2016ರಲ್ಲಿ 4 ಡಿಎಸ್‌ಕೆ ಬೆನೆಲ್ಲಿ ಬೈಕ್‌ಗಳು ಭಾರತಕ್ಕೆ

Written By:

ಈಗಾಗಲೇ ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನ ಸಾನಿಧ್ಯವನ್ನು ವ್ಯಕ್ತಪಡಿಸಿರುವ ಡಿಎಸ್‌ಕೆ ಬೆನೆಲ್ಲಿ 2016ನೇ ಸಾಲಿನಲ್ಲಿ ನಾಲ್ಕು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಇತ್ತೀಚೆಗಷ್ಟೇ ಬೆನೆಲ್ಲಿ ಸಂಸ್ಥೆಯು ಎಂಟ್ರಿ ಲೆವೆಲ್ ಟಿಎನ್‌ಟಿ 25 ಬೈಕ್ ಅನ್ನು ದೇಶದಲ್ಲಿ ಬಿಡುಗಡೆಗೊಳಿಸಿತ್ತು. ಈ ಮೂಖಾಂತರ ತನ್ನ ಶ್ರೇಣಿಯ ಮಾದರಿಗಳನ್ನು ವಿಸ್ತರಿಸಿಕೊಂಡಿತ್ತು.

ಡಿಎಸ್‌ಕೆ ಬೆನೆಲ್ಲಿ

ದೇಶದಲ್ಲಿ ಮಾರಾಟದಲ್ಲಿರುವ ಬೆನೆಲ್ಲಿ ಬೈಕ್ ಗಳು

  • ಟಿಎನ್‌ಟಿ 25,
  • ಟಿಎನ್‌ಟಿ 300,
  • ಟಿಎನ್‌ಟಿ 600ಐ,
  • ಟಿಎನ್‌ಟಿ 600ಜಿಟಿ,
  • ಟಿಎನ್‌ಟಿ 899 ಮತ್ತು
  • ಟಿಎನ್‌ಟಿ ಆರ್

ಎಲ್ಲ ವಿಭಾಗದಲ್ಲೂ ನೂತನ ಬೈಕ್ ಬಿಡುಗಡೆ ಮಾಡುವ ಮೂಲಕ ಹೆಚ್ಚೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುವುದು ಸಂಸ್ಥೆಯ ಯೋಜನೆಯಾಗಿದೆ.

ಡಿಎಸ್‌ಕೆ ಬೆನೆಲ್ಲಿ

2015 ಮಿಲಾನ್ ಮೋಟಾರು ಶೋದಲ್ಲಿ ಬೆನೆಲ್ಲಿ ಅನೇಕ ಹೊಸ ಮಾದರಿಗಳನ್ನು ಪ್ರದರ್ಶನಕ್ಕಿರಿಸಿತ್ತು. ಭಾರತ ವಾಹನ ಮಾರುಕಟ್ಟೆಯಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ದೊರಕಿರುವ ಹಿನ್ನೆಲೆಯಲ್ಲಿ ದೇಶದತ್ತವೂ ಹೆಚ್ಚಿನ ಒಲವು ತೋರಿದೆ.

2015ರಲ್ಲಿ ಗೋವಾದಲ್ಲಿ ನಡೆದ ಇಂಡಿಯಾ ಬೈಕ್ ವೀಕ್ ಹಬ್ಬದಲ್ಲಿ ಸಂಸ್ಥೆಯು ಹೊಸತಾದ ಟ್ರೆಕ್ ಅಮೆಝೋನಸ್ ಅಡ್ವೆಂಚರ್ ಬೈಕ್ ಅನಾವರಣಗೊಳಿಸಿತ್ತು. ಇದು ಮುಂದಿನ ದಿನಗಳಲ್ಲಿ ಭಾರತ ಪ್ರವೇಶಿಸಿದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ.

ಅದೇ ರೀತಿ ಸಂಪೂರ್ಣ ಫೇರ್ಡ್ ಟೊರ್ನಡೊ 302 ಹಾಗೂ ಟಿಎನ್‌ಟಿ 400 ಮೋಟಾರುಸೈಕಲ್ ಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ. ಲಾಸ್ಟ್ ಬಟ್ ಲೀಸ್ಟ್ ಎಂಬಂತೆ 499.6 ಸಿಸಿ ಟ್ವಿನ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಯಂತ್ರಿತ ಲಿಯೊನ್ಸಿನೊ ಸ್ಕ್ರಾಂಬ್ರರ್ ಬೈಕ್ ಸಹ 2016 ಆಟೋ ಎಕ್ಸ್ ಪೋದಲ್ಲಿ ದೇಶಕ್ಕೆ ಕಾಲಿಡುವ ನಿರೀಕ್ಷೆಯಿದೆ.

English summary
DSK Benelli Plans Four New Model Launches For 2016
Story first published: Tuesday, January 5, 2016, 8:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark