ಭಾರತದಲ್ಲಿ 31 ಲಕ್ಷ ದುಬಾರಿಯ ಶ್ರೀಮಂತ ಬೈಕ್ ಬಿಡುಗಡೆ; ಅಂತದ್ದೇನಿದೆ?

ಇಂಡಿಯನ್ ಮೋಟಾರ್ ಸೈಕಲ್ ಮಗದೊಂದು ದುಬಾರಿ ಬೈಕ್ ಭಾರತದಲ್ಲಿ ಬಿಡುಗಡೆಗೊಳಿಸಿದೆ.

By Nagaraja

ಪೊಲರಿಸ್ ಇಂಡಿಯಾ ಪ್ರೈಮೇಟ್ ಲಿಮಿಟೆಡ್ ಭಾಗವಾಗಿರುವ ಅಮೆರಿಕದ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ಇಂಡಿಯನ್ ಮೋಟಾರ್ ಸೈಕಲ್, ಭಾರತದಲ್ಲಿ ಅತಿ ನೂತನ ಸ್ಪ್ರಿಂಗ್ ಫೀಲ್ಡ್ ಟೂರರ್ ಬೈಕ್ ಬಿಡುಗಡೆಗೊಳಿಸಿದೆ. ಇದರೊಂದಿಗೆ ದೇಶದಲ್ಲಿರುವ ತನ್ನ ಶ್ರೇಣಿಯ ಬೈಕ್ ಗಳನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ.

ಭಾರತದಲ್ಲಿ 31 ಲಕ್ಷ ದುಬಾರಿಯ ಬೈಕ್ ಬಿಡುಗಡೆ; ಅಂತದ್ದೇನಿದೆ?

ನೂತನ ಇಂಡಿಯನ್ ಮೋಟಾರ್ ಸೈಕಲ್ ಸ್ಪ್ರಿಂಗ್ ಫೀಲ್ಡ್ ಗುರ್ಗಾಂವ್ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 31.07 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ. ತನ್ಮೂಲಕ ದೇಶದ ಅತಿ ದುಬಾರಿ ಬೈಕ್ ಗಳ ಸಾಲಿಗೆ ಸೇರ್ಪಡೆಗೊಂಡಿದೆ.

ಭಾರತದಲ್ಲಿ 31 ಲಕ್ಷ ದುಬಾರಿಯ ಬೈಕ್ ಬಿಡುಗಡೆ; ಅಂತದ್ದೇನಿದೆ?

ಆಸಕ್ತ ಗ್ರಾಹಕರು ತಮ್ಮ ನೆಚ್ಚಿನ ಬೈಕ್ ಗಾಗಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.ಇದು ಅತಿ ವಿಶಿಷ್ಟವಾದ ಸ್ಟೀಲ್ ಗ್ರೇ/ಬರ್ಗಂಡಿ ಮತ್ತು ಸ್ಪ್ರಿಂಗ್ ಫೀಲ್ಡ್ ಬ್ಲೂ/ಸ್ಟಾರ್ ಸಿಲ್ವರ್ ಮೆಟ್ಯಾಲಿಕ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಭಾರತದಲ್ಲಿ 31 ಲಕ್ಷ ದುಬಾರಿಯ ಬೈಕ್ ಬಿಡುಗಡೆ; ಅಂತದ್ದೇನಿದೆ?

ನೂತನ ಇಂಡಿಯನ್ ಸ್ಪ್ರಿಂಗ್ ಫೀಲ್ಡ್, ಥಂಡರ್ ಸ್ಟ್ರೋಕ್ 111 ಎಂಜಿನ್ ನಿಂದ (1,811 ಸಿಸಿ) ನಿಯಂತ್ರಿಸಲ್ಪಡಲಿದ್ದು 138.9 ಎನ್ ಎಂ ತಿರುಗುಬಲವನ್ನು ನೀಡಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಭಾರತದಲ್ಲಿ 31 ಲಕ್ಷ ದುಬಾರಿಯ ಬೈಕ್ ಬಿಡುಗಡೆ; ಅಂತದ್ದೇನಿದೆ?

ನೂತನ ಚಾಸೀ, ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಮತ್ತು ಏರ್ ಹೊಂದಾಣಿಕೆಯ ರಿಯರ್ ಸಿಂಗಲ್ ಶಾಕ್ ಜೊತೆ 11.4 ಸೆಂಟಿಮೀಟರ್ ಟ್ರಾವೆಲ್ ಸಸ್ಪೆನ್ಷನ್ ವ್ಯವಸ್ಥೆಯನ್ನು ಗಿಟ್ಟಿಸಿಕೊಳ್ಳಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಎಬಿಎಸ್,

ಕಾಸ್ಟ್ ಅಲ್ಯೂಮಿನಿಯಂ ಫ್ರೇಮ್ ಜೊತೆ ಇಂಟೇಗ್ರೇಟಡ್ ಏರ್ ಬಾಕ್ಸ್,

ಕ್ರೂಸ್ ಕಂಟ್ರೋಲ್,

ಫ್ರಂಟ್ ಆಂಡ್ ರಿಯರ್ ಹೈವೇ ಬಾರ್ಸ್,

ಇಂಡಿಯನ್ ಸ್ಕ್ರಿಪ್ಟ್ ಟ್ಯಾಂಕ್ ಗೇಜ್,

ಭಾರತದಲ್ಲಿ 31 ಲಕ್ಷ ದುಬಾರಿಯ ಬೈಕ್ ಬಿಡುಗಡೆ; ಅಂತದ್ದೇನಿದೆ?

ಕೀಲೆಸ್ ಎಂಟ್ರಿ,

ಕ್ವಿಕ್ ರಿಲೀಸ್ ವಿಂಡ್ ಶೀಲ್ಡ್,

ಕ್ವಿಕ್ ರಿಲೀಸ್ ಹಾರ್ಡ್ ಸ್ಯಾಡಲ್ ಬ್ಯಾಗ್,

ಟೈರ್ ಪ್ರೆಶರ್ ಮಾನಿಟರಿಂಗ್,

ಹೊಂದಾಣಿಸಬಹುದಾದ ಫ್ಲೂರ್ ಬೋರ್ಡ್

ಭಾರತದಲ್ಲಿ 31 ಲಕ್ಷ ದುಬಾರಿಯ ಬೈಕ್ ಬಿಡುಗಡೆ; ಅಂತದ್ದೇನಿದೆ?

ಟ್ಯಾಂಕ್ ಮೌಂಟೆಡ್ ಎಲೆಕ್ಟ್ರಾನಿಕ್ ಸ್ಪೀಡೋಮೀಟರ್ ಜೊತೆ ಓಡೋಮೀಟರ್,

ಡ್ಯುಯಲ್ ಟ್ರಿಪ್ ಮೀಟರ್,

ಡಿಜಿಟಲ್ ಟ್ಯಾಕೋಮೀಟರ್,

ಆ್ಯಂಬಿಯಂಟ್ ಏರ್ ತಾಪಮಾನ,

ಫ್ಯೂಯಲ್ ರೇಂಜ್

ಭಾರತದಲ್ಲಿ 31 ಲಕ್ಷ ದುಬಾರಿಯ ಬೈಕ್ ಬಿಡುಗಡೆ; ಅಂತದ್ದೇನಿದೆ?

ಸರಾಸರಿ ಇಂಧನ ಕ್ಷಮತೆ

ಬ್ಯಾಟರಿ ವೋಲ್ಟೇಜ್

ಗೇರ್ ಸ್ಥಾನ ಡಿಸ್ ಪ್ಲೇ

ರಿಯರ್ ಟೈಮ್ ಕ್ಲಾಕ್

ವೆಹಿಕಲ್ ಟ್ರಬಲ್ ಕೋಡ್ ರೀಡ್ ಔಟ್

ಹೀಟಡ್ ಗ್ರಿಪ್ ಲೆವೆಲ್

ಲೊ ಎಂಜಿನ್ ಒಯಿಲ್ ಪ್ರೆಶರ್

9 ಎಲ್ ಇಡಿ ಟೆಲ್ ಟೇಲ್ ಇಂಡಿಕೇಟರ್

9 ಎಲ್ ಇಡಿ ಟೆಲ್ ಟೇಲ್ ಇಂಡಿಕೇಟರ್

ಹೈ ಬೀಮ್, ಚಾಸೀ ಫಾಲ್ಟ್, ಟರ್ನ್ ಸಿಗ್ನಲ್, ಎಬಿಎಸ್, ನ್ಯೂಟ್ರಲ್, ಟಿಪಿಎಂಎಸ್, ಚೆಕ್ ಎಂಜಿನ್, ಸೈಡ್ ಸ್ಟ್ಯಾಂಡ್, ಟ್ಯಾಂಕ್ ಮೌಂಟೆಡ್ ಎಲೆಕ್ಟ್ರಾನಿಕ್ ಫ್ಯೂಯಲ್ ಗೇಜ್ ಜೊತೆ ಲೊ ಫ್ಯೂಯಲ್ ಎಲ್ ಇಡಿ ಇಂಡಿಕೇಟರ್.

ಭಾರತದಲ್ಲಿ 31 ಲಕ್ಷ ದುಬಾರಿಯ ಬೈಕ್ ಬಿಡುಗಡೆ; ಅಂತದ್ದೇನಿದೆ?

ಮೇಲೆ ತಿಳಿಸಿದ ವೈಶಿಷ್ಟ್ಯಗಳಿಗೆ ಅನುಗುಣವಾಗಿ ನೂತನ ಸ್ಪ್ರಿಂಗ್ ಶೀಲ್ಡ್ ಬೈಕನ್ನು ತ್ವರಿತವಾಗಿ ತೆಗೆಯಬಹುದಾದ ವಿಂಡ್ ಶೀಲ್ಡ್ ಮತ್ತು ಸ್ಯಾಂಡಲ್ ಬ್ಯಾಗ್ ನೊಂದಿಗೆ ಟೂರರ್ ಬೈಕ್ ನಿಂದ ಕ್ರೂಸರ್ ಬೈಕಾಗಿ ಪರಿವರ್ತಿಸಬಹುದಾಗಿದೆ.

ಭಾರತದಲ್ಲಿ 31 ಲಕ್ಷ ದುಬಾರಿಯ ಬೈಕ್ ಬಿಡುಗಡೆ; ಅಂತದ್ದೇನಿದೆ?

ರಿಮೋಟ್ ಲಾಕಿಂಗ್ ಹಾರ್ಡ್ ಬ್ಯಾಗ್ಸ್, ನೈಜ ಲೆಥರ್ ಸೀಟು, ಪವರ್ ಫುಲ್ ಹೆಡ್ ಲೈಟ್ ಜೊತೆ ಡ್ಯುಯಲ್ ಡ್ರೈವಿಂಗ್ ಲೈಟ್ಸ್ ಇತರೆ ಪ್ರಮುಖ ವೈಶಿಷ್ಟ್ಯಗಳಾಗಿವೆ.

ಭಾರತದಲ್ಲಿ 31 ಲಕ್ಷ ದುಬಾರಿಯ ಬೈಕ್ ಬಿಡುಗಡೆ; ಅಂತದ್ದೇನಿದೆ?

ಫಾರ್ಕ್ ಮೇಲೆ ಉನ್ನತ ಗುಣಮಟ್ಟದ ಕ್ರೋಮ್ ಬಳಕೆ, ಹೆಡ್ ಲೈಟ್ ಹೌಸಿಂಗ್, ಫೆಂಡರ್ ಟ್ರಿಮ್, ಎಂಜಿನ್ ಕವರ್, ಎಕ್ಸಾಸ್ಟ್ ಮತ್ತು ಹ್ಯಾಂಡಲ್ ಬ್ಯಾರ್ ಜೊತೆ ಇಂಟರ್ನಲ್ ವೈರಿಂಗ್ ವ್ಯವಸ್ಥೆಯೂ ಇರುತ್ತದೆ.

ಭಾರತದಲ್ಲಿ 31 ಲಕ್ಷ ದುಬಾರಿಯ ಬೈಕ್ ಬಿಡುಗಡೆ; ಅಂತದ್ದೇನಿದೆ?

ಇಂಡಿಯನ್ ಮೋಟಾರ್ ಸೈಕಲ್ ಚೀಫ್ಟೈನ್ ಮತ್ತು ಚೀಫ್ ವಿಂಟೇಜ್ ಕ್ರೂಸರ್ ಬೈಕ್ ಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿರುವ ನೂತನ ಇಂಡಿಯನ್ ಸ್ಪ್ರಿಂಗ್ ಫೀಲ್ಡ್, ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ದೇಶವನ್ನು ತಲುಪಲಿದ್ದು, ಮೊಟೊ ಗುಝಿ ಎಂಜಿಎಕ್ಸ್-21, ಹೋಂಡಾ ಗೋಲ್ಡ್ ವಿಂಗ್ ಮತ್ತು ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ಗ್ಲೈಡ್ ಕ್ರೂಸರ್ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

Most Read Articles

Kannada
English summary
2016 Indian Springfield India Launch Price Rs. 31.07 Lakh
Story first published: Thursday, November 17, 2016, 15:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X