಾಲಿನಲ್ಲಿ 15 ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ಸಂಸ್ಥೆ ಘೋಷಿಸಿತ್ತು. ಇವುಗಳಲ್ಲಿ ಏಳು ಹೊಚ್ಚ ಹೊಸ ಮಾದರಿಗಳು ಸೇರಿವೆ.

ಇದರಂತೆ ಸಂಸ್ಥೆಯು ಇತ್ತೀಚೆಗಷ್ಟೇ ಆಕ್ಟಿವಾ 3ಜಿ, 2015 ಡಿಯೋ, 125 ಸಿಬಿ ಶೈನ್ ಹಾಗೂ ಡ್ರೀಮ್ ಶ್ರೇಣಿಯ ಬೈಕ್‌ಗಳನ್ನು ಪರಿಚಯಿಸಿತ್ತು. ಅಲ್ಲದೆ ಐದು ಹೊಸ ಮಾದರಿಗಳನ್ನು ಅನಾವರಣಗೊಳಿಸಿತ್ತು.

English summary
Honda Motorcycle and Scooter India (HMSI) would raise the production capacity in 2016.
Story first published: Thursday, February 19, 2015, 17:53 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark