ಹಬ್ಬದ ಸಂಭ್ರಮ ಕೊಂಡಾಡಲು ಡ್ರೈವ್ ಸ್ಪಾರ್ಕ್ ಜೊತೆ ನೂತನ ಸಾರಥಿ

By Nagaraja

ದೇಶದ ನಂ.1 ಬಹು ಭಾಷಾ ವಾಹನ ಜಾಲತಾಣವಾಗಿರುವ ಡ್ರೈವ್ ಸ್ಪಾರ್ಕ್, ಈ ಬಾರಿಯ ಹಬ್ಬದ ಸಂಭ್ರಮವನ್ನು ವಿಶೇಷವಾಗಿ ಕೊಂಡಾಡಲು ನಿರ್ಧರಿಸಿದೆ. ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ. ನಮ್ಮೆಲ್ಲರ ಭಾಷೆ, ಜಾತಿ ಬೇರೆ ಬೆರೆಯಾಗಿದ್ದರೂ ನಾವೆಲ್ಲರೂ ಭಾರತೀಯರು ಎಂದು ಒಗ್ಗಟ್ಟಿನಿಂದ ಸಹಬಾಳ್ವೆ ನಡೆಸುತ್ತಿದ್ದೇವೆ. ಇದಕ್ಕಣುಗುಣವಾಗಿ ಒನ್ ಇಂಡಿಯಾದ ಭಾಗವಾಗಿರುವ ಡ್ರೈವ್ ಸ್ಪಾರ್ಕ್ ಆಂಗ್ಲ ಭಾಷೆಯೊಂದಿಗೆ ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ವಾಹನ ಸುದ್ದಿಗಳನ್ನು ಓದುಗರನ್ನು ತಲುಪಿಸುತ್ತಿದೆ.

ಬೆಂಗಳೂರಿನಂತಹ ಬಿಡುವಿಲ್ಲದ ನಗರದಲ್ಲಿ ಪ್ರತಿಯೊಬ್ಬರೂ ಆರೋಗ್ಯಕರವಾದ ನೀರು, ಆಹಾರ, ಸರಳ, ಸುಂದರ ಜೀವನ ಶೈಲಿಯನ್ನು ಬಯಸುತ್ತಾರೆ. ಬೆಂಗಳೂರು ಎಂದಾಕ್ಷಣ ಅದೊಂದು ಶೋಕಿ ಲೈಫ್ ಸ್ಟೈಲ್ ಎಂಬ ಭಾವನೆ ಹುಟ್ಟಿಕೊಳ್ಳುತ್ತದೆ. ಆದರೆ ಇವೆಲ್ಲದಕ್ಕೂ ಮಿಗಿಲಾಗಿ ಇಲ್ಲೂ ಹಬ್ಬಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ಕೊಂಡಾಡಲಾಗುತ್ತದೆ. ಒಂದು ರೀತಿಯಲ್ಲಿ ಇಡೀ ದೇಶವನ್ನೇ ಹೋಲಿಸಿದಾಗ ಎಲ್ಲ ಜಾತಿ ಪಂಗಡದವರು ಅತಿ ಹೆಚ್ಚು ಹಬ್ಬವನ್ನು ಆಚರಿಸುತ್ತಿರುವುದಕ್ಕೆ ನಮ್ಮ ಬೆಂಗಳೂರು ಮುಂಚೂಣಿಯಲ್ಲಿರಬಹುದು.

ಟಿವಿಎಸ್ ವಿಗೊ

ಹಬ್ಬದ ಸಂಭ್ರಮ ನಮ್ಮ ನಗರಕ್ಕೆ ಮಾತ್ರ ಸೀಮಿತವಾಗಿರಬಾರದು ಎಂಬುದು ನಮ್ಮ ಆಶಯವಾಗಿದೆ. ಇದು ದೇಶದ ಎಲ್ಲ ನಗರಗಳಿಗೂ ವಿಸ್ತರಿಸಬೇಕು. ಡ್ರೈವ್ ಸ್ಪಾರ್ಕ್ ಪ್ರಧಾನ ಸಂಪಾದಕ ಜೊಬೊ ಕುರುವಿಲ್ಲಾ ನೇತೃತ್ವದಲ್ಲಿ ಡ್ರೈವ್ ಸ್ಪಾರ್ಕ್ ತಂಡದ ಎಲ್ಲ ಸದಸ್ಯರೂ ಈ ಸವಾಲನ್ನು ಸ್ವೀಕರಿಸಲು ತಯಾರಾಗಿದ್ದಾರೆ.

ವಾಹನಗಳ ಚೆಲ್ಲಾಟದ ಜೊತೆಗೆ ನಗರ ಜೀವನವನ್ನು ಆಳವಾಗಿ ಅರಿಯುವುದು ಇದರ ಹಿಂದಿರುವ ಗುರಿಯಾಗಿದೆ. ಇದಕ್ಕಾಗಿ ಹಬ್ಬವನ್ನು ಆಚರಿಸಿಕೊಳ್ಳುವ ಕೆಲವು ಪ್ರಮುಖ ನಗರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಬೆಂಗಳೂರು ಮಾಯಾನಗರಿ ಎಂಬುದರಲ್ಲಿ ಸಂಶಯವಿಲ್ಲ. ಇಲ್ಲಿಂದ ನೇರವಾಗಿ ದುರ್ಗಾ ಪೂಜಾ ಆಚರಿಸಿಕೊಳ್ಳಲು ಕೋಲ್ಕತ್ತಾಗೆ ಅಲ್ಲಿಂದ ಬಳಿಕ ಬೆಳಕಿನ ಹಬ್ಬ ದೀಪಾವಳಿ ಆಚರಿಸಿಕೊಳ್ಳಲು ಪುಣೆ ನಗರದತ್ತ ಪ್ರಯಾಣಿಸಲಿದ್ದೇವೆ.

ಅಲ್ಲಿಂದ ಕ್ರಿಸ್ಮಸ್ ಆಚರಣೆಗಾಗಿ ದೇವರ ಸ್ವಂತ ನಾಡು ಕೇರಳಕ್ಕೆ ತೆರಳಲಿದ್ದು, ಬಳಿಕ ಹೊಸ ವರ್ಷದ ಸಂಭ್ರಮಕ್ಕಾಗಿ ನಮ್ಮೂರಿಗೆ ಹಿಂತಿರುಗಲಿದ್ದೇವೆ. ಈ ವೇಳೆಯಲ್ಲಿ ಸಂಪೂರ್ಣ ಡ್ರೈವ್ ಸ್ಪಾಕ್ ತಂಡವು ಜೊತೆಗಿರಲಿದೆ. ಹೊಸ ವರ್ಷದ ಬೆನ್ನಲ್ಲೇ ನೆರೆಯ ರಾಜ್ಯ ತಮಿಳುನಾಡಿನಲ್ಲಿ ನಡೆಯಲಿರುವ ಪೊಂಗಾಲ್ ಹಬ್ಬವನ್ನು ಆಚರಿಸಿಕೊಳ್ಳಲಿದ್ದೇವೆ.

ಟಿವಿಎಸ್ ವಿಗೊ

ಈ ಎಲ್ಲ ಸವಾಲುಗಳನ್ನು ಸ್ವೀಕರಿಸಲು ಡ್ರೈವ್ ಸ್ಪಾರ್ಕ್ ತಂಡಕ್ಕೆ ನೂತನ ಸಾರಥಿಯೊಂದು ಸಾಥ್ ನೀಡುತ್ತದೆ. ಆ ವಿಶೇಷ ಆತಿಥಿ ಯಾರೆಂದು ತಿಳಿಯುವ ಕುತೂಹಲ ನಿಮ್ಮಲ್ಲಿರಬಹುದು. ಹಬ್ಬದ ಸಂಭ್ರಮದಲ್ಲಿ ಜನಜಂಗುಳಿ ಜಾಸ್ತಿಯಿರುವುದರಿಂದ ನಗರ ಪ್ರಯಾಣಕ್ಕೆ ಸ್ಕೂಟರ್ ಆಯ್ಕೆ ಹೆಚ್ಚು ಸೂಕ್ತವೆನಿಸುವುದು ಎಂಬುದು ನಮ್ಮ ಅನಿಸಿಕೆಯಾಗಿತ್ತು. ಹೌದು, 'ಟಿವಿಎಸ್ ವಿಗೊ' ಹಬ್ಬದ ಸಂಭ್ರಮವನ್ನು ಆಚರಿಸಿಕೊಳ್ಳಲು ನಮ್ಮ ಜೊತೆಗಿರಲಿದೆ.

ಇಲ್ಲಿಂದ ನಮ್ಮ ಪ್ರಯಾಣ ಆರಂಭ #WeGo Kolkata. ನಿಸ್ಸಂಶಯವಾಗಿಯೂ ದಸರಾ ವೇಳೆಯಲ್ಲಿ ಕೋಲ್ಕತ್ತಾದಲ್ಲಿ ನಡೆಯಲಿರುವ ದುರ್ಗಾ ಪೂಜಾ ಹೊಸ ಹರುಷವನ್ನು ತರಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ದೇಶದ ಅತ್ಯಂತ ಪುರಾತನ ನಗರಗಳಲ್ಲಿ ಒಂದಾಗಿರುವ ಕೋಲ್ಕತ್ತಾದಿಂದ ಆರಂಭವಾಗುವ ಈ ಯಾತ್ರೆಗೆ ನೀವು ಶೋಭ ಕೋರಲು ಮರೆಯದಿರಿ. ಹ್ಯಾಪಿ ರೈಡಿಂಗ್!

Most Read Articles

Kannada
Read more on ಟಿವಿಎಸ್
English summary
Exploring India At Its Most Joyful: How This Festive Story Came To Life
Story first published: Thursday, October 6, 2016, 12:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X