ಹೀರೊದಿಂದ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

Written By:

ಭವಿಷ್ಯತ್ತಿನ ಸಂಚಾರ ವಾಹಕದತ್ತ ದಿಟ್ಟ ಹೆಜ್ಜೆಯನ್ನಿಟ್ಟಿರುವ ಹೀರೊ ಎಲೆಕ್ಟ್ರಿಕ್, ದೇಶದಲ್ಲಿ ವಿದ್ಯುತ್ ಚಾಲಿತ ಸ್ಕೂಟರ್ ಗಳನ್ನು ಬಿಡುಗಡೆ ಮಾಡಿದೆ. 2020ರ ವೇಳೆಯಾಗುವಾಗ ಮೂರು ದಶಗಳಷ್ಟು ದ್ವಿಚಕ್ರ ವಾಹನಗಳನ್ನು ರಸ್ತೆಗಿಳಿಸುವುದು ಸಂಸ್ಥೆಯ ಯೋಜನೆಯಾಗಿದೆ.

ಇಲ್ಲಿ ಗ್ರಾಹಕರಿಗೆ ಲಿಥಿಯಂ ಇಯಾನ್ ಅಥವಾ ಲೆಡ್ ಚಾಲಿತ ಬ್ಯಾಟರಿಗಳನ್ನು ಆಯ್ಕೆ ಮಾಡುವ ಅವಕಾಶವಿರುತ್ತದೆ. ತನ್ಮೂಲಕ ತನ್ಮೂಲಕ ಪೆಟ್ರೋಲ್ ಮುಕ್ತ ಚಾಲನೆಯನ್ನು ಪ್ರೇರೆಪಿಸಲಿದೆ.

To Follow DriveSpark On Facebook, Click The Like Button
ಹೀರೊದಿಂದ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಹೀರೊ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಕೇವಲ 30 ನಿಮಿಷಗಳಲ್ಲೇ ನಿಮ್ಮ ಮನೆಯ ಚಾರ್ಜಿಂಗ್ ಪ್ಲಗ್ ನಿಂದ ಚಾರ್ಜಿಂಗ್ ಮಾಡಿಸಿಕೊಳ್ಳಬಹುದಾಗಿದೆ.

ಹೀರೊದಿಂದ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿಸಿದ ಬಳಿಕ 65 ಕೀ.ಮೀ. ವರೆಗೂ ಚಲಿಸಬಹುದಾಗಿದೆ. ಅಲ್ಲದೆ ಒಪ್ಟಿಮಾ ಲಿಥಿಯಂ ಡಿಲಕ್ಸ್ ಸ್ಕೂಟರ್ ಗಳು ಗಂಟೆಗೆ 25 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಹೀರೊದಿಂದ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಪೇಟಿಎಂ ಜೊತೆ ಕೈ ಜೋಡಿಸಿಕೊಂಡಿರುವ ಹೀರೊ ಸರಕಾರದ ಸಬ್ಸಿಡಿ ಹೊರತಾಗಿ 10,000 ರು.ಗಳ ಹೆಚ್ಚುವರಿ ಡಿಸ್ಕೌಂಟ್ ನೀಡುತ್ತಿದೆ. ಹೀರೊ ಒಪ್ಟಿಮಾ ಬುಕ್ಕಿಂಗ್ ಸೆಪ್ಟೆಂಬರ್ 25ರಿಂದ ಪೇಟಿಎಂನಲ್ಲಿ ಆರಂಭವಾಗಲಿದೆ.

ಹೀರೊದಿಂದ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಹೀರೊ ಎಲೆಕ್ಟ್ರಿಕ್ ಸ್ಕೂಟರ್ ಬಳಕೆದಾರರು ಐದು ವರ್ಷಗಳಷ್ಟು ಪೆಟ್ರೋಲ್ ಮುಕ್ತ ಚಾಲನೆಯನ್ನು ಖಾತ್ರಿಪಡಿಸಬಹುದಾಗಿದೆ.

ಹೀರೊದಿಂದ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಇದೇ ವೇಳೆಯಲ್ಲಿ ಎನ್ ವೈಎಕ್ಸ್ ಲಿಥಿಯಂ ಎಂಬ ಮಗದೊಂದು ಇ ಸ್ಕೂಟರನ್ನು ಹೀರೊ ಪರಿಚಯಿಸುತ್ತಿದೆ. ಆಕರ್ಷಕ ನೋಟ, ಅನುಕೂಲತೆ ಇದರ ವೈಶಿಷ್ಟ್ಯವಾಗಿರಲಿದೆ.

English summary
Hero Electric Launches Its Complete Range Of Electric Scooters
Story first published: Thursday, September 22, 2016, 9:57 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark