ಕಾಯುವಿಕೆ ಅಂತ್ಯ; ಸುಜುಕಿ ಜಿಕ್ಸರ್ ಎಸ್ ಎಫ್ ನಾಳೆ ಬಿಡುಗಡೆ

Written By:

ಕಾಯುವಿಕೆ ಅಂತ್ಯಗೊಂಡಿದ್ದು, ನೂತನ ಜಿಕ್ಸರ್ ಎಸ್ ಎಫ್ ನಾಳೆ (ಮಂಗಳವಾರ, ಎಪ್ರಿಲ್ 06, 2015) ಬಿಡುಗಡೆಯಾಗಲಿದೆ. ಇದು ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಸುಜುಕಿಯಿಂದ ದೇಶದಲ್ಲಿ ಬಿಡುಗಡೆಯಾಗುತ್ತಿರುವ ಎರಡನೇ ಜಿಕ್ಸರ್ ಮಾದರಿಯಾಗಿರಲಿದೆ.

ಇದಕ್ಕೂ ಮೊದಲು ಜಿಕ್ಸರ್ 153 ಸಿಸಿ ಮಾದರಿಯನ್ನು ಬಿಡುಗಡೆಗೊಳಿಸಿದ್ದ ಸುಜುಕಿ ಭಾರಿ ಯಶ ಸಾಧಿಸಿತ್ತು. ಇದರ ಮುಂದುವರಿದ ಭಾಗವೆಂಬಂತೆ ಸಂಪೂರ್ಣ ಫೇರಿಂಗ್ ಮಾದರಿಯು ಮಾರುಕಟ್ಟೆ ಪ್ರವೇಶವಾಗುತ್ತಿದೆ.

suzuki gixxer sf

ನೆಕ್ಡ್ ಸ್ಟ್ರೀಟ್ ಫೈಟರ್ ಮೋಟಾರ್ ಸೈಕಲ್ ತಳಹದಿಯಲ್ಲಿ ನಿರ್ಮಾಣವಾಗಿರುವ ಹೊಸ ಜಿಕ್ಸರ್ ಎಸ್ ಎಫ್ ಬೈಕ್ 154.9 ಸಿಸಿ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 14.59 ಅಶ್ವಶಕ್ತಿ (24 ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಗೇರ್ ಬಾಕ್ಸ್ ಸಹ ಇದರಲ್ಲಿರಲಿದೆ.

ಇತರ ಪ್ರತಿಸ್ಪರ್ಧಿಗಳನ್ನು ಹೋಲಿಸಿದಾಗ ಸುಜುಕಿ ನೂತನ ಜಿಕ್ಸರ್ ಬೈಕ್ ಸ್ಪರ್ಧಾತ್ಮಕ ಬೆಲೆಗಳಲ್ಲಿ ಅತಿ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ನೂತನ ಫೇರಿಂಗ್ ವರ್ಷನ್ ಮೂಲಕವೂ ಇದನ್ನೇ ಮುಂದುವರಿಸಿಕೊಂಡು ಹೋಗುವ ಇರಾದೆಯನ್ನು ಸಂಸ್ಥೆ ಹೊಂದಿದೆ.

English summary
Japanese two-wheeler manufacturer, Suzuki will be launching a fully-faired motorcycle. They have christened this new product as the ‘Gixxer SF' and will be launching it on 7th April, 2015.
Story first published: Monday, April 6, 2015, 10:19 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark