ಬೆನೆಲ್ಲಿ ಟಿಆರ್‌ಕೆ 502 ಅಡ್ವೆಂಚರ್ ಟೂರರ್ ಅನಾವರಣ

Written By:

ಇಟಲಿ ಮೂಲದ ಐಕಾನಿಕ್ ವಾಹನ ತಯಾರಿಕ ಸಂಸ್ಥೆ ಬೆನೆಲ್ಲಿ, 2016 ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ಟಿಆರ್ ಕೆ 502 ಅಡ್ವೆಂಚರ್ ಟೂರರ್ ಬೈಕನ್ನು ಅನಾವರಣಗೊಳಿಸಿದೆ.

ಅಂದಾಜು ಬೆಲೆ: 5 ಲಕ್ಷ ರು. (ಎಕ್ಸ್ ಶೋ ರೂಂ)

ಭಾರತದಲ್ಲಿ ಡಿಎಸ್‌ಕೆ ಸಹಯೋಗದಲ್ಲಿ ಮಾರಾಟ ನಡೆಸಲಿರುವ ಬೆನೆಲ್ಲಿ, ಈಗಾಗಲೇ ತನ್ನ ಶ್ರೇಣಿಯ ಅನೇಕ ಬೈಕ್ ಗಳನ್ನು ಅನಾವರಣಗೊಳಿಸಿದೆ. ಇದು ಮುಂಬರುವ ದಿನಗಳಲ್ಲಿ ಭಾರತೀಯ ರಸ್ತೆಗೆ ಪ್ರವೇಶಿಸಲಿದೆ.

ಬೆನೆಲ್ಲಿ ಟಿಆರ್‌ಕೆ 502 ಅಡ್ವೆಂಚರ್ ಟೂರರ್

ಇದಕ್ಕೂ ಮೊದಲು ಟಿಆರ್‌ಕೆ 502 ಕಳೆದ ವರ್ಷ ಜರಗಿದ ಮಿಲಾನ್ ಮೋಟಾರ್ ಸೈಕಲ್ ಶೋದಲ್ಲೂ (EICMA) ತನ್ನ ಪ್ರತಿಭೆಯನ್ನು ಮೆರೆದಿತ್ತು. ಈ ಅಡ್ವೆಂಚರ್ ಟೂರರ್ ಬೈಕ್ ಆಫ್ ರೋಡ್ ಸವಾರರ ಪಾಲಿಗೆ ನೆಚ್ಚಿನ ಆಯ್ಕೆಯಾಗಿರಲಿದೆ.

ಎಂಜಿನ್ ತಾಂತ್ರಿಕತೆ

ಹೊಸದಾಗಿ ಅಭಿವೃದ್ಧಿಪಡಿಸಿದ 500 ಸಿಸಿ, ಪ್ಯಾರಲಲ್ ಟ್ವಿನ್ ಮೋಟಾರು,

48 ಅಶ್ವಶಕ್ತಿ (8,500 ಆರ್‌ಪಿಎಂ),

45 ಎನ್‌ಎಂ ತಿರುಗುಬಲ (4,500 ಆರ್‌ಪಿಎಂ)

ಗೇರ್ ಬಾಕ್ಸ್: 6 ಸ್ಪೀಡ್ ಹೈಡ್ರಾಲಿಕ್ ಕ್ಲಚ್.

ಇಂಧನ ಟ್ಯಾಂಕ್: 20 ಲೀಟರ್.

ಶೈಲಿ

ಐಕಾನಿಕ್ ಡುಕಾಟಿ ಮಲ್ಟಿಸ್ಟ್ರಾಡಾ ಬೈಕ್ ನಿಂದ ಪ್ರೇರಣೆ ಪಡೆದಿರುವ ಬೆನೆಲ್ಲಿ ಟಿಆರ್‌ಕೆ 502 ಮುಂಭಾಗದಲ್ಲಿ ಫೇರಿಂಗ್ ಮತ್ತು ಟ್ವಿನ್ ಹೆಡ್ ಲ್ಯಾಂಪ್ ಗಳನ್ನು ಗಿಟ್ಟಿಸಿಕೊಂಡಿದೆ.

ಸಸ್ಪೆನ್ಷನ್

ಹೊಂದಾಣಿಸಬಹುದಾದ ಅಪ್ ಸೈಡ್ ಡೌನ್ ಫ್ರಂಟ್ ಫಾರ್ಕ್,

ಹಿಂದುಗಡೆ ಸ್ವಿಂಗ್ ಆರ್ಮ್ ಜೊತೆ ಮೊನೊಶಾಕ್,

ಎರಡು ಬದಿಗಳಲ್ಲೂ 150 ಎಂಎಂ ಸಸ್ಪೆನ್ಷನ್ ಟ್ರಾವೆಲ್

ಬ್ರೇಕ್

ಮುಂದಗಡೆ 320 ಎಂಎಂ ಡಿಸ್ಕ್

ಹಿಂಭಾಗದಲ್ಲಿ 260 ಎಂಎಂ ಡಿಸ್ಕ್

ಚಕ್ರಗಳು

ಮುಂಭಾಗದಲ್ಲಿ ಪೈರಲ್ಲಿ ಏಂಜೆಲ್ 120/70 R17

ಹಿಂಭಾಗದಲ್ಲಿ 160/60 R17

17 ಇಂಚುಗಳ ಅಲಾಯ್ ಚಕ್ರಗಳು.

ಪ್ರತಿಸ್ಪರ್ಧಿ: ಕವಾಸಕಿ ವೆರ್ಸಿಸ್ 650.

English summary
2016 Auto Expo: Benelli TRK 502 Adventure Tourer Makes India Debut
Story first published: Monday, February 15, 2016, 9:15 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X