ಕವಾಸಕಿ ಅವಳಿ ಡರ್ಟ್ ಬೈಕ್ ಗಳು ಭಾರತದಲ್ಲಿ ಬಿಡುಗಡೆ

Written By:

ಕವಾಸಕಿ ಅವಳಿ ಡರ್ಟ್ ಬೈಕ್ ಗಳನ್ನು ಭಾರತದಲ್ಲಿ ಭರ್ಜರಿ ಬಿಡುಗಡೆ ಕಂಡಿದೆ. ಅದುವೇ ಕವಾಸಕಿ ಕೆಎಕ್ಸ್100 ಮತ್ತು ಕೆಎಕ್ಸ್250. ಇದರ ಬೆಲೆ, ವೈಶಿಷ್ಟ್ಯಗಳ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ಸಂಪೂರ್ಣ ಲೇಖನದತ್ತ ಕಣ್ಣಾಯಿಸಿರಿ.

To Follow DriveSpark On Facebook, Click The Like Button
ಕವಾಸಕಿ ಅವಳಿ ಡರ್ಟ್ ಬೈಕ್ ಗಳು ಭಾರತದಲ್ಲಿ ಬಿಡುಗಡೆ

ಕವಾಸಕಿ ಕೆಎಕ್ಸ್100 ಮತ್ತು ಎಕ್ಸ್‌ಎಕ್ಸ್250 ಬೈಕ್ ಗಳನ್ನು ಅನುಕ್ರಮವಾಗಿ 4.7 ಮತ್ತು 7.1 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಕವಾಸಕಿ ಅವಳಿ ಡರ್ಟ್ ಬೈಕ್ ಗಳು ಭಾರತದಲ್ಲಿ ಬಿಡುಗಡೆ

ವಿಶೇಷವಾಗಿ ಸಿದ್ಧಪಡಿಸಲಾಗಿರುವ ಟ್ರ್ಯಾಕ್ ಗಷ್ಟೇ ಸೀಮಿತವಾಗಿರುವ ಕವಾಸಕಿ ಕೆಎಕ್ಸ್250 ಮತ್ತು ಕೆಎಕ್ಸ್100 ಮೊಟೊಕ್ರಾಸ್ ಬೈಕ್ ಗಳು ದೇಶದಲ್ಲಿ ಹೆಚ್ಚು ಮಾರಾಟವನ್ನು ಗುರಿಯಿರಿಸಿಕೊಂಡಿದೆ.

ಕವಾಸಕಿ ಅವಳಿ ಡರ್ಟ್ ಬೈಕ್ ಗಳು ಭಾರತದಲ್ಲಿ ಬಿಡುಗಡೆ

ರಸ್ತೆ ಮಾನ್ಯತೆ ಪಡೆದ ಸಾಮಾನ್ಯ ಬೈಕ್ ಗಳಲ್ಲಿರುವ ಯಾವುದೇ ರೀತಿಯ ಹೆಡ್ ಲ್ಯಾಂಪ್, ಟರ್ನ್ ಇಂಡಿಕೇಟರ್, ಲೈಸನ್ಸ್ ಪ್ಲೇಟ್ ಗಳು ಇದರಲ್ಲಿರುವುದಿಲ್ಲ.

ಕವಾಸಕಿ ಅವಳಿ ಡರ್ಟ್ ಬೈಕ್ ಗಳು ಭಾರತದಲ್ಲಿ ಬಿಡುಗಡೆ

ಲೋನಾವಾಲಾದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾಗಿರುವ ಆಫ್ ರೋಡ್ ಟ್ರ್ಯಾಕ್ ನಲ್ಲಿ ಬಿಡುಗಡೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ವೇಳೆಯಲ್ಲಿ ನುರಿತ ರೇಸಿಂಗ್ ತಜ್ಞರು ತಮ್ಮ ಕಸರತ್ತನ್ನು ಪ್ರದರ್ಶಿಸಿದರು.

ಕವಾಸಕಿ ಅವಳಿ ಡರ್ಟ್ ಬೈಕ್ ಗಳು ಭಾರತದಲ್ಲಿ ಬಿಡುಗಡೆ

249 ಸಿಸಿ ಫೋರ್ಡ್ ಸ್ಟ್ರೋಕ್ ಸಿಂಗಲ್ ಸಿಲಿಂಡರ್ ವಾಟರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಕವಾಸಕಿ ಕೆಎಕ್ಸ್250 ಬೈಕ್, ಆಫ್ ರೋಡ್ ಚಾಲನೆಗೆ ತಕ್ಕಂದೆ ಗರಿಷ್ಠ ಗ್ರೌಂಡ್ ಕ್ಲಿಯರನ್ಸ್ ಮತ್ತು ಲಾಂಗ್ ಟ್ರಾವೆಲ್ ಸಸ್ಪೆನ್ಷನ್ ವ್ಯವಸ್ಥೆಯನ್ನು ಗಿಟ್ಟಿಸಿಕೊಂಡಿದೆ.

ಕವಾಸಕಿ ಅವಳಿ ಡರ್ಟ್ ಬೈಕ್ ಗಳು ಭಾರತದಲ್ಲಿ ಬಿಡುಗಡೆ

ಸುರಕ್ಷತೆಗೂ ಆದ್ಯತೆ ಕೊಡಲಾಗಿದ್ದು ಮುಂಭಾಗದಲ್ಲಿ 270 ಎಂಎಂ ಪೆಡಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಇರಲಿದೆ. ಅಲ್ಲದೆ 105 ಕೆ.ಜಿ ತೂಕವನ್ನು ಹೊಂದಿರಲಿದೆ.

ಕವಾಸಕಿ ಅವಳಿ ಡರ್ಟ್ ಬೈಕ್ ಗಳು ಭಾರತದಲ್ಲಿ ಬಿಡುಗಡೆ

ನೋಡಲು ಕೆಎಕ್ಸ್250 ಮಾದರಿಗೆ ಹೋಲುವ ಕೆಎಕ್ಸ್100 ಮಾದರಿಯು 99 ಸಿಸಿ ಟು ಸ್ಟ್ರೋಕ್ ಸಿಂಗಲ್ ಸಿಲಿಂಡರ್ ವಾಟರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಉಚ್ಚಕರ್ಷಕ ಸ್ಟೀಲ್ ಪೆರಿಮೀಟರ್ ಫ್ರೇಮ್ ಪಡೆದಿದೆ.

ಕವಾಸಕಿ ಅವಳಿ ಡರ್ಟ್ ಬೈಕ್ ಗಳು ಭಾರತದಲ್ಲಿ ಬಿಡುಗಡೆ

ದೇಶವನ್ನು ಕವಾಸಕಿ ಕೆಎಕ್ಸ್100 ಮತ್ತು ಕೆಎಕ್ಸ್250 ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ತಲುಪಲಿದೆ.

English summary
Kawasaki Launches Two Dirt Bikes In India
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark