ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯದೊಂದಿಗೆ ಹೊಸ ಜಿಕ್ಸರ್ ಬಿಡುಗಡೆ

By Nagaraja

ಜಪಾನ್ ಮೂಲದ ಪ್ರಖ್ಯಾತ ದ್ವಿಚಕ್ರ ತಯಾರಿಕ ಸಂಸ್ಥೆ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಸ್‌ಎಂಐಪಿಎಲ್), ಭಾರತದಲ್ಲಿ ತನ್ನ ಜನಪ್ರಿಯ ಜಿಕ್ಸರ್ ಶ್ರೇಣಿಯ ಹೊಸ ವೆರಿಯಂಟನ್ನು ಬಿಡುಗಡೆಗೊಳಿಸಿದೆ.

ಸಂಸ್ಥೆಯು ಆಚರಿಸಿಕೊಳ್ಳುತ್ತಿರುವ 'ಜಿಕ್ಸರ್ ದಿನ'ದಂದೇ ಅತಿ ನೂತನ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯದ ಜಿಕ್ಸರ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ದೇಶದಲ್ಲಿರುವ ಎಲ್ಲ ಜಿಕ್ಸರ್ ಶ್ರೇಣಿಯ ಬೈಕ್ ಗಳಲ್ಲೂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯ ಲಭ್ಯವಾಗಲಿದೆ.

ಸುಜುಕಿ ಜಿಕ್ಸರ್ ರಿಯರ್ ಡಿಸ್ಕ್ ಬ್ರೇಕ್ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಸುಜುಕಿ ಜಿಕ್ಸರ್ ರಿಯರ್ ಡಿಸ್ಕ್ ಬ್ರೇಕ್ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಸುಜುಕಿ ಜಿಕ್ಸರ್ (ಐಚ್ಛಿಕ ರಿಯರ್ ಡಿಸ್ಕ್ ಬ್ರೇಕ್): 79,726 ರು.
  • ಸುಜುಕಿ ಜಿಕ್ಸರ್ (ಎಸ್‌ಎಫ್): 87,343 ರು.
  • ಸುಜುಕಿ ಜಿಕ್ಸರ್ ಮೊಟೊಜಿಪಿ ಎಡಿಷನ್: 88,857 ರು.
  •  ಸುಜುಕಿ ಜಿಕ್ಸರ್ (ಐಚ್ಛಿಕ ರಿಯರ್ ಡಿಸ್ಕ್ ಬ್ರೇಕ್)

    ಸುಜುಕಿ ಜಿಕ್ಸರ್ (ಐಚ್ಛಿಕ ರಿಯರ್ ಡಿಸ್ಕ್ ಬ್ರೇಕ್)

    ಲಶ್ ಗ್ರೀನ್/ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್, ಮೆಟ್ಯಾಲಿಕ್ ಟ್ರಿಟಾನ್ ಬ್ಲೂ/ಪಿಯರ್ಲ್ ಮಿರಾಜ್ ವೈಟ್ ಮತ್ತು ಕ್ಯಾಂಡಿ ಸೆನೊಮಾ ರೆಡ್/ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಬಣ್ಣಗಳನ್ನು ಒಳಗೊಂಡಿರುವ ಐಚ್ಛಿಕ ಜಿಕ್ಸರ್ ಡಿಸ್ಕ್ ಬ್ರೇಕ್ ಆವೃತ್ತಿಯು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 79,726 ರು.ಗಳಷ್ಟು ದುಬಾರಿಯೆನಿಸಲಿದೆ.

    ಸುಜುಕಿ ಜಿಕ್ಸರ್ (ಎಸ್‌ಎಫ್)

    ಸುಜುಕಿ ಜಿಕ್ಸರ್ (ಎಸ್‌ಎಫ್)

    ಅದೇ ಹೊತ್ತಿಗೆ ಪಿಯರ್ಲ್ ಮಿರಾಜ್ ರೆಡ್ ಮತ್ತು ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಬಣ್ಣವನ್ನು ಹೊಂದಿರುವ ಜಿಕ್ಸರ್ ಎಸ್ ಎಫ್ ರಿಯರ್ ಡಿಸ್ಕ್ ಬ್ರೇಕ್ ಸ್ಟ್ಯಾಂಡರ್ಡ್ ಆವೃತ್ತಿಯು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 87,343 ರು.ಗಳಷ್ಟು ಬೆಲೆ ಬಾಳುತ್ತದೆ.

    ಸುಜುಕಿ ಜಿಕ್ಸರ್ ಮೊಟೊಜಿಪಿ ಎಡಿಷನ್

    ಸುಜುಕಿ ಜಿಕ್ಸರ್ ಮೊಟೊಜಿಪಿ ಎಡಿಷನ್

    ಅಂತೆಯೇ ಮೆಟ್ಯಾಲಿಕ್ ಟ್ರಿಟಾನ್ ಬ್ಲೂ ಬಣ್ಣವನ್ನು ಹೊಂದಿರುವ ಜಿಕ್ಸರ್ ಮೊಟೊಜಿಪಿ ಎಡಿಷನ್ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 88,857 ರು.ಗಳಷ್ಟು ದುಬಾರಿಯೆನಿಸಲಿದೆ.

    ಎಂಜಿನ್, ಗೇರ್ ಬಾಕ್ಸ್

    ಎಂಜಿನ್, ಗೇರ್ ಬಾಕ್ಸ್

    154.9 ಸಿಸಿ ಸಿಂಗಲ್ ಸಿಲಿಂಡರ್ ಎಸ್‌ಒಎಚ್‌ಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿರುವ ಸುಜುಕಿ ಜಿಕ್ಸರ್ 14 ಎನ್ ಎಂ ತಿರುಗುಬಲದಲ್ಲಿ 14.6 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ 5 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

    ಎಸ್‌ಇಪಿ ತಂತ್ರಜ್ಞಾನ

    ಎಸ್‌ಇಪಿ ತಂತ್ರಜ್ಞಾನ

    ಸುಜುಕಿ ಇಕೊ ನಿರ್ವಹಣೆ (Suzuki Eco Performance) ತಂತ್ರಜ್ಞಾನ ಇದರಲ್ಲಿ ಆಳವಡಿಸಲಾಗಿದ್ದು, ಗರಿಷ್ಠ ಇಂಧನ ಕ್ಷಮತೆ ನೀಡಲು ಸಹಕಾರಿಯಾಗಲಿದೆ.

    ವಿಶೇಷತೆ

    ವಿಶೇಷತೆ

    • ಏರೋಡೈನಾಮಿಕ್ ಸ್ಪೋರ್ಟ್ಸ್ ಫೇರಿಂಗ್,
    • ಸ್ಟೈಲಿಷ್ ಎಲ್ ಇಡಿ ಟೈಲ್ ಲ್ಯಾಂಪ್,
    • 7 ವಿಧಗಳಲ್ಲಿ ಹೊಂದಾಣಿಸಬಹುದಾದ ರಿಯರ್ ಮೊನೊ ಶಾಕ್ ಸಸ್ಪೆನ್ಷನ್,
    • ವಿಶೇಷತೆ

      ವಿಶೇಷತೆ

      • ಸ್ಮಾರ್ಟ್ ಡಿಜಿಟಲ್ ಇನ್ಸ್ಟ್ರುಮೆಂಟ್ (ಗೇರ್ ಸ್ಥಾನ, ಆರ್ ಪಿಎಂ ಇಂಡಿಕೇಟರ್),
      • ಕ್ಲಿಯರ್ ಲೆನ್ಸ್ ಇಂಡಿಕೇಟರ್,
      • ಅಲ್ಯೂಮಿನಿಯಂ ಮಫ್ಲರ್ ಕವರ್,
      • ಎಸ್ ಇಪಿ 155 ಸಿಸಿ ಎಂಜಿನ್,
      • ಸಸ್ಪೆನ್ಷನ್, ಟೈಲ್ ಲೈಟ್

        ಸಸ್ಪೆನ್ಷನ್, ಟೈಲ್ ಲೈಟ್

        ಮುಂಭಾಗ: ಟೆಲಿಸ್ಕಾಪಿಕ್

        ಹಿಂಭಾಗ: ಸ್ವಿಂಗ್ ಆರ್ಮ್, ಮೊನೊ ಸಸ್ಪೆನ್ಷನ್

        ಟೈಲ್ ಲೈಟ್: ಎಲ್ ಇಡಿ
        ಆಯಾಮ

        ಆಯಾಮ

        • ಉದ್ದ: 2050 ಎಂಎಂ
        • ಅಗಲ: 785 ಎಂಎಂ
        • ಎತ್ತರ: 1085 ಎಂಎಂ
        • ಗ್ರೌಂಡ್ ಕ್ಲಿಯರನ್ಸ್: 160 ಎಂಎಂ
        • ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯದೊಂದಿಗೆ ಹೊಸ ಜಿಕ್ಸರ್ ಬಿಡುಗಡೆ
          • ಸೀಟು ಎತ್ತರ: 780 ಎಂಎಂ
          • ಕರ್ಬ್ ಭಾರ: 139 ಕೆ.ಜಿ
          • ಇಂಧನ ಟ್ಯಾಂಕ್ ಸಾಮರ್ಥ್ಯ: 12 ಲೀಟರ್
          • ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯದೊಂದಿಗೆ ಹೊಸ ಜಿಕ್ಸರ್ ಬಿಡುಗಡೆ

            ದೆಹಲಿಯಲ್ಲಿ ನಡೆದ ಬಿಡುಗಡೆ ಸಮಾರಂಭದ ವೇಳೆ ವಿಶ್ವ ಶ್ರೇಷ್ಠ ಫ್ರೀಸ್ಟೈಲ್ ಚಾಲಕ ಅರಾಸ್ ಗಿಬಿಝಾ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿರುವುದು ವಿಶೇಷ ಆಕರ್ಷಕಣೆಗೆ ಪಾತ್ರವಾಗಿತ್ತು.

            ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯದೊಂದಿಗೆ ಹೊಸ ಜಿಕ್ಸರ್ ಬಿಡುಗಡೆ

            ಲೆಜೆಂಡರಿ ಜಿಎಸ್‌ಎಕ್ಸ್-ಆರ್ ಶ್ರೇಣಿಯ ರೇಸ್ ಬೈಕ್ ಗಳ ಪರಂಪರೆಯನ್ನು ಮೆಲುಕು ಹಾಕುತ್ತಿರುವ ಜಿಕ್ಸರ್, ಈಗ ಹಿಂಬದಿಯಲ್ಲೂ ಡಿಸ್ಕ್ ಬ್ರೇಕ್ ಸೌಲಭ್ಯದೊಂದಿಗೆ ಮತ್ತಷ್ಟು ಸುರಕ್ಷಿತವೆನಿಸಿದೆ.

            ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯದೊಂದಿಗೆ ಹೊಸ ಜಿಕ್ಸರ್ ಬಿಡುಗಡೆ

            ಡಿಸ್ಕ್ ಬ್ರೇಕ್ ನಿಂದ ಹೆಚ್ಚು ಸ್ಥಿರತೆಯು ಪ್ರದಾನವಾಗಲಿದ್ದು, ಸವಾರನಿಗೆ ಗಾಡಿ ಮೇಲೆ ಹೆಚ್ಚು ನಿಯಂತ್ರಣ ಸಿಗಲಿದೆ.

            ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯದೊಂದಿಗೆ ಹೊಸ ಜಿಕ್ಸರ್ ಬಿಡುಗಡೆ

            ಕೆಲವೇ ಸಮಯಗಳಲ್ಲಿ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಜಿಕ್ಸರ್ ಸ್ಟ್ರೀಟ್ ಸ್ಪೋರ್ಟ್ ಬೈಕ್, ಯುವ ಗ್ರಾಹಕರಲ್ಲಿ ಹೆಚ್ಚು ಉತ್ಸಾಹಕ್ಕೆ ಕಾರಣವಾಗಿದೆ.

            ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯದೊಂದಿಗೆ ಹೊಸ ಜಿಕ್ಸರ್ ಬಿಡುಗಡೆ

            ಸುಜುಕಿ ಜಿಕ್ಸರ್ ಮತ್ತು ಜಿಕ್ಸರ್ ಎಸ್ ಎಫ್ ಮಾಲಿಕರು ಒಟ್ಟು ಸೇರಿ ಜಿಕ್ಸರ್ ದಿನವನ್ನು ಆಚರಿಸುತ್ತಿರುವುದು ಮಗದೊಂದು ಆಕರ್ಷಣೆಯಾಗಿದೆ.

            ಪ್ರತಿಸ್ಪರ್ಧಿಗಳು

            ಪ್ರತಿಸ್ಪರ್ಧಿಗಳು

            ಹೋಂಡಾ ಸಿಬಿ ಹಾರ್ನೆಟ್ 160ಆರ್, ಬಜಾಜ್ ಪಲ್ಸರ್ ಎಎಸ್ 150, ಹೀರೊ ಎಕ್ಸ್ ಟ್ರೀಮ್ ಮತ್ತು ಯಮಹಾ ಆರ್15 ಬೈಕ್ ಗಳಿಗೆ ಜಿಕ್ಸರ್ ಪ್ರತಿಸ್ಪರ್ಧಿಯಾಗಲಿದೆ.


Most Read Articles

Kannada
English summary
Suzuki Gixxer With Rear Disc Brake Launched, Prices Start At Rs. 79,726
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X