ಸುಜುಕಿ ಶಕ್ತಿಶಾಲಿ ಬೈಕ್ ಗಳು ಭಾರತಕ್ಕಿಲ್ಲ ಯಾಕೆ ?

Written By:

ಜಪಾನ್ ಮೂಲದ ಪ್ರತಿಷ್ಠಿತ ದ್ವಿಚಕ್ರ ವಾಹನ ಸಂಸ್ಥೆ ಸುಜುಕಿ ಮೋಟಾರ್ ಸೈಕಲ್, ಯುರೋಪ್ ನಲ್ಲಿ ಅತಿ ನೂತನ ಜಿಎಸ್‌ಎಕ್ಸ್-ಎಸ್1000 ಎರಡು ವಿಶೇಷ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಅವುಗಳೆಂದರೆ,

ಜಿಎಸ್‌ಎಕ್ಸ್-ಎಸ್1000 ಮತ್ತು ಜಿಎಸ್‌ಎಕ್ಸ್-ಎಸ್1000ಎಫ್

ಈ ಪೈಕಿ ಜಿಎಸ್‌ಎಕ್ಸ್-ಎಸ್1000 ಕಾರ್ಬನ್ ಎಡಿಷನ್ ಬ್ಲೂ ಮತ್ತು ಕಾರ್ಬನ್ ಎಡಿಷನ್ ಗಳೆಂಬ ಎರಡು ವಿಧಗಳಲ್ಲಿ ಲಭ್ಯವಾಗಲಿದೆ. ಇನ್ನೊಂದೆಡೆ ಜಿಎಸ್‌ಎಕ್ಸ್-ಎಸ್1000 ಟೂರ್ ಎಡಿಷನ್ ಆಗಿರಲಿದೆ.

ಯುರೋಪ್ ನಲ್ಲಿ ಸುಜುಕಿ ಶಕ್ತಿಶಾಲಿ ಬೈಕ್ ಗಳು ಬಿಡುಗಡೆ

2016 ಆಗಸ್ಟ್ ತಿಂಗಳಲ್ಲೇ ಡೀಲರ್ ಶಿಪ್ ನಲ್ಲಿ ವಿತರಣೆಗೆ ಲಭ್ಯವಾಗಲಿರುವ ನೂತನ ಜಿಎಸ್‌ಎಕ್ಸ್-ಎಸ್1000 ಆವೃತ್ತಿಗಳು ಕ್ರೀಡಾ ಪ್ರೇಮಿಗಳಲ್ಲಿ ಹೊಸತನವನ್ನು ನೀಡಲಿದೆ.

ಯುರೋಪ್ ನಲ್ಲಿ ಸುಜುಕಿ ಶಕ್ತಿಶಾಲಿ ಬೈಕ್ ಗಳು ಬಿಡುಗಡೆ

ಸುಜುಕಿ ಜಿಎಸ್‌ಎಕ್ಸ್-ಎಸ್1000 ಕಾರ್ಬನ್ ಎಡಿಷನ್, ಮೊಟೊಜಿಪಿ ನೀಲಿ ಬಣ್ಣವನ್ನು ಪಡೆಯಲಿದೆ. ಇದರ ಜೊತೆಗೆ ಕೆಂಪು ಮತ್ತು ಕಪ್ಪು ವರ್ಣದ ಆಯ್ಕೆಗಳು ಇರುತ್ತದೆ.

ಯುರೋಪ್ ನಲ್ಲಿ ಸುಜುಕಿ ಶಕ್ತಿಶಾಲಿ ಬೈಕ್ ಗಳು ಬಿಡುಗಡೆ

ಸುಜುಕಿ ಜಿಎಸ್‌ಎಕ್ಸ್-ಎಸ್1000 ಕಾರ್ಬನ್ ಎಡಿಷನ್, ಕ್ಲಚ್ ಕವರ್, ಕ್ರಾಂಕ್ ಕೇಸ್ ಕವರ್, ಕಾರ್ಬನ್ ಫೈಬರ್, ಬ್ರೆಂಬೊ ಬ್ರೇಕ್ ಕ್ಯಾಲಿಪರ್ ಮುಂತಾದ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

ಯುರೋಪ್ ನಲ್ಲಿ ಸುಜುಕಿ ಶಕ್ತಿಶಾಲಿ ಬೈಕ್ ಗಳು ಬಿಡುಗಡೆ

ಅಂತೆಯೆ ಸುಜುಕಿ ಜಿಎಸ್‌ಎಕ್ಸ್-ಎಸ್1000ಎಫ್ ಟೂರ್ ಎಡಿಷನ್, ನೀಲಿ, ಕೆಂಪು ಅಥವಾ ಕಪ್ಪು ವರ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಯುರೋಪ್ ನಲ್ಲಿ ಸುಜುಕಿ ಶಕ್ತಿಶಾಲಿ ಬೈಕ್ ಗಳು ಬಿಡುಗಡೆ

ಜಿಎಸ್‌ಎಕ್ಸ್-ಎಸ್1000ಎಫ್ ಟೂರಿಂಗ್ ಎಡಿಷನ್, ಹೀಟಡ್ ಗ್ರಿಪ್, ದೊಡ್ಡದಾದ ವಿಂಡ್ ಸ್ಕ್ರೀನ್, ಸಿಲ್ವರ್ ಗ್ರಾಫಿಕ್ ಕಿಟ್, 15 ಲೀಟರ್ ಗಳ ಇಂಧನ ಟ್ಯಾಂಕ್ ಮತ್ತು 12 ಲೀಟರ್ ಗಳ ಟೈಲ್ ಬ್ಯಾಗ್ ಇತ್ಯಾದಿ ಸೌಲಭ್ಯಗಳನ್ನು ಪಡೆಯಲಿದೆ.

ಯುರೋಪ್ ನಲ್ಲಿ ಸುಜುಕಿ ಶಕ್ತಿಶಾಲಿ ಬೈಕ್ ಗಳು ಬಿಡುಗಡೆ

ಅಂದ ಹಾಗೆ ಈ ಎರಡು ಬೈಕ್ ಗಳು 999 ಸಿಸಿ ಫೋರ್ ಪಿಸ್ತಾನ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 145 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಯುರೋಪ್ ನಲ್ಲಿ ಸುಜುಕಿ ಶಕ್ತಿಶಾಲಿ ಬೈಕ್ ಗಳು ಬಿಡುಗಡೆ

ದುರದೃಷ್ಟವಶಾತ್ ಸುಜುಕಿ ಜಿಎಸ್‌ಎಕ್ಸ್-ಎಸ್1000 ಭಾರತಕ್ಕೆ ತಲುಪುದಿಲ್ಲ. ಅಂದರೆ ಯುರೋಪ್ ನಂತಹ ಮುಂದುವರಿದ ದೇಶಗಳ ಪ್ರೀಮಿಯಂ ಗ್ರಾಹಕರನ್ನು ಮಾತ್ರ ಗುರಿಯಾಗಿರಿಸಿಕೊಳ್ಳಲಿದೆ.

English summary
Suzuki GSX-S1000 & GSX-S1000F Special Editions Revealed
Story first published: Saturday, July 30, 2016, 14:54 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark