ಲಕ್ಷಗಟ್ಟಲೆ ಬೆಲೆಬಾಳುವ ಇಟಲಿಯ ಐಕಾನಿಕ್ ಸ್ಕೂಟರ್ ಭಾರತಕ್ಕೆ

Written By:

ಹಬ್ಬದ ಸಂಭ್ರಮದಲ್ಲಿರುವ ದೇಶದ ನಿವಾಸಿಗಳಿಗೆ ಇಟಲಿಯ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ವೆಸ್ಪಾ, ಮುಂಬರುವ ಅಕ್ಟೋಬರ್ 25ರಂದು 946 ಎಂಪೋರಿಯೊ ಅರ್ಮಾನಿ ಮತ್ತು 70ನೇ ವಾರ್ಷಿಕ ಎಡಿಷನ್ ಸ್ಕೂಟರ್ ಗಳನ್ನು ಬಿಡುಗಡೆ ಮಾಡಲಿದೆ. ಸರಿ ಸುಮಾರು 10 ಲಕ್ಷದಷ್ಟು ಬೆಲೆಬಾಳುವ ಈ ಸ್ಕೂಟರ್ ನಲ್ಲಿ ಅಂತದ್ದೇನಿದೆ ? ಸಂಪೂರ್ಣ ಮಾಹಿತಿಗಳಿಗಾಗಿ ಲೇಖನದತ್ತ ಕಣ್ಣಾಯಿಸಿರಿ.

ಲಕ್ಷಗಟ್ಟಲೆ ಬೆಲೆಬಾಳುವ ಇಟಲಿಯ ಐಕಾನಿಕ್ ಸ್ಕೂಟರ್ ಭಾರತಕ್ಕೆ

ಪ್ರಸಕ್ತ ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿರುವ ವೆಸ್ಪಾ 946 ಎಂಪೋರಿಯೊ ಅರ್ಮಾನಿ ಸ್ಕೂಟರನ್ನು ವೆಸ್ಪಾ 946 ತಳಹದಿಯಲ್ಲಿ ನಿರ್ಮಿಸಲಾಗಿದೆ.

ಲಕ್ಷಗಟ್ಟಲೆ ಬೆಲೆಬಾಳುವ ಇಟಲಿಯ ಐಕಾನಿಕ್ ಸ್ಕೂಟರ್ ಭಾರತಕ್ಕೆ

ಜಾರ್ಜಿಯೊ ಅರ್ಮಾನಿ ಫೌಂಡೇಷನ್ 40ನೇ ವಾರ್ಷಿಕೋತ್ಸವ ಮತ್ತು ಪಿಯಾಜಿಯೊ ಸಂಸ್ಥೆಯ 130ನೇ ಜನ್ಮದಿನದ ಅಂಗವಾಗಿ ನೂತನ ಸ್ಕೂಟರನ್ನು ಜಾರ್ಜಿಯೊ ಅರ್ಮಾನಿ ಮತ್ತು ಪಿಯಾಜಿಯೊ ಜಂಟಿಯಾಗಿ ಅಭಿವೃದ್ಧಿಪಡಿಸಿದೆ.

ಲಕ್ಷಗಟ್ಟಲೆ ಬೆಲೆಬಾಳುವ ಇಟಲಿಯ ಐಕಾನಿಕ್ ಸ್ಕೂಟರ್ ಭಾರತಕ್ಕೆ

ಸ್ಕೂಟರ್ ಬಣ್ಣವು ಪ್ರಮುಖ ಆಕರ್ಷಣೆಯಾಗಲಿದೆ. ನಿರ್ದಿಷ್ಟ ಬೆಳಕಿನಲ್ಲಿ ಮಾತ್ರ ಗೋಚರಿಸಲಿರುವ ಬಣ್ಣದ ಸಂಯೋಜನೆಯು ವಿಶಿಷ್ಟತೆ ಪ್ರದಾನ ಮಾಡಲಿದೆ.

ಲಕ್ಷಗಟ್ಟಲೆ ಬೆಲೆಬಾಳುವ ಇಟಲಿಯ ಐಕಾನಿಕ್ ಸ್ಕೂಟರ್ ಭಾರತಕ್ಕೆ

ಸ್ಟ್ಯಾಂಡರ್ಡ್ 946 ಮಾದರಿಯಂತೆ ನೂತನ ಸ್ಕೂಟರ್ 125 ಸಿಸಿ ಫೋರ್ಸ್ಡ್ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಫೋರ್ಟ್ ಇಂಜೆಕ್ಟಡ್ ಎಂಜಿನ್ ನಿಂದ ನಿಯಂತ್ರಿಸ್ಪಡಲದ್ದು, 11.42 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಸಿವಿಟಿ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಲಕ್ಷಗಟ್ಟಲೆ ಬೆಲೆಬಾಳುವ ಇಟಲಿಯ ಐಕಾನಿಕ್ ಸ್ಕೂಟರ್ ಭಾರತಕ್ಕೆ

ಮುಂಭಾಗ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಜೋಡಣೆ ಮಾಡಲಾಗಿದೆ. ಇನ್ನುಳಿದಂತೆ 8.5 ಲೀಟರ್ ಗಳ ಇಂಧನ ಟ್ಯಾಂಕ್ ಲಗತ್ತಿಸಲಾಗಿದೆ.

ಲಕ್ಷಗಟ್ಟಲೆ ಬೆಲೆಬಾಳುವ ಇಟಲಿಯ ಐಕಾನಿಕ್ ಸ್ಕೂಟರ್ ಭಾರತಕ್ಕೆ

ವೆಸ್ಪಾ 70ನೇ ವಾರ್ಷಿಕ ಎಡಿಷನ್ ಅಝುರೊ 70 ಅಥವಾ ಜಾರ್ಜಿಯೊ 70 ಬಣ್ಣಗಳಲ್ಲಿ ಲಭ್ಯವಾಗಲಿದೆ. ಇದು ತಿಳಿ ನೀಲಿ ಬಣ್ಣ ಹಾಗೂ ತಿಳಿ ಬೆಳ್ಳಿ ಬೂದು ಬಣ್ಣಗಳಲ್ಲಿ ಲಭ್ಯವಾಗಲಿದೆ.

ಲಕ್ಷಗಟ್ಟಲೆ ಬೆಲೆಬಾಳುವ ಇಟಲಿಯ ಐಕಾನಿಕ್ ಸ್ಕೂಟರ್ ಭಾರತಕ್ಕೆ

ಈ ಸ್ಪೆಷಲ್ ಎಡಿಷನ್ ಸ್ಕೂಟರ್ ಬೂದು ಬಣ್ಣದ ಚಕ್ರಗಳು, ಕಪ್ಪು ವರ್ಣದ ಲೆಥರ್ ಸೀಟು, ಹಿಂದುಗಡೆ ಕ್ರೋಮ್ ಲಗ್ಗೇಜ್ ರಾಕ್ ಮತ್ತು ಕಪ್ಪು ಲೆಥರ್ ಬ್ಯಾಗ್ ಗಳನ್ನು ಗಿಟ್ಟಿಸಿಕೊಳ್ಳಲಿದೆ.

ಲಕ್ಷಗಟ್ಟಲೆ ಬೆಲೆಬಾಳುವ ಇಟಲಿಯ ಐಕಾನಿಕ್ ಸ್ಕೂಟರ್ ಭಾರತಕ್ಕೆ

ಎಲ್ ಇಡಿ ಹೆಡ್ ಲ್ಯಾಂಪ್, ಟೈಲ್ ಲೈಟ್ ಹಾಗೂ ಇಂಡಿಕೇಟರ್, ಎಲ್ ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕ್ಲಾಸಿಕ್ ರೇಖೆಗಳು ಇತ್ಯಾದಿ ವೈಶಿಷ್ಟ್ಯಗಳು ಕಂಡುಬರಲಿದೆ.

ಲಕ್ಷಗಟ್ಟಲೆ ಬೆಲೆಬಾಳುವ ಇಟಲಿಯ ಐಕಾನಿಕ್ ಸ್ಕೂಟರ್ ಭಾರತಕ್ಕೆ

ಅಷ್ಟಕ್ಕೂ ವೆಸ್ಪಾ 946 ಎಂಪೋರಿಯೊ ಅರ್ಮಾನಿ ಅಗ್ಗದ ಬೆಲೆಯಲ್ಲಿ ಸಿಗಲಿದೆ ಎಂದು ಅಂದುಕೊಂಡರೆ ತಪ್ಪಾದಿತು. ಇದು 8ರಿಂದ 10 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

Read more on ವೆಸ್ಪಾ vespa
English summary
Vespa To Launch An Extremely Special Scooter In India On October 25
Story first published: Tuesday, October 18, 2016, 12:43 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark