ಎಲೆಕ್ಟ್ರಿಕ್ ಸ್ಟಾರ್ಟ್ ಸೌಲಭ್ಯದೊಂದಿಗೆ ಬಿಡುಗಡೆಗೊಂಡ ಹೊಚ್ಚ ಹೊಸ ಬಜಾಜ್ ಸಿಟಿ100

Written By:

ಅಧಿಕ ಮೈಲೇಜ್ ಮೂಲಕ ದ್ವಿಚಕ್ರ ವಾಹನಗಳ ಮಾರಾಟ ವಿಭಾಗದಲ್ಲಿ ತನ್ನದೇ ಆದ ಬೇಡಿಕೆ ಹೊಂದಿರುವ ಬಜಾಜ್ ಸಂಸ್ಥೆಯು ಜನಪ್ರಿಯ ಸಿಟಿ100 ಮಾದರಿಯನ್ನು ಎಲೆಕ್ಟ್ರಿಕ್ ಸ್ಟಾರ್ಟ್ ಸೌಲಭ್ಯದೊಂದಿಗೆ ಬಿಡುಗಡೆಗೊಳಿಸಿದೆ.

To Follow DriveSpark On Facebook, Click The Like Button
ಎಲೆಕ್ಟ್ರಿಕ್ ಸ್ಟಾರ್ಟ್ ಸೌಲಭ್ಯದೊಂದಿಗೆ ಬಿಡುಗಡೆಗೊಂಡ ಬಜಾಜ್ ಸಿಟಿ100

ಭಾರತದ ಅಟೊಮೊಬೈಲ್ ಉದ್ಯಮ ಕ್ಷೇತ್ರದಲ್ಲಿ ಶ್ರೇಷ್ಠ ಸ್ಥಾನ ಹೊಂದಿರುವ ಬಜಾಜ್ ಅಟೋ ಲಿಮಿಟೆಡ್ ಜಗತ್ತಿನ ಮೈಲೇಜ್ ಚಾಂಪಿಯನ್ ಎನ್ನುವ ಅಭಿದಾನವನ್ನು ಪಡೆದುಕೊಳ್ಳಲು ಸೂಕ್ತವೆನಿಸಿರುವ 99.27ಸಿಸಿ ಇಂಜಿನ್ ಸಾಮರ್ಥ್ಯದ ಬಜಾಜ್ ಸಿಟಿ100 ಮಾದರಿಯನ್ನು ಎಲೆಕ್ಟ್ರಿಕ್ ಸ್ಟಾರ್ಟ್ ಆವೃತ್ತಿಯಲ್ಲಿ ಪರಿಚಯಿಸುತ್ತಿದೆ.

ಎಲೆಕ್ಟ್ರಿಕ್ ಸ್ಟಾರ್ಟ್ ಸೌಲಭ್ಯದೊಂದಿಗೆ ಬಿಡುಗಡೆಗೊಂಡ ಬಜಾಜ್ ಸಿಟಿ100

ಸುಮಾರು ಒಂದು ದಶಕದಿಂದ ಭಾರತೀಯ ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಅತ್ಯಧಿಕ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚ, ದೀರ್ಘ ಬಾಳಿಕೆಯಿಂದ ಉತ್ತಮ ಯಶಸ್ಸನ್ನು ಗಳಿಸಿದ ಬಜಾಜ್ ಸಿಟಿ100 ಇದೀಗ ಹೊಸ ತಂತ್ರಜ್ಞಾನ, ಆಕರ್ಷಕ ವಿನ್ಯಾಸದ ಎಲೆಕ್ಟ್ರಿಕ್ ಸ್ಟಾರ್ಟ್‌ನೊಂದಿಗೆ ಅಭಿವೃದ್ಧಿಗೊಂಡಿದೆ.

ಎಲೆಕ್ಟ್ರಿಕ್ ಸ್ಟಾರ್ಟ್ ಸೌಲಭ್ಯದೊಂದಿಗೆ ಬಿಡುಗಡೆಗೊಂಡ ಬಜಾಜ್ ಸಿಟಿ100

ಗ್ರಾಹಕರ ಪ್ರಸ್ತುತ ಅಭಿರುಚಿ, ಆದ್ಯತೆ, ಹೊಸ ನಿರೀಕ್ಷೆಗಳಿಗನುಗುಣವಾಗಿ ಉತ್ಪಾದನೆಗೊಂಡಿರುವ ಸಿಟಿ100 ಆವೃತ್ತಿಯು, 8.08-ಬಿಎಚ್‌ಪಿ ಮತ್ತು 8.05-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಎಲೆಕ್ಟ್ರಿಕ್ ಸ್ಟಾರ್ಟ್ ಸೌಲಭ್ಯದೊಂದಿಗೆ ಬಿಡುಗಡೆಗೊಂಡ ಬಜಾಜ್ ಸಿಟಿ100

ಮೈಲೇಜ್

ಸಿಟಿ 100 ಬೈಕ್ ಮಾದರಿಯು ಉತ್ತಮ ಕಾರ್ಯನಿರ್ವಹಣಾ ಶಕ್ತಿ ಹೊಂದಿದ್ದು, ಪ್ರತಿ ಲೀಟರ್ 90 ಕಿಮಿ ಮೈಲೇಜ್‌ನೊಂದಿಗೆ ಗರಿಷ್ಠ ಮಟ್ಟದಲ್ಲಿ ಪ್ರತಿಗಂಟೆಗೆ 90 ಕಿಮಿ ವೇಗ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

Recommended Video - Watch Now!
2017 Hyundai Verna Launched In India - DriveSpark
ಎಲೆಕ್ಟ್ರಿಕ್ ಸ್ಟಾರ್ಟ್ ಸೌಲಭ್ಯದೊಂದಿಗೆ ಬಿಡುಗಡೆಗೊಂಡ ಬಜಾಜ್ ಸಿಟಿ100

ಇದರ ಜೊತೆಗೆ ಹೊಸ ಮೋಟಾರ್ ಬೈಕ್ 2 ವಾಲ್ವ್ ಡಿಟಿಎಸ್‌ಐ ಇಂಜಿನ್, ಇಲೆಕ್ಟ್ರಿಕ್ ಸ್ಟಾರ್ಟ್, 4 ಸ್ಪೀಡ್‌ಗೇರ್, ಎಸ್‌ಎನ್‌ಎಸ್ ಸಸ್ಪೆನ್‌ಶ್ಯನ್ ಹೊಂದಿದೆ ಎನ್ನಲಾಗಿದೆ.

ಎಲೆಕ್ಟ್ರಿಕ್ ಸ್ಟಾರ್ಟ್ ಸೌಲಭ್ಯದೊಂದಿಗೆ ಬಿಡುಗಡೆಗೊಂಡ ಬಜಾಜ್ ಸಿಟಿ100

ಹಾಗೆಯೇ ಬಹಳ ಉದ್ದದ ಸೀಟ್, ಅಗಲವಾದ ಹಿಂದಿನ ಟಯರ್, ಉದ್ದನೆಯ ವೀಲ್ ಬೇಸ್, ಅಲ್ಹಾಯ್‌ವೀಲ್, ದೀರ್ಘಕಾಲ ಮಾಸದೆ ಇರುವ ವಿಶೇಷ ಪೈಂಟ್ ಮತ್ತು ಸ್ಕ್ರಾಚ್ ತಡೆಗಟ್ಟುವಿಕೆಯ ವೈಶಿಷ್ಟ್ಯತೆಯನ್ನು ಹೊಂದಿರುತ್ತದೆ.

ಎಲೆಕ್ಟ್ರಿಕ್ ಸ್ಟಾರ್ಟ್ ಸೌಲಭ್ಯದೊಂದಿಗೆ ಬಿಡುಗಡೆಗೊಂಡ ಬಜಾಜ್ ಸಿಟಿ100

ಬೆಲೆಗಳು

ಫ್ಲೇಮ್ ರೆಡ್, ಎಬೊನಿ ಬ್ಲಾಕ್ ಮತ್ತು ರೆಡ್ ಡಿಕಾಲಸ್ ಆಕರ್ಷಕ ವರ್ಣಗಳಲ್ಲಿ ಲಭ್ಯವಿರುವ ಈ ನೂತನ ಬೈಕ್‌ನ ಎಕ್ಸ್ ಶೋರೂಂ ಬೆಲೆಗಳ ಪ್ರಕಾರ ರೂ.38,806ಕ್ಕೆ ಲಭ್ಯವಿರಲಿದೆ.

ಎಲೆಕ್ಟ್ರಿಕ್ ಸ್ಟಾರ್ಟ್ ಸೌಲಭ್ಯದೊಂದಿಗೆ ಬಿಡುಗಡೆಗೊಂಡ ಬಜಾಜ್ ಸಿಟಿ100

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಬಜಾಜ್ ಸಿಟಿ100 ಬೈಕ್ ಆವೃತ್ತಿಯು ಅಧಿಕ ವೆಚ್ಚದ ಮೋಟಾರ್ ಸೈಕಲ್‌ಕ್ಕಿಂತಲೂ ಅತ್ಯಧಿಕ ಮೈಲೇಜ್, ಶ್ರೇಷ್ಠ ವಿನ್ಯಾಸ, ಕಡಿಮೆ ನಿರ್ವಹಣಾ ವೆಚ್ಚದಿಂದಾಗಿ ಎಲ್ಲ ವರ್ಗದವರಿಗೂ ಅತ್ಯಂತ ಸೂಕ್ತವಾಗಬಲ್ಲ ಮಾದರಿಯಾಗಿದೆ.

Read more on ಬಜಾಜ್ bajaj
English summary
Read in Kannada about Bajaj CT100 Electric Start Launched In India.
Story first published: Thursday, August 24, 2017, 11:04 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark