ಹುಷಾರ್, ಅಮಿತ ವೇಗದಲ್ಲಿ ಸಂಚರಿಸಿದರೆ ತಲೆ ಕೂದಲಿಗೆ ಕತ್ತರಿ!

By Nagaraja

ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದ ಘಟನೆಯಿದು. ಪಶ್ಚಿಮ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಅಮಿತ ವೇಗದಲ್ಲಿ ಸಂಚರಿಸಿದ ಅಪರಾಧಕ್ಕಾಗಿ ಯುವಕರನ್ನು ಸೆರೆ ಹಿಡಿದಿರುವ ಸ್ಥಳೀಯ ಪೊಲೀಸರು ತಲೆ ಕೂದಲು ಕತ್ತರಿಸುವ ಮುಖಾಂತರ ತಕ್ಕ ಶಾಸ್ತಿ ಮಾಡಿದ್ದಾರೆ.

ಕಳೆದ ವಾರ ನಡೆದ ಪ್ರಕರಣ ಬೆಳಕಿಗೆ ಬಂದಿದ್ದು, ಖೇರ್ವಾಡಿ ಪೊಲೀಸ್ ಠಾಣೆಯ ಪೊಲೀಸರು, 13 ಬೈಕರುಗಳನ್ನು ಬಂಧಿಸಿ ಕ್ಷೌರಿಕನ ಬಳಿ ತಲೆ ಕೂದಲು ಕತ್ತರಿಸಿ ಮನೆಗೆ ತೆರಳುವಂತೆ ಬುದ್ಧಿ ಮಾತು ಹೇಳಿದ್ದಾರೆ. ರಸ್ತೆ ನಿಯಮ ಪಾಲಿಸಲು ಸದಾ ವಿನೂತನ ಕ್ರಮ ಅನುಸರಿಸುವ ಆರಕ್ಷಕರು ಇಲ್ಲೂ ಇಂತಹದೊಂದು ವಿಶಿಷ್ಟ ಶೈಲಿಯ ನಿಯಮ ಪಾಲಿಸಲು ಕಾರಣವೊಂದಿದೆ. ಈ ಬಗ್ಗೆ ಸಮಗ್ರ ವರದಿಯನ್ನು ತಿಳಿದುಕೊಳ್ಳಲು ಚಿತ್ರಪುಟದತ್ತ ಭೇಟಿ ಕೊಡಿರಿ...

ಹುಷಾರ್, ಅಮಿತ ವೇಗದಲ್ಲಿ ಸಂಚರಿಸಿದರೆ ತಲೆ ಕೂದಲಿಗೆ ಕತ್ತರಿ!

ಪೊಲೀಸ್ ಅಧಿಕಾರಿಗಳ ವಿವರಣೆಯ ಪ್ರಕಾರ, ಹೆಲ್ಮೆಟ್ ಧರಿಸದೇ ಅಮಿತ ವೇಗದಲ್ಲಿ ಸಂಚರಿಸಿರುವುದಕ್ಕಾಗಿ ಯುವಕರ ತಲೆ ಕೂದಲನ್ನು ಕತ್ತರಿಸಲಾಗಿದೆ.

ಹುಷಾರ್, ಅಮಿತ ವೇಗದಲ್ಲಿ ಸಂಚರಿಸಿದರೆ ತಲೆ ಕೂದಲಿಗೆ ಕತ್ತರಿ!

ಪೊಲೀಸರು ಸೆರೆ ಹಿಡಿದ ಬಹುತೇಕ ಯುವಕರು ವಿವಿಧ ಶೈಲಿಯ ಕೇಶ ವಿನ್ಯಾಸವನ್ನು ಮಾಡಿಕೊಂಡಿದ್ದರು.

ಹುಷಾರ್, ಅಮಿತ ವೇಗದಲ್ಲಿ ಸಂಚರಿಸಿದರೆ ತಲೆ ಕೂದಲಿಗೆ ಕತ್ತರಿ!

ಈ ಬಗ್ಗೆ ವಿಚಾರಣೆಗೊಳಪಡಿಸಿದಾಗ ಹೆಲ್ಮೆಟ್ ಧರಿಸಿದ್ದಲ್ಲಿ ಕೂದಲು ಉದುರುತ್ತದೆ ಹಾಗೂ ತಮ್ಮ ಕೇಶ ವಿನ್ಯಾಸಕ್ಕೆ ಕೇಡು ಸಂಭವಿಸುತ್ತದೆಯೆಂಬ ಉತ್ತರ ಕೊಟ್ಟಿದ್ದರು.

ಹುಷಾರ್, ಅಮಿತ ವೇಗದಲ್ಲಿ ಸಂಚರಿಸಿದರೆ ತಲೆ ಕೂದಲಿಗೆ ಕತ್ತರಿ!

ಇದರಿಂದಾಗಿ ಯುವಕರಿಗೆ ತಕ್ಕ ಶಾಸ್ತಿ ಕಲಿಸಿಕೊಡಲು ಪೊಲೀಸರು ಮುಂದಾಗಿದ್ದಾರೆ. ಬಳಿಕ ಯುವಕರಿಗೆ ಬುದ್ಧಿ ಮಾತು ಹೇಳಿ ಕೊಟ್ಟಿದ್ದಾರೆ.

ಹುಷಾರ್, ಅಮಿತ ವೇಗದಲ್ಲಿ ಸಂಚರಿಸಿದರೆ ತಲೆ ಕೂದಲಿಗೆ ಕತ್ತರಿ!

ಇನ್ನೊಂದು ಬಾರಿ ಯುವಕರು ನಿಯಮ ಉಲ್ಲಂಘನೆ ಮಾಡದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ತಲೆ ಕೂದಲನ್ನು ಕತ್ತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಉತ್ತರಿಸಿದ್ದಾರೆ.

ಹುಷಾರ್, ಅಮಿತ ವೇಗದಲ್ಲಿ ಸಂಚರಿಸಿದರೆ ತಲೆ ಕೂದಲಿಗೆ ಕತ್ತರಿ!

ಅಷ್ಟೇ ಯಾಕೆ ಈ ಹಾದಿಯಾಗಿ ಇನ್ನು ಯಾರೇ ಆದರೂ ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದ್ದಲ್ಲಿ ಇದೇ ಗತಿ ಬರಲಿದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಹುಷಾರ್, ಅಮಿತ ವೇಗದಲ್ಲಿ ಸಂಚರಿಸಿದರೆ ತಲೆ ಕೂದಲಿಗೆ ಕತ್ತರಿ!

ಅಂದ ಹಾಗೆ ನಿಮ್ಮ ಬಳಿ ತಲೆ ಕೂದಲು ಕತ್ತರಿಸಲು ದುಡ್ಡಿಲ್ಲ ಎಂದಾದ್ದಲ್ಲಿ ಈ ಎಕ್ಸ್ ಪ್ರೆಸ್ ವೇನಲ್ಲಿ ಒಂದು ಜಾಲಿ ರೈಡ್ ಹೊಡೆದರಾಯಿತು. ಪೊಲೀಸರು ಉಚಿತವಾಗಿ ತಲೆ ಕೂದಲು ಕತ್ತರಿಸಲಿದ್ದಾರೆ.

ಹುಷಾರ್, ಅಮಿತ ವೇಗದಲ್ಲಿ ಸಂಚರಿಸಿದರೆ ತಲೆ ಕೂದಲಿಗೆ ಕತ್ತರಿ!

ಅನಿಯಮಿತ ವೇಗದಲ್ಲಿ ಸಂಚರಿಸುವ ಬೈಕ್ ಗಳ ಪ್ರಕರಣ ಭಾಂದ್ರಾ ಮತ್ತು ವೆಸ್ಟರ್ನ್ ಎಕ್ಸ್ ಪ್ರೆಸ್ ಹೈವೇಯಲ್ಲಿ ಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಹುಷಾರ್, ಅಮಿತ ವೇಗದಲ್ಲಿ ಸಂಚರಿಸಿದರೆ ತಲೆ ಕೂದಲಿಗೆ ಕತ್ತರಿ!

ಅಷ್ಟಕ್ಕೂ ಬೈಕ್ ಸವಾರರ ತಲೆ ಕೂದಲು ಕತ್ತರಿಸುವ ವಿದ್ಯೆ ನಮ್ಮ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಜಾರಿಗೆ ತಂದರೆ ಹೇಗಿರಬಹುದು? ಈ ಸಂಬಂಧ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Most Read Articles

Kannada
Read more on ಬೈಕ್ bike
English summary
Bikers Caught Speeding In Mumbai To Get Free Haircuts
Story first published: Wednesday, May 11, 2016, 16:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X