ರಿಯರ್ ಡಿಸ್ಕ್ ಬ್ರೇಕ್‌ನೊಂದಿಗೆ ಆಗಮನವಾಗಲಿರುವ ಸುಜುಕಿ ಜಿಕ್ಸರ್

Written By:

150 ಸಿಸಿ ಕ್ರೀಡಾ ಬೈಕ್ ವಿಭಾಗದಲ್ಲಿ ಅತ್ಯುತ್ತಮ ಮಾರಾಟ ಕಾಪಾಡಿಕೊಂಡಿರುವ ಜನಪ್ರಿಯ ಸುಜುಕಿ ಜಿಕ್ಸರ್ ಮುಂಬರುವ ಹಬ್ಬದ ಆವೃತ್ತಿಯಲ್ಲಿ ಮತ್ತಷ್ಟು ಸುರಕ್ಷಿತವೆನಿಸಿಕೊಳ್ಳಲಿದೆ. ಅದೇನೆಂದರೆ ಸುಜುಕಿ ಜಿಕ್ಸರ್ ಅತಿ ಶೀಘ್ರದಲ್ಲೇ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯದೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯಲಿದೆ.

ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ ಸುಜುಕಿ ಜಿಕ್ಸರ್ ಹಾಗೂ ಜಿಕ್ಸರ್ ಎಸ್‌ಎಫ್ ಮಾದರಿಯಲ್ಲಿ ರಿಯರ್ ಡಿಸ್ಕ್ ಬ್ರೇಕ್ ವೈಶಿಷ್ಟ್ಯ ಲಭ್ಯವಾಗಲಿದೆ. ಅಲ್ಲದೆ ಸಾಮಾನ್ಯ ಮಾದರಿಗಿಂತಲೂ ಸ್ವಲ್ಪ ದುಬಾರಿ ಎನಿಸಿಕೊಳ್ಳಲಿದೆ.

ಎಂಜಿನ್ ತಾಂತ್ರಿಕತೆ

  • 155 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್
  • 14.59 ಅಶ್ವಶಕ್ತಿ
  • 14 ಎನ್‌ಎಂ ತಿರುಗುಬಲ
  • 5 ಸ್ಪೀಡ್ ಗೇರ್ ಬಾಕ್ಸ್
To Follow DriveSpark On Facebook, Click The Like Button
ಸುಜುಕಿ ಜಿಕ್ಸರ್

ಮೊದಲ ಬಾರಿಗೆ ಬಿಡುಗಡೆಯಾದಾಗ ಸುಜುಕಿ ಜಿಕ್ಸರ್ ಮುಂಭಾಗದಲ್ಲಿ ಸಿಂಗಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಲಭ್ಯವಿತ್ತು. ಈಗ ರಿಯರ್ ಡಿಸ್ಕ್‌ನೊಂದಿಗೂ ಬಿಡುಗಡೆಯಾಗಲಿದೆ.

ಸಸ್ಪೆನ್ಷನ್

ಫ್ರಂಟ್: ಟೆಲಿಸ್ಕಾಪಿಕ್

ರಿಯರ್: ಸ್ವಿಂಗ್ ಆರ್ಮ್, ಮೊನೊ ಸಸ್ಫೆನ್ಷನ್

ಕರ್ಬ್ ಭಾರ: 135 ಕೆ.ಜಿ

ಇಂಧನ ಟ್ಯಾಂಕ್ ಸಾಮರ್ಥ್ಯ: 12 ಲೀಟರ್

ಆಯಾಮ

  • ಉದ್ದ: 2050 ಎಂಎಂ
  • ಅಗಲ: 785 ಎಂಎಂ
  • ಎತ್ತರ: 1030 ಎಂಎಂ
  • ಗ್ರೌಂಡ್ ಕ್ಲಿಯರನ್ಸ್: 160 ಎಂಎಂ
  • ಸೀಟು ಎತ್ತರ: 780 ಎಂಎಂ
English summary
Suzuki Gixxer & Gixxer SF Most Likely To Get Rear Disc Update Soon
Story first published: Monday, September 21, 2015, 12:58 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark