2020ರ ವೇಳೆಗೆ ಎಲೆಕ್ಟ್ರಿಕ್ ಬೈಕ್‌ಗಳನ್ನು ನಿರ್ಮಾಣ ಮಾಡಲಿದೆ ಬಜಾಜ್..!!

Written By:

ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳ ನಿರ್ಮಾಣಕ್ಕೆ ಹೊಸ ಯೋಜನೆಯೊಂದನ್ನು ರೂಪಿಸಿರುವ ಬಜಾಜ್ ಸಂಸ್ಥೆಯು 2020ರ ಹೊತ್ತಿಗೆ ಪ್ರಮುಖ ಬೈಕ್ ಮಾದರಿಗಳನ್ನು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

2020ರ ವೇಳೆಗೆ ಎಲೆಕ್ಟ್ರಿಕ್ ಬೈಕ್‌ಗಳನ್ನು ನಿರ್ಮಾಣ ಮಾಡಲಿದೆ ಬಜಾಜ್..!!

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಎಲ್ಲಿಲ್ಲದೇ ಬೇಡಿಕೆ ಬಂದಿದ್ದೆ ತಡ ಎಲ್ಲಾ ವಾಹನ ಉತ್ಪಾದನಾ ಸಂಸ್ಥೆಗಳನ್ನು ಈ ನಿಟ್ಟಿನಲ್ಲಿ ಬೃಹತ್ ಯೋಜನೆಗಳನ್ನು ರೂಪಿಸುವ ಮೂಲಕ ಬದಲಾವಣೆ ಪರ್ವಕ್ಕೆ ಮುನ್ನಡೆ ಬರೆಯುತ್ತಿದ್ದು, ಇದೀಗ ಬಜಾಜ್ ಕೂಡಾ ಇದೇ ಹಾದಿಯಲ್ಲಿ ಮಹತ್ವದ ಹೆಜ್ಜೆ ಇಡಲು ಸಜ್ಜಾಗಿದೆ.

2020ರ ವೇಳೆಗೆ ಎಲೆಕ್ಟ್ರಿಕ್ ಬೈಕ್‌ಗಳನ್ನು ನಿರ್ಮಾಣ ಮಾಡಲಿದೆ ಬಜಾಜ್..!!

ಈ ಬಗ್ಗೆ ಬಜಾಜ್ ಸಂಸ್ಥೆಯು ಅಧಿಕೃತ ಮಾಹಿತಿಯನ್ನು ಹೊರಹಾಕಿದ್ದು, ಎಂಡಿ ರಾಜೀವ್ ಬಜಾಜ್ ಅವರು ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ಲೈವ್ ಮಿಂಟ್ ಜೊತೆಗಿನ ಸಂದರ್ಶನದಲ್ಲಿ ಇಂತದೊಂದು ಮಹತ್ವದ ಯೋಜನೆಯ ಬಗ್ಗೆ ಸುಳಿವು ನೀಡಿದ್ದಾರೆ.

Recommended Video
MV Agusta Brutale Launched In India | In Kannada - DriveSpark ಕನ್ನಡ
2020ರ ವೇಳೆಗೆ ಎಲೆಕ್ಟ್ರಿಕ್ ಬೈಕ್‌ಗಳನ್ನು ನಿರ್ಮಾಣ ಮಾಡಲಿದೆ ಬಜಾಜ್..!!

ಇದಲ್ಲದೇ ಪ್ರಿಮಿಯಂ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಮತ್ತು ತ್ರಿ ಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ಜೊತೆ ಬಿಡುಗಡೆಗೊಳಿಸಲು ನಿರ್ಧರಿಸಿರುವ ಬಜಾಜ್, ಬೆಂಗಳೂರು ಮತ್ತು ಪುಣೆ ಬೈಕ್ ಉತ್ಪಾದನಾ ಘಟಕಗಳಲ್ಲೇ ಎಲೆಕ್ಟ್ರಿಕ್ ಬೈಕ್ ಮಾದರಿಗಳನ್ನು ಉತ್ಪಾದನೆ ಮಾಡಲಿದೆ.

2020ರ ವೇಳೆಗೆ ಎಲೆಕ್ಟ್ರಿಕ್ ಬೈಕ್‌ಗಳನ್ನು ನಿರ್ಮಾಣ ಮಾಡಲಿದೆ ಬಜಾಜ್..!!

ಜೊತೆಗೆ ಸದ್ಯ ಇರುವ ಬೈಕ್ ಉತ್ಪಾದನಾ ಸಾಮರ್ಥ್ಯವನ್ನು ಕೂಡಾ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಎಲೆಕ್ಟ್ರಿಕ್ ಎಂಜಿನ್ ನಿರ್ಮಾಣದಲ್ಲಿ ಖ್ಯಾತಿ ಹೊಂದಿರುವ ಅಧೇರ್ ಬ್ಯಾಟರಿಗಳನ್ನು ಬಳಕೆ ಮಾಡಲು ಮುಂದಾಗಿದೆ.

2020ರ ವೇಳೆಗೆ ಎಲೆಕ್ಟ್ರಿಕ್ ಬೈಕ್‌ಗಳನ್ನು ನಿರ್ಮಾಣ ಮಾಡಲಿದೆ ಬಜಾಜ್..!!

ಹೀಗಾಗಿಯೇ ಬಜಾಜ್ ಎಲೆಕ್ಟ್ರಿಕ್ ಬೈಕ್ ಮಾದರಿಗಳು ಅತ್ಯುತ್ತಮ ಕಾರ್ಯಕ್ಷಮತೆ ಹೊಂದುವ ಭರವಸೆಯಿದ್ದು, ಮುಂಬರುವ ದಿನಗಳಲ್ಲಿ ಬಜಾಜ್ ಬೈಕ್ ಮತ್ತಷ್ಟು ಜನಪ್ರಿಯಗೊಳ್ಳುವುದಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

2020ರ ವೇಳೆಗೆ ಎಲೆಕ್ಟ್ರಿಕ್ ಬೈಕ್‌ಗಳನ್ನು ನಿರ್ಮಾಣ ಮಾಡಲಿದೆ ಬಜಾಜ್..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

2030ರ ವೇಳೆಗೆ ಶೇ.90ರಷ್ಟು ವಾಹನಗಳನ್ನು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ರಸ್ತೆಗಿಳಿಸುವ ಬೃಹತ್ ಯೋಜನೆಗೆ ಎಲ್ಲಾ ಆಟೋ ಉತ್ಪಾದಕರು ಮುಂದಾಗಿದ್ದು, ಈ ನಿಟ್ಟಿನಲ್ಲಿ ಬಜಾಜ್ ಕೈಗೊಂಡಿರುವ ಯೋಜನೆ ಕೂಡಾ ಮಹತ್ಪದಾಗಿದೆ.

English summary
Read in Kannada about Bajaj Looking To Enter Electric Vehicle Segment By 2020.
Story first published: Thursday, September 14, 2017, 11:29 [IST]
Please Wait while comments are loading...

Latest Photos