2017ರಲ್ಲಿ ಭಾರತಕ್ಕೆ ಬರುತ್ತಾ ಎಲೆಕ್ಟ್ರಿಕ್ ವೆಸ್ಪಾ ಸ್ಕೂಟರ್?

ಜಗತ್ತಿನ ಅತಿ ಪುರಾತನ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಪಿಯಾಜಿಯೊ, ಸುಸ್ಥಿರ ಪರಿಸರದ ರಚನೆಯ ನಿಟ್ಟಿನಲ್ಲಿ ಐಕಾನಿಕ್ ವೆಸ್ಪಾ ಸ್ಕೂಟರ್ ಗೆ ವಿದ್ಯುತ್ ಸ್ಪರ್ಶವನ್ನು ತುಂಬಲಿದೆ.

By Nagaraja

ಪರಿಸರ ಸ್ನೇಹಿ ವಾಹಕಗಳನ್ನು ನಿರ್ಮಿಸುವ ಮೂಲಕ ಇಂಧನ ಚಾಲಿತ ವಾಹನಗಳಿಗೆ ಬದಲಿ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳುವ ಇರಾದೆಯಲ್ಲಿರುವ ಇಟಲಿಯ ಮೂಲದ ಪಿಯಾಜಿಯೊ ಸಂಸ್ಥೆ ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ನಿಕಟ ಭವಿಷ್ಯದಲ್ಲೇ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

2017ರಲ್ಲಿ ಭಾರತಕ್ಕೆ ಬರುತ್ತಾ ಎಲೆಕ್ಟ್ರಿಕ್ ವೆಸ್ಪಾ ಸ್ಕೂಟರ್?

2016 ಮಿಲಾನ್ ಮೋಟಾರ್ ಸೈಕಲ್ ಶೋದಲ್ಲಿ ಪ್ರದರ್ಶಿಸಿರುವ ವೆಸ್ಪಾ ಎಲೆಕ್ಟ್ರಿಕಾ ಮುಂದಿನ ವರ್ಷದಲ್ಲಿ ಭಾರತವನ್ನು ತಲುಪುವ ಸಾಧ್ಯತೆಗಳಿವೆ.

2017ರಲ್ಲಿ ಭಾರತಕ್ಕೆ ಬರುತ್ತಾ ಎಲೆಕ್ಟ್ರಿಕ್ ವೆಸ್ಪಾ ಸ್ಕೂಟರ್?

ಪರಿಸರಕ್ಕೆ ಹಾನಿಯನ್ನುಂಟು ಮಾಡದೆ ಸುಸ್ಥಿರ ವಾಹಕಗಳನ್ನು ನಿರ್ಮಿಸುವುದರಲ್ಲಿ ವೆಸ್ಪಾ ಸದಾ ಬದ್ಧತೆಯನ್ನು ಪ್ರದರ್ಶಿಸಿದೆ. ಇದರ ಫಲವಾಗಿಯೇ ನೂತನ ಎಲೆಕ್ಟ್ರಿಕ್ ಸ್ಕೂಟರ್ ತಲೆಯೆತ್ತಲಿದೆ.

2017ರಲ್ಲಿ ಭಾರತಕ್ಕೆ ಬರುತ್ತಾ ಎಲೆಕ್ಟ್ರಿಕ್ ವೆಸ್ಪಾ ಸ್ಕೂಟರ್?

ಇಲ್ಲಿ ಕಂಡುಬಂದಿರುವ ಗಮನಾರ್ಹ ಸಂಗತಿಯೆಂದರೆ ಕ್ಲಾಸಿಕ್ ಸ್ಕೂಟರ್ ಗಳಿಗೆ ಹೆಸರುವಾಸಿಯಾಗಿರುವ ವೆಸ್ಪಾದ ರೆಟ್ರೊ ಶೈಲಿಯನ್ನು ಎಲೆಕ್ಟ್ರಿಕ್ ಸ್ಕೂಟರ್ ನಲ್ಲೂ ಕಾಪಾಡಿಕೊಳ್ಳಲಾಗಿದೆ.

2017ರಲ್ಲಿ ಭಾರತಕ್ಕೆ ಬರುತ್ತಾ ಎಲೆಕ್ಟ್ರಿಕ್ ವೆಸ್ಪಾ ಸ್ಕೂಟರ್?

ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ಉಕ್ಕಿನ ದೇಹ ರಚನೆಯನ್ನು ವೆಸ್ಪಾ ವಿದ್ಯುತ್ ಚಾಲಿತ ವಾಹನ ಪಡೆಯಲಿದೆ.

2017ರಲ್ಲಿ ಭಾರತಕ್ಕೆ ಬರುತ್ತಾ ಎಲೆಕ್ಟ್ರಿಕ್ ವೆಸ್ಪಾ ಸ್ಕೂಟರ್?

ಇನ್ನು ವೆಸ್ಪಾ ವಿದ್ಯುತ್ ಚಾಲಿತ ಸ್ಕೂಟರ್ ನ ವ್ಯಾಪ್ತಿ, ಚಾರ್ಜಿಂಗ್ ಇತ್ಯಾದಿ ಬಗೆಗಿನ ಮಹತ್ವಪೂರ್ಣ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.

2017ರಲ್ಲಿ ಭಾರತಕ್ಕೆ ಬರುತ್ತಾ ಎಲೆಕ್ಟ್ರಿಕ್ ವೆಸ್ಪಾ ಸ್ಕೂಟರ್?

2017ರಲ್ಲಿ ಯುರೋಪ್ ಖಂಡವನ್ನು ತಲುಪಲಿರುವ ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್ ಬಳಿಕ ಭಾರತದಂತಹ ಬೆಳೆದು ಬರುತ್ತಿರುವ ರಾಷ್ಟ್ರಗಳನ್ನು ಗುರಿ ಮಾಡಲಿದೆ.

2017ರಲ್ಲಿ ಭಾರತಕ್ಕೆ ಬರುತ್ತಾ ಎಲೆಕ್ಟ್ರಿಕ್ ವೆಸ್ಪಾ ಸ್ಕೂಟರ್?

ಇನ್ನು ಮಿಲಾನ್ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿರುವ ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್ ಎಷ್ಟು ದುಬಾರಿಯೆನಿಸಲಿದೆ ಎಂಬುದು ಸಹ ತಿಳಿದು ಬಂದಿಲ್ಲ.

2017ರಲ್ಲಿ ಭಾರತಕ್ಕೆ ಬರುತ್ತಾ ಎಲೆಕ್ಟ್ರಿಕ್ ವೆಸ್ಪಾ ಸ್ಕೂಟರ್?

ವೆಸ್ಪಾ ಎಲೆಕ್ಟ್ರಿಕಾ ವಿದ್ಯುತ್ ಚಾಲಿತ ನಿರ್ಮಾಣದಲ್ಲಿ ಗರಿಷ್ಠ ತಂತ್ರಜ್ಞಾನಗಳಿಗೆ ಮನೆ ಹಾಕಲಾಗಿದೆ. ಅಲ್ಲದೆ ತಂತ್ರಗಾರಿಕೆಯ ವಿಚಾರದಲ್ಲಿ ಸಂಸ್ಥೆಯು ಯಾವುದೇ ರಾಜಿಗೂ ತಯಾರಾಗಿಲ್ಲ.

Most Read Articles

Kannada
Read more on ವೆಸ್ಪಾ vespa
English summary
Piaggio To Launch Electric Vespa In India During 2017?
Story first published: Friday, November 11, 2016, 18:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X