ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ವೇಳೆಯಲ್ಲಿ ಅಮೂಲ್ಯ ಜೀವಗಳಿಗೆ ಬೆಳಕು ಚೆಲ್ಲಿದ ಟಿವಿಎಸ್ ವಿಗೊ

Written By:

ಪುಣೆಯ ಪಾರ್ವತಿ ಬೆಟ್ಟದಲ್ಲಿ ದಂತೆರಾಸ್ ರಾತ್ರಿಯ ಆಹ್ಲಾದಕರ ಸನ್ನವೇಶದ ಬಳಿಕ ನಮ್ಮ ತಂಡವು ಟಿವಿಎಸ್ ವಿಗೊ ಜೊತೆಗೂಡಿ ಬೆಳಕಿನ ಹಬ್ಬ ದೀಪಾವಳಿ ಹಬ್ಬವನ್ನು ಆಚರಿಸಲು ಅತಿ ವಿಶಿಷ್ಟವಾದ ತಾಣಕ್ಕೆ ಪ್ರಯಾಣವನ್ನು ಬೆಳೆಸಿತ್ತು. ಪುಣೆ ನಗರೆದೆಲ್ಲೆಡೆ ಲಕ್ಷ್ಮೀ ದೇವಿಯನ್ನು ಬರ ಮಾಡಿಕೊಳ್ಳಲು ಸಜ್ಜಾಗುತ್ತಿದ್ದಂತೆಯೇ ನಮ್ಮ ತಂಡದ ಸದಸ್ಯರು ನೇರವಾಗಿ ಕೆಲವು ಅಮೂಲ್ಯ ಜೀವನದಲ್ಲಿ ಬೆಳಕು ಚೆಲ್ಲುವತ್ತ ಗಮನ ಹಾಯಿಸಿತ್ತು.

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ವೇಳೆಯಲ್ಲಿ ಅಮೂಲ್ಯ ಜೀವಗಳಿಗೆ ಬೆಳಕು ಚೆಲ್ಲಿದ ಟಿವಿಎಸ್ ವಿಗೊ

ಸಂತೋಷವನ್ನು ಇತರ ಜೊತೆಗೆ ಹಂಚಿಕೊಳ್ಳುವುದರಿಂದ ಸಿಗುವ ಸಂತೃಪ್ತಿ ಬೇರೊಂದಿಲ್ಲ ಎಂಬುದನ್ನು ನಾವು ಮನಗಂಡಿದ್ದೆವು. ಪುಣೆಯಲ್ಲಿ ಸ್ಥಳೀಯ ಹಿತೈಷಿಗಳಿಂದ ಮಾಹಿತಿಯನ್ನು ಕಲೆ ಹಾಕಿದ ನಮ್ಮ ತಂಡವು ನೇರವಾಗಿ ಮಹೆರ್ ಆಶ್ರಮದತ್ತ ಪ್ರಯಾಣ ಬೆಳೆಸಿತ್ತು.

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ವೇಳೆಯಲ್ಲಿ ಅಮೂಲ್ಯ ಜೀವಗಳಿಗೆ ಬೆಳಕು ಚೆಲ್ಲಿದ ಟಿವಿಎಸ್ ವಿಗೊ

ಮಹೆರ್ ಆಶ್ರಮದ ಕುರಿತು ಮಾತನಾಡುವುದಾದ್ದಲ್ಲಿ ಇಲ್ಲಿ ನಿರ್ಗತಿಕ ಮಹಿಳೆ, ಮಕ್ಕಳ ಜೊತೆಗೆ ಪುರುಷರಿಗೂ ಆಶ್ರಯತಾಣವಾಗಿದೆ. ಪ್ರಸ್ತುತ ಸಹಾಯಾರ್ಥ ಸಂಸ್ಥೆಯನ್ನು ಸಿಸ್ಟರ್ ಲೂಸಿ ಕುರಿಯನ್ 1997ನೇ ಇಸವಿಯಲ್ಲಿ ಸ್ಥಾಪಿಸಿದ್ದರು. ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳು ಎದುರಿಸುತ್ತಿರುವ ಸಂಕಷ್ಟಗಳ ಮೂಲ ಕಾರಣವನ್ನು ಅರಿತು ಅದಕ್ಕೆ ಪರಿಹಾರ ಹುಡುಕಿ ಮಹಳೆಯರು ಮಕ್ಕಳು ಸಹಬಾಳ್ವೆ ಜೀವನ ನಡೆಸುವುದನ್ನು ಹುರಿದುಂಬಿಸುತ್ತಿದೆ.

ಅಮೂಲ್ಯ ಜೀವನದಲ್ಲಿ ಸಂತಸ ಮೂಡಿಸಿದ ಟಿವಿಎಸ್ ವಿಗೊ

ಅಮೂಲ್ಯ ಜೀವನದಲ್ಲಿ ಸಂತಸ ಮೂಡಿಸಿದ ಟಿವಿಎಸ್ ವಿಗೊ

ದೀಪಾವಳಿ ಬೆಳಕಿನ ಹಬ್ಬದ ಸಂದರ್ಭದಲ್ಲಿ ಕೆಲವು ಅಮೂಲ್ಯ ಜೀವಗಳಲ್ಲಿ ಸಂತಸವನ್ನು ಮೂಡಿಸುವಲ್ಲಿ ಟಿವಿಎಸ್ ವಿಗೊ ಯಶಸ್ವಿಯಾಗಿತ್ತು. ಆಶ್ರಮಕ್ಕೆ ತೆರಳುವ ವೇಳೆಯಲ್ಲಿ ನಮ್ಮ ಸ್ಕೂಟರ್ ಎರಡು ಪ್ರಮುಖ ತಾಣಗಳನ್ನು ದಾಟಿತ್ತು. ಮಹಾರಾಷ್ಟ್ರದ ಸಾಂಪ್ರದಾಯಿಕ ರುಚಿಕರವಾದ ತಿನಿಸು ಭಾಕರ್ ವಾಡಿ ತಯಾರಿಸುವ 1950ರ ಚಿಟಾಲೆ ಬಂಧು ಮಿಠಾಯಿವಾಲೆಯಲ್ಲಿ ಮೊದಲು ನಿಲುಗಡೆಯಾತಿಯು.

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ವೇಳೆಯಲ್ಲಿ ಅಮೂಲ್ಯ ಜೀವಗಳಿಗೆ ಬೆಳಕು ಚೆಲ್ಲಿದ ಟಿವಿಎಸ್ ವಿಗೊ

ಅಲ್ಲಿಂದ ತುಸು ಮುಂದಕ್ಕೆ ತೆರಳಿದಾಗ ಹಣ್ಣು ಹಂಪಲುಗಳನ್ನು ಮಾರುವ ಫಾಲ್ ವಾಲಾ ಪುಣೆಯ ತಾಜಾ ಹಣ್ಣುಗಳು ನಮ್ಮ ಗಮನ ಸೆಳೆಯಿತು. ಹಿಂದೆ ಮುಂದೆ ನೋಡದ ನಮ್ಮ ತಂಡ ವಿಗೊದಲ್ಲಿ ಸಾಧ್ಯವಾದಷ್ಟು ತಿಂಡಿ, ತಿನಿಸು ಮತ್ತು ಹಣ್ಣು ಹಂಪಲುಗಳನ್ನು ಜೊತೆಯಲ್ಲಿ ಒಯ್ದವು.

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ವೇಳೆಯಲ್ಲಿ ಅಮೂಲ್ಯ ಜೀವಗಳಿಗೆ ಬೆಳಕು ಚೆಲ್ಲಿದ ಟಿವಿಎಸ್ ವಿಗೊ

ಆಶ್ರಮದತ್ತ ದಾಪುಗಾಲನ್ನಿಟ್ಟ ನಮ್ಮ ಮನಸ್ಸಲ್ಲಿ ಈ ಎಲ್ಲ ಹಣ್ಣು ಹಂಪಲುಗಳು ಅಲ್ಲಿನ ಮಕ್ಕಳ ನಗುಮುಖಕ್ಕೆ ಕಾರಣವಾಗಲಿದೆ ಎಂಬ ಭಾವನೆಯಿತ್ತು. ಆಶ್ರಮದತ್ತ ಹಾದಿ ಉದ್ದಕ್ಕೂ ಅತ್ಯುತ್ತಮ ಹ್ಯಾಂಡ್ಲಿಂಗ್ ಪ್ರದಾನ ಮಾಡುವಲ್ಲಿ ನಮ್ಮ ಮೆಚ್ಚಿನ ಟಿವಿಎಸ್ ವಿಗೊ ಯಶ ಕಂಡಿತ್ತು. ಹೆಚ್ಚುವರಿ ಲಗ್ಗೇಜ್ ಒಯ್ಯಲು ನಮ್ಮ ಸ್ಕೂಟರ್ ಗೆ ಯಾವುದೇ ಸಮಸ್ಯೆ ಎದುರಾಗಿಲ್ಲ.

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ವೇಳೆಯಲ್ಲಿ ಅಮೂಲ್ಯ ಜೀವಗಳಿಗೆ ಬೆಳಕು ಚೆಲ್ಲಿದ ಟಿವಿಎಸ್ ವಿಗೊ

ಆಶ್ರಮ ತಲುಪಿದ ನಮ್ಮ ತಂಡದ ಸದಸ್ಯರ ಅಲ್ಲಿನ ಕ್ರಿಯಾಶೀಲರಾದ ಮಕ್ಕಳು ನಗುಮುಖದಿಂದಲೇ ಬರಮಾಡಿಕೊಂಡರು. ಭೇಟಿಯ ಹಿಂದಿನ ಕಾರಣ ತಿಳಿಯುವ ಅತೀವ ಕುತೂಹಲ ಭರಿತರಾದ ಮಕ್ಕಳು ನಮ್ಮ ಬಳಿ ಹಿಂದು ಮುಂದು ನೋಡದೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿದರು. ಮಕ್ಕಳ ಪ್ರಶ್ನೆಗಳಿಗೆ ಅವರದ್ದೇ ಶೈಲಿಯಲ್ಲಿ ಉತ್ತರ ನೀಡಿದ್ದಲ್ಲಿ ಮಾತ್ರ ಇಲ್ಲಿಗೆ ಭೇಟಿ ನೀಡುವ ಹಿಂದಿರುವ ಕಾರಣ ಅವರಿಗೆ ಅರ್ಥವಾಗಲಿದೆ.

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ವೇಳೆಯಲ್ಲಿ ಅಮೂಲ್ಯ ಜೀವಗಳಿಗೆ ಬೆಳಕು ಚೆಲ್ಲಿದ ಟಿವಿಎಸ್ ವಿಗೊ

ಒಂದರ ಮೇಲೊಂದರಂತೆ ನಮಗೆ ಎದುರಾದ 20ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಲಾಯಿತು. ಅದರಲ್ಲೊಂದು ಸ್ವಾರಸ್ಯ ಮೂಡಿಸಿದ ಪ್ರಶ್ನೆಯೆಂದರೆ ಟಿವಿಎಸ್ ವಿಗೊ ಬಣ್ಣ ಯಾವುದು? ಅದಕ್ಕೆ ಮಕ್ಕಳ ನಡುವಿನಿಂದಲೇ ಉತ್ತರ ಬಂದಿತ್ತು. ನಿನಗೇನು ಕಾಣಿಸಲ್ವೇ? ಎಂಬ ಉತ್ತರ ಬಂದಾಗಲೇ ಎಲ್ಲ ಮಕ್ಕಳು ನಕ್ಕು ನಲಿದರು. ಹೌದು ಕೆಂಪು, ನೀಲಿ, ಬಿಳಿ ಬಣ್ಣಗಳ ಟಿವಿಎಸ್ ವಿಗೊ ಕಂಗೊಳಿಸುತ್ತಿದ್ದವು.

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ವೇಳೆಯಲ್ಲಿ ಅಮೂಲ್ಯ ಜೀವಗಳಿಗೆ ಬೆಳಕು ಚೆಲ್ಲಿದ ಟಿವಿಎಸ್ ವಿಗೊ

ಇದು ಹುಡುಗ ಮತ್ತು ಹುಡುಗಿಯರ ನಡುವೆ ಎರಡು ಗುಂಪು ಸೃಷ್ಟಿ ಮಾಡಿ ಟಿವಿಎಸ್ ವಿಗೊ ಜೊತೆ ಆಡವಾಡಲು ಪ್ರೋತ್ಸಾಹ ತುಂಬಿತ್ತು. ಕೆಂಪು ವರ್ಣವು ಹುಡುಗಿಯರನ್ನು ಮತ್ತು ನೀಲಿ ಬಣ್ಣವು ಹುಡುಗರನ್ನು ಬೆಂಬಲಿಸುತ್ತಿದ್ದವು. ಮಕ್ಕಳ ಮುಖದಲ್ಲಿ ಹರ್ಷವನ್ನು ನೋಡಿದ ನಾವು ಅಲ್ಲೇ ಟಿವಿಎಸ್ ವಿಗೊ ರೈಡಿಂಗ್ ಗೆ ಮುಂದಾದೆವು.

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ವೇಳೆಯಲ್ಲಿ ಅಮೂಲ್ಯ ಜೀವಗಳಿಗೆ ಬೆಳಕು ಚೆಲ್ಲಿದ ಟಿವಿಎಸ್ ವಿಗೊ

ಇಂದಿನ ಮಕ್ಕಳು ನಾಳಿನ ಭವಿಷ್ಯ ಎಂಬ ಗಾದೆ ಮಾತಿನಂತೆ ದ್ವಿಚಕ್ರ ಚಾಲನೆ ವೇಳೆ ಹೆಲ್ಮೆಟ್ ಗಳಂತಹ ಸುರಕ್ಷಾ ವೈಶಿಷ್ಟ್ಯಗಳನ್ನು ಧರಿಸುವುದರ ಮಹತ್ವದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿದೆವು.

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ವೇಳೆಯಲ್ಲಿ ಅಮೂಲ್ಯ ಜೀವಗಳಿಗೆ ಬೆಳಕು ಚೆಲ್ಲಿದ ಟಿವಿಎಸ್ ವಿಗೊ

ದಿನವಿಡೀ ಆಶ್ರಮದಲ್ಲಿ ಮಕ್ಕಳ ಜೊತೆ ಸಮಯ ಕಳೆದಂತೆ ರಾತ್ರಿಯ ಕಗ್ಗತ್ತಲು ಆವರಿಸಿರುವುದು ಅರಿವಿಗೆ ಬರಲಿಲ್ಲ. ನಿಜಕ್ಕೂ ಮಕ್ಕಳ ಮನ ಗೆಲ್ಲುವಲ್ಲಿ ಟಿವಿಎಸ್ ವಿಗೊ ಯಶಸ್ವಿಯಾಗಿತ್ತು.

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ವೇಳೆಯಲ್ಲಿ ಅಮೂಲ್ಯ ಜೀವಗಳಿಗೆ ಬೆಳಕು ಚೆಲ್ಲಿದ ಟಿವಿಎಸ್ ವಿಗೊ

ಈಗ ಬೆಳಕಿನ ಹಬ್ಬದ ಸಂಭ್ರಮವನ್ನು ಬರಮಾಡಿಕೊಳ್ಳುವ ಸಮಯ. ಹಾಗಿರುವಾಗ ನಮ್ಮ ಮಹೆರ್ ಆಶ್ರಮ ಯಾತ್ರೆಯು ಜೀವನದ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದ್ದೆವು. ರಾತ್ರಿಯಿಡಿ ನಿದ್ರೆಯೇ ಬರಲಿಲ್ಲ. ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದ ಸಂತೃಪ್ತಿಯಲ್ಲಿ ನಮ್ಮ ತಂಡವು ದೀಪೋತ್ಸವ ಆಚರಿಸಲು ಸರಸ್ ಬೌಗ್ ನತ್ತ ಹೆಜ್ಜೆ ಹಾಕಿದ್ದವು.

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ವೇಳೆಯಲ್ಲಿ ಅಮೂಲ್ಯ ಜೀವಗಳಿಗೆ ಬೆಳಕು ಚೆಲ್ಲಿದ ಟಿವಿಎಸ್ ವಿಗೊ

ಅಲ್ಲಿಗೆ ಸಮೀಪಿಸುತ್ತಿದ್ದಂತೆಯೇ ನೂರಾರು ಮಂದಿ ಬೆಳಕಿನ ಗೂಡು ದೀಪಗಳನ್ನು ಕೈಯಲ್ಲಿ ಹಿಡಿದು ನಮ್ಮನ್ನು ಬರಮಾಡಿಕೊಂಡರು. ಇಡೀ ನಗರದಲ್ಲಿ ಸಂತಸದ ಕಹಳೆ ಮನೆ ಮಾಡಿತ್ತು.

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ವೇಳೆಯಲ್ಲಿ ಅಮೂಲ್ಯ ಜೀವಗಳಿಗೆ ಬೆಳಕು ಚೆಲ್ಲಿದ ಟಿವಿಎಸ್ ವಿಗೊ

ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ದೀಪಗಳ ಹಬ್ಬ ದೀಪಾವಳಿ ಕೇವಲ ಪುಣೆಗಷ್ಟೇ ಸೀಮಿತವಲ್ಲ. ಸಾಂಪ್ರದಾಯಿಕ ನಗರಿಯಲ್ಲಿ ಟಿವಿಎಸ್ ವಿಗೊ ಜೊತೆಗಿನ ಯಾತ್ರೆಯು ನಿಜಕ್ಕೂ ಸ್ಮರಣೀಯವೆನಿಸಿತ್ತು.

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ವೇಳೆಯಲ್ಲಿ ಅಮೂಲ್ಯ ಜೀವಗಳಿಗೆ ಬೆಳಕು ಚೆಲ್ಲಿದ ಟಿವಿಎಸ್ ವಿಗೊ

ದೀಪಾವಳಿ ಹಬ್ಬದ ನಾಡಿನ ಜನರಿಗೆಲ್ಲ ಸಂತಸವನ್ನು ಸ್ನೇಹ ಸಹಬಾಳ್ವೆಯ ಸಂಕೇತವಾಗಿ ಇಡೀ ದೇಶವನ್ನು ಪಸರಿಸಲಿ ಎಂಬುದು ನಮ್ಮ ಹಾರೈಕೆಯಾಗಿದೆ. ಟಿವಿಎಸ್ ಜೊತೆಗೂಡಿ ಕೋಲ್ಕತ್ತಾದ ದುರ್ಗಾ ದೇವಿ ಸಂಭ್ರಮದ ವಾತಾವರಣದಿಂದ ಆರಂಭವಾದ ನಮ್ಮ ಯಾತ್ರೆಯು ಪುಣೆಯಲ್ಲಿ ದೀಪಾವಳಿ ಹಬ್ಬವನ್ನು ಮುಗಿಸಿಕೊಂಡು ಮುಂದಿನ ತಿಂಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಿಕೊಳ್ಳಲು ನೇರವಾಗಿ ದೇವರ ಸ್ವಂತ ನಾಡು ಕೊಚ್ಚಿಗೆ ಸವಾರಿ ಬೆಳೆಸಲಿದೆ. ನಮ್ಮ ಜೊತೆಗೆ ನೀವು ಇರ್ತಿರಲ್ವಾ? ಹ್ಯಾಪಿ ರೈಡಿಂಗ್!

ಇವನ್ನೂ ಓದಿ

ಇವನ್ನೂ ಓದಿ

ಪುಣೆಯಲ್ಲಿ ಟಿವಿಎಸ್ ವಿಗೊ ಜೊತೆ ದೀಪಗಳ ಹಬ್ಬದ ಸಂಭ್ರಮ

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

ಆಶ್ಚರ್ಯಚಕಿತಗೊಳಿಸಿದ ದುರ್ಗಾ ಪೂಜೆ ರಾತ್ರಿ ಸಂಭ್ರಮದ ಕ್ಷಣಗಳು

Read more on ಟಿವಿಎಸ್ tvs
English summary
Lights And Unbridled Joy As #WeGo Light Up A Few Lives This Diwali In Pune

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark