ಕೊಚ್ಚಿಯಲ್ಲಿ ಶಾಂತಿ, ಪ್ರೀತಿ, ಸಂತೋಷದ ಸಂದೇಶ ಸಾರಿದ ಟಿವಿಎಸ್ ವಿಗೊ

Written By:

ನಗರ ಚಾಲನೆಗೆ ಸ್ಕೂಟರ್ ಯಾಕೆ ಬೆಸ್ಟ್ ? ಅದರಲ್ಲೂ ಹಬ್ಬದಂತಹ ಬಿಡುವಿಲ್ಲದ ವಾತಾವರಣ ಎದುರಾದಾಗ ಕ್ಷಿಪ್ರ ಗತಿಯಲ್ಲಿ ಸಂಚರಿಸಿ ಸಿದ್ಧತೆ ಮಾಡಲು ಸ್ಕೂಟರ್ ಹೆಚ್ಚು ಸೂಕ್ತವೆನಿಸಲಿದೆ. ಇದೇ ಕಾರಣಕ್ಕಾಗಿ ಕೊಚ್ಚಿ ನಗರದಲ್ಲಿ ನಡೆಯುವ ಕ್ರಿಸ್ಮಸ್ ಹಬ್ಬದ ಆಚರಣೆಯ ವೇಳೆಯಲ್ಲಿ ನೈಜತೆಯ ದರ್ಶನಕ್ಕಾಗಿ ಟಿವಿಎಸ್ ವಿಗೊ ಜೊತೆ ಪ್ರಯಾಣ ಹೊರಡಲಾಗಿತ್ತು.

To Follow DriveSpark On Facebook, Click The Like Button
ಕೊಚ್ಚಿಯಲ್ಲಿ ಶಾಂತಿ, ಪ್ರೀತಿ, ಸಂತೋಷದ ಸಂದೇಶ ಸಾರಿದ ಟಿವಿಎಸ್ ವಿಗೊ

ಆಗಲೇ ನಗರ ಸುತ್ತಾಡಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ ಟಿವಿಎಸ್ ವಿಗೊ ಸ್ಕೂಟರ್ ಗೆ ಕ್ರಿಸ್ಮಸ್ ರಾತ್ರಿಯಂದು ಸೈಂಟ್ ಜಾರ್ಜ್ ಸೈರೊ-ಮಲಬಾರ್ ಕ್ಯಾಥಲಿಕ್ ಪೋರ್ಟ್ ಚರ್ಚ್ ಗಮನ ಸೆಳೆದಿತ್ತು. ದೇಶದ ಅತ್ಯಂತ ಪುರಾತನ ಕ್ರಿಸ್ತ ದೇವಾಲಯಗಳಲ್ಲಿ ಒಂದಾಗಿರುವ ಇದನ್ನು ಕ್ರಿ.ಶ. 594ರಲ್ಲಿ ನಿರ್ಮಾಣಗೊಳಿಸಲಾಗಿತ್ತು.

ಕೊಚ್ಚಿಯಲ್ಲಿ ಶಾಂತಿ, ಪ್ರೀತಿ, ಸಂತೋಷದ ಸಂದೇಶ ಸಾರಿದ ಟಿವಿಎಸ್ ವಿಗೊ

ಚರ್ಚ್ ಹಾದಿಯತ್ತ ತೆರಳಿದ ನಮಗೆ ಕ್ರಿಸ್ಮಸ್ ನಿಮಿತ್ತ ನಗರದಲ್ಲಿ ಏರ್ಪಡಿಸಲಾಗಿದ್ದ ಕೊಚ್ಚಿ-ಮುಝಿರಿಸ್ ಬಿಯೆನ್ನೆಲ್ ವಸ್ತು ಪ್ರದರ್ಶನ ದರ್ಶನವಾಗಿತ್ತು. ಅಲ್ಲಿಗೆ ತಲುಪಲು ಟಿವಿಎಸ್ ನಲ್ಲಿರುವ ಚುರುಕುತನದ ಸಿಂಗಲ್ ಸಿಲಿಂಡರ್ ಎಂಜಿನನ್ನು ಮೆಚ್ಚಲೇ ಬೇಕು.

ಕೊಚ್ಚಿಯಲ್ಲಿ ಶಾಂತಿ, ಪ್ರೀತಿ, ಸಂತೋಷದ ಸಂದೇಶ ಸಾರಿದ ಟಿವಿಎಸ್ ವಿಗೊ

ಭಾರತಕ್ಕೆ ಸಮುದ್ರ ಮಾರ್ಗವನ್ನು ಕಂಡುಹಿಡಿದ ಮಹಾನ್ ನಾವಿಕ ವಾಸ್ಕೋ ಡ ಗಾಮ ಅವರ ಸಮಾಧಿ ಹೊಂದಿರುವ ಸೈಂಟ್ ಫ್ರಾನ್ಸಿಸ್ ಚರ್ಚ್ ವರೆಗೂ ಟಿವಿಎಸ್ ವಿಗೊ ನಮ್ಮನ್ನು ಸಾಗಿಸಿತ್ತು. 1539ರಲ್ಲಿ ಸಮಾಧಿಯಾಗಿದ್ದ ವಾಸ್ಕೋಡಗಾಮ ಅವರ ದೇಹವನ್ನು ಬಳಿಕ ಲಿಸ್ಬನ್ ಗೆ ವರ್ಗಾಯಿಸಲಾಗಿತ್ತು.

ಕೊಚ್ಚಿಯಲ್ಲಿ ಶಾಂತಿ, ಪ್ರೀತಿ, ಸಂತೋಷದ ಸಂದೇಶ ಸಾರಿದ ಟಿವಿಎಸ್ ವಿಗೊ

ಕೊಚ್ಚಿ ನಗರ ಎಂದಾಕ್ಷಣ ಸ್ವಾದ್ವಿಷ್ಟವಾದ ಭೋಜನ ನೆನಪಾಗುವುದು ಸಹಜ. ಇಲ್ಲಿನ ಜೀವನಾಡಿಯನ್ನು ಅಂಟಿಕೊಂಡಿರುವ ತಾಜಾತನ ತುಂಬುವ ಮೀನುಗಾರಿಕೆಯು ರುಚಿ ಬಾಯಲ್ಲಿ ನೀರೂರಿಸುವಂತಿದೆ.

ಕೊಚ್ಚಿಯಲ್ಲಿ ಶಾಂತಿ, ಪ್ರೀತಿ, ಸಂತೋಷದ ಸಂದೇಶ ಸಾರಿದ ಟಿವಿಎಸ್ ವಿಗೊ

ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮವನ್ನು ಬರಮಾಡಿಕೊಳ್ಳಲು ಫೋರ್ಟ್ ಕೊಚ್ಚಿಯಲ್ಲಿ ವಿಶೇಷ ಹಬ್ಬದ ವಾತವರಣ ಮನೆ ಮಾಡಿತ್ತು. ಇಲ್ಲಿನ ಸಜ್ಜೀಕರಣವನ್ನು ಗಮನಿಸಿದಾಗ ಫೋರ್ಚುಗೀಸ್ ಇತಿಹಾಸ ಮರುಕಳಿಸುವಂತಿದೆ. ಮಕ್ಕಳಿಂದ ಹಿಡಿದು ಮುದಿ ಮುತ್ಸದಿ ವರೆಗಿನ ಜನರು ಬಿಳಿ ಉಡುಪುಗಳನ್ನು ತೊಟ್ಟುಕೊಂಡು ಶಾಂತಿದೂತರಾಗಿ ಹಬ್ಬದಲ್ಲಿ ಭಾಗವಹಿಸಿದ್ದರು.

ಕೊಚ್ಚಿಯಲ್ಲಿ ಶಾಂತಿ, ಪ್ರೀತಿ, ಸಂತೋಷದ ಸಂದೇಶ ಸಾರಿದ ಟಿವಿಎಸ್ ವಿಗೊ

ಕೇರಳದ ಪ್ರಮುಖ ಆಕರ್ಷಣೆಯಾಗಿರುವ ಗಜ ಕೇಸರಿ ಮೆರವಣಿಯು ಕೊಚ್ಚಿನ ಕಾರ್ನಿವಲ್‌ನ ಕೇಂದ್ರ ಬಿಂದುವಾಗಿತ್ತು. ಚೆಂಡೆ, ವಾದ್ಯ ಮೇಳದೊಂದಿಗೆ ಮಾವುತನ ತಾಳಕ್ಕೆ ಆನೆ ನಲಿದಾಡುತ್ತಿತ್ತು.

ಕೊಚ್ಚಿಯಲ್ಲಿ ಶಾಂತಿ, ಪ್ರೀತಿ, ಸಂತೋಷದ ಸಂದೇಶ ಸಾರಿದ ಟಿವಿಎಸ್ ವಿಗೊ

ಸಿಂಕ್ ಬ್ರೇಕ್ ಸಿಸ್ಟಂ ಸೇರಿದಂತೆ ಅದ್ಭುತ ದೇಹ ಸಮತೋಲವನ್ನು ಹೊಂದಿರುವ ವಿಗೊ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತ್ತು. ಬಿಡುವಿಲ್ಲದ ಟ್ರಾಫಿಕ್ ನಡುವೆಯು ಮೊಬೈಲ್ ಚಾರ್ಜ್ ಮುಗಿದು ಹೋಗುವ ಭಯ ಕಾಡುತ್ತಿರಲಿಲ್ಲ. ಇದಕ್ಕಾಗಿ ಚಾರ್ಜಿಂಗ್ ಸಾಕೆಟ್ ಭದ್ರವಾಗಿತ್ತು.

ಕೊಚ್ಚಿಯಲ್ಲಿ ಶಾಂತಿ, ಪ್ರೀತಿ, ಸಂತೋಷದ ಸಂದೇಶ ಸಾರಿದ ಟಿವಿಎಸ್ ವಿಗೊ

ದಿನವಿಡಿ ಕೊಚ್ಚಿಯಲ್ಲಿ ವಿಗೊ ಜೊತೆ ಸುತ್ತಾಡಿದ ನಮ್ಮ ತಂಡದ ಇತಿಹಾಸದ ಸ್ಥಳಗಳನ್ನು ಭೇಟಿ ಮಾಡಿತ್ತಲ್ಲದೆ ಸಮುದ್ರ ಬದಿಯಲ್ಲಿ ಸ್ವಾದ್ವಿಷ್ಟವಾದ ಮೀನಿನ ಭೋಜನವನ್ನು ಸ್ವೀಕರಿಸಿತ್ತು.

ಕೊಚ್ಚಿಯಲ್ಲಿ ಶಾಂತಿ, ಪ್ರೀತಿ, ಸಂತೋಷದ ಸಂದೇಶ ಸಾರಿದ ಟಿವಿಎಸ್ ವಿಗೊ

ಸಮುದ್ರ ತೀರದಲ್ಲಿ ಅಪ್ಪಳಿಸುವ ಅಲೆಯೊಂದಿಗೆ ರೆಸ್ಟೋರೆಂಟ್ ಗ್ರಾಹಕರನ್ನು ಕೈಬೀಸಿ ಕರೆಯುತ್ತಿತ್ತು. ಅಲ್ಲೇ ಬದಿಯಲ್ಲಿ ಪಾರ್ಕಿಂಗ್ ಮಾಡಲು ಯಾವುದೇ ತೊಂದರೆ ಎದುರಾಗಲಿಲ್ಲ. ಹಳೆಯ ಸ್ಕೂಟರ್ (ಚಿತ್ರದಲ್ಲಿ ನೋಡುತ್ತಿರುವಂತೆಯೇ) ಜಮಾನ ಹೇಗೆ ಬದಲಾಗಿದೆ ಎಂಬದನ್ನು ನೀವೇ ಇಲ್ಲಿ ಕಣ್ಣಾರೆ ಕಾಣಬಹುದಾಗಿದೆ.

ಕೊಚ್ಚಿಯಲ್ಲಿ ಶಾಂತಿ, ಪ್ರೀತಿ, ಸಂತೋಷದ ಸಂದೇಶ ಸಾರಿದ ಟಿವಿಎಸ್ ವಿಗೊ

ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೀಟು ಕೆಳಗಡೆ ಸ್ಟೋರೆಜ್, ಸುಲಭ ನಿರ್ವಹಣೆಯ ಎಲೆಕ್ಟ್ರಿಕ್ ಸ್ಟ್ಯಾರ್ಟ್ ಮತ್ತು ಟೆಲಿಸ್ಕಾಪಿಕ್ ಫಾರ್ಕ್ ಇತ್ಯಾದಿ ವಿಶ್ವ ದರ್ಜೆಯ ತಂತ್ರಜ್ಞಾನಗಳು ಟಿವಿಎಸ್ ವಿಗೊ ಪ್ರಯಾಣವನ್ನು ಉಲ್ಲಾಸದಾಯಕವಾಗಿಸಲಿದೆ.

ಕೊಚ್ಚಿಯಲ್ಲಿ ಶಾಂತಿ, ಪ್ರೀತಿ, ಸಂತೋಷದ ಸಂದೇಶ ಸಾರಿದ ಟಿವಿಎಸ್ ವಿಗೊ

ಕ್ರಿಸ್ಮಸ್ ಹಬ್ಬದ ವೇಳೆಯಲ್ಲಿ ವಿಶೇಷ ಉಡುಪು ಧರಿಸಿ ಬಂದು ಶುಭಾಶಯ ಸಂದೇಶ ಕೋರುವ ಸಂತ ವೇಷಧಾರಿಗಳಿಗೂ ಚಾಕೆಲೇಟುಗಳನ್ನಿಟ್ಟು ಮಕ್ಕಳನ್ನು ತಲುಪಲು ಟಿವಿಎಸ್ ವಿಗೊ ಹೆಚ್ಚು ಪ್ರಯೋಜನಕಾರಿಯೆನಿಸಿದೆ.

ಕೊಚ್ಚಿಯಲ್ಲಿ ಶಾಂತಿ, ಪ್ರೀತಿ, ಸಂತೋಷದ ಸಂದೇಶ ಸಾರಿದ ಟಿವಿಎಸ್ ವಿಗೊ

ಕೊಚ್ಚಿನ ನಗರದಲ್ಲಿ ಕ್ರಿಸ್ಮಸ್ ಹಬ್ಬದ ವೇಳೆಯಲ್ಲಿ ಚರ್ಚ್ ಮುಂಭಾಗದಲ್ಲಿ ಕಂಡುಬಂದಿರುವ ಮಗದೊಂದು ರೋಮಾಂಚನ ಮೂಡಿಸುವ ದೃಶ್ಯವಿದು. ಕ್ರಿಸ್ಮಸ್ ಮತ ಸೌಹಾರ್ದತೆಯನ್ನು ಇಲ್ಲಿ ಪಸರಿಸುತ್ತಿದೆ.

ಕೊಚ್ಚಿಯಲ್ಲಿ ಶಾಂತಿ, ಪ್ರೀತಿ, ಸಂತೋಷದ ಸಂದೇಶ ಸಾರಿದ ಟಿವಿಎಸ್ ವಿಗೊ

ಟಿವಿಎಸ್ ವಿಗೊ ಜೊತೆಗಿನ ಹಬ್ಬದ ಸಂಭ್ರಮ ಇಲ್ಲಿಗೆ ಕೊನೆಯಾಗುವುದಿಲ್ಲ. ನಮ್ಮ ಮುಂದಿನ ಪ್ರಯಾಣ ಹೊಸ ವರ್ಷಕ್ಕೆ ಬೆಂಗಳೂರು ನಗರವನ್ನು ತಲುಪಲಿದೆ.

ಕೊಚ್ಚಿಯಲ್ಲಿ ಕ್ರಿಸ್ಮಸ್ ಹಬ್ಬದಂದು ಸಂಭ್ರಮದ ಮನೆ ಮಾಡಿದ ಟಿವಿಎಸ್ ವಿಗೊ - ವಿಡಿಯೋ ವೀಕ್ಷಿಸಿ

ಇವನ್ನೂ ಓದಿ

'ಕ್ವೀನ್ ಆಫ್ ಅರೇಬಿಯನ್ ಸೀ' ಕೊಚ್ಚಿಯಲ್ಲಿ ಮನಮೆಚ್ಚಿದ ವಿಗೊ

Read more on ಟಿವಿಎಸ್ tvs
English summary
Peace, Love, And Joy At Cochin This Christmas On The TVS Wego
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark