ಶೀಘ್ರದಲ್ಲೇ ಯಮಹಾ ಎನ್ ಮ್ಯಾಕ್ಸ್ ಶಕ್ತಿಶಾಲಿ ಸ್ಕೂಟರ್ ಅನಾವರಣ

Written By:

ಅತಿ ಶೀಘ್ರದಲ್ಲೇ ಯಮಹಾದ ಬಹುನಿರೀಕ್ಷಿತ ಎನ್ ಮ್ಯಾಕ್ಸ್ ಸ್ಕೂಟರ್ ಭಾರತದಲ್ಲಿ ಅನಾವರಣಗೊಳ್ಳಲಿದೆ. ಈ ಮೂಲಕ ಭಾರತದಲ್ಲಿ ತನ್ನ ಸಾನಿಧ್ಯವನ್ನು ಮತ್ತಷ್ಟು ಗಟ್ಟಿಪಡಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ.

ನಿಮ್ಮ ಮಾಹಿತಿಗಾಗಿ, ಯಮಹಾ ಎನ್ ಮ್ಯಾಕ್ಸ್ ಅತ್ಯಂತ ಶಕ್ತಿಶಾಲಿ ಸ್ಕೂಟರ್ ಆಗಿರಲಿದ್ದು, 150 ಸಿಸಿ ಎಂಜಿನ್ ಬಳಕೆಯಾಗಲಿದೆ. ಇದು 14 ಎನ್‌ಎಂ ತಿರುಗುಬಲದಲ್ಲಿ 15 ಅಶ್ವಶಕ್ತಿ ಉತ್ಪಾದಿಸಲಿದೆ. ಜೊತೆಗೆ ಸಿವಿಟಿ ಗೇರ್ ಬಾಕ್ಸ್ ಸಹ ಇರಲಿದೆ.

ಯಮಹಾ ಎನ್ ಮ್ಯಾಕ್ಸ್

ಇವೆಲ್ಲದರ ಜೊತೆಗೆ 13 ಇಂಚುಗಳ ಅಲಾಯ್ ವೀಲ್, ರಿಯರ್ ಡಿಸ್ಕ್ ಬ್ರೇಕ್ ಹಾಗೂ ಸ್ಪೋಕ್ಡ್ ಹೆಡ್ ಲ್ಯಾಂಪ್ ಹೊಸ ಯಮಹಾ ಎನ್ ಮ್ಯಾಕ್ಸ್ ಸ್ಕೂಟರ್ ನ ವಿಶಿಷ್ಟತೆಯಾಗಿರಲಿದೆ.

ಯಮಹಾ ಎನ್ ಮ್ಯಾಕ್ಸ್

ಮುಂದಿನ ವರ್ಷಾರಂಭದಲ್ಲಿ ರಾಷ್ಟ್ರ ರಾಜಧಾನಿ ನವದಹಲಿಯಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲಿ ಯಮಹಾ ಎನ್ ಮ್ಯಾಕ್ಸ್ ಪವರ್ ಫುಲ್ ಸ್ಕೂಟರ್ ಪ್ರದದರ್ಶನಗೊಳ್ಳುವ ನಿರೀಕ್ಷೆಯಿದೆ. ಪ್ರಸ್ತುತ ಸಂಸ್ಥೆಯು ಫಾಸಿನೊ, ಆಲ್ಪಾ, ರೇ ಹಾಗೂ ರೇ ಝಡ್ ಗಳಂತಹ ಜನಪ್ರಿಯ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

English summary
Japanese two-wheeler maker Yamaha will unveil the N Max scooter in India soon, to strengthen its presence in the scooter segment, which is fast growing in India.
Story first published: Friday, July 24, 2015, 7:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark