ಬೆನೆಲ್ಲಿ 150ಸಿಸಿ ಬೈಕಿನ ಪೇಟೆಂಟ್ ಚಿತ್ರಗಳು ಸೋರಿಕೆ

Written By:

ಇಟಾಲಿಯನ್ ದ್ವಿಚಕ್ರ ತಯಾರಕ ಸಂಸ್ಥೆಯಾದ ಬೆನೆಲ್ಲಿ ತನ್ನ ಹೊಸ 150 ಸಿಸಿ ಮೋಟಾರ್ ಸೈಕಲ್ ಕಾರ್ಯನಿರ್ವಹಿಸುತ್ತಿದ್ದು, ಈ ಬೈಕಿನ ವಿನ್ಯಾಸದ ಚಿತ್ರಗಳು ಬಿಡುಗಡೆಯಾಗಿವೆ.

ಬೆನೆಲ್ಲಿ 150ಸಿಸಿ ಬೈಕಿನ ಪೇಟೆಂಟ್ ಚಿತ್ರಗಳು ಸೋರಿಕೆ

ಪ್ರತಿಷ್ಠಿತ ಮ್ಯಾಗಜಿನ್ ಒಂದು ಈ ಮೋಟಾರ್ ಸೈಕಲ್‌ನ ಪೇಟೆಂಟ್ ವಿನ್ಯಾಸದ ಚಿತ್ರಗಳನ್ನು ಪ್ರಕಟಿಸಿದ್ದು, ಈ ಬೈಕ್ ಬೆನೆಲ್ಲಿ BJ150-31 ಎಂಬ ಹೆಸರು ಪಡೆದುಕೊಳ್ಳಲಿದೆ ಎನ್ನಲಾಗಿದೆ. ಈ ಹೆಸರಿನಲ್ಲಿರುವ 150ಯು ಮೋಟರ್ ಸೈಕಲ್‌ನ ಸಿಸಿ ತಿಳಿಸಲಿದ್ದು, 31 ಮೋಟಾರ್ ಸೈಕಲ್ ಮಾದರಿ ಸಂಖ್ಯೆ ಸೂಚಿಸಲಿದೆ.

ಬೆನೆಲ್ಲಿ 150ಸಿಸಿ ಬೈಕಿನ ಪೇಟೆಂಟ್ ಚಿತ್ರಗಳು ಸೋರಿಕೆ

ಬೆನೆಲ್ಲಿಯ ಈ ಹೊಸ 150ಸಿಸಿ ಶಿಶು ಮೋಟಾರ್‌ಸೈಕಲ್ ಏಷ್ಯಾದ ಮಾರುಕಟ್ಟೆಗಳನ್ನು ಉದ್ದೇಶವಾಗಿಟ್ಟುಕೊಂಡು ನಿರ್ಮಾಣವಾಗಲಿದ್ದು, ಸ್ಪೋರ್ಟಿ ಸ್ಟಾನ್ಸ್ ಮತ್ತು ಹರಿತವಾದ ವಿನ್ಯಾಸವನ್ನು ಹೊಂದಿದೆ.

ಬೆನೆಲ್ಲಿ 150ಸಿಸಿ ಬೈಕಿನ ಪೇಟೆಂಟ್ ಚಿತ್ರಗಳು ಸೋರಿಕೆ

ಈ ಹಿಂದಿನ ಆವೃತಿಯಾದ ಬೆನೆಲ್ಲಿ 150ಸಿಸಿ BJ150-30 ಮೋಟಾರ್ ಸೈಕಲ್‌ನ ಅಂದಗೊಳಿಸಿ ಈ ಹೊಚ್ಚ ಪರಿಕಲ್ಪನೆಯ ಪೇಟೆಂಟ್ ಪಡೆದ ಆವೃತಿಯನ್ನು ನಿರ್ಮಾಣ ಮಾಡಲಾಗಿದೆ ಎಂಬ ವಿಚಾರ ತಿಳಿದು ಬಂದಿದೆ.

ಬೆನೆಲ್ಲಿ 150ಸಿಸಿ ಬೈಕಿನ ಪೇಟೆಂಟ್ ಚಿತ್ರಗಳು ಸೋರಿಕೆ

ಈ ಮೋಟಾರ್ ಸೈಕಲ್‌ ದೊಡ್ಡ ಶ್ರೆಡ್ ಉಳ್ಳಂತಹ ಕೆತ್ತಿದ ರೀತಿಯ ಇಂಧನ ಟ್ಯಾಂಕ್ ಹೊಂದಿದೆ ಹಾಗು ಲಿಕ್ವಿಡ್ ಕೋಲ್ಡ್ ಎಂಜಿನ್‌ನಿಂದ ಶಕ್ತಿ ಉತ್ಪಾದನೆಯನ್ನು ಈ ಮೋಟಾರ್ ಸೈಕಲ್ ಮಾಡಲಿದೆ.

ಬೆನೆಲ್ಲಿ 150ಸಿಸಿ ಬೈಕಿನ ಪೇಟೆಂಟ್ ಚಿತ್ರಗಳು ಸೋರಿಕೆ

ಬೆನೆಲ್ಲಿ BJ150-31 ಬೈಕ್ ಬೀಮ್ ರೀತಿಯ ಫ್ರೇಮ್ ಮೇಲೆ ಕೂತಿದ್ದು, ಹೆಚ್ಚು ಬಲಿಷ್ಠವಾಗಿರಲಿದೆ. ಈ ಮೋಟಾರ್ ಸೈಕಲ್ ಮುಂಭಾಗದಲ್ಲಿ ಅಪ್‌ಸೈಡ್ ಡೌನ್ ಫಾರ್ಕ್ಸ್ ಮತ್ತು ಹಿಂಭಾಗದಲ್ಲಿ ಮನೊ ಶಾಕ್ ಸಸ್ಪೆನ್‌ಷನ್ ಹೊಂದಿರುವದು ಸೋರಿಕೆಯಾಗಿರುವ ಚಿತ್ರಗಳ ಮೂಲಕ ತಿಳಿದು ಬರಲಿದೆ.

ಬೆನೆಲ್ಲಿ 150ಸಿಸಿ ಬೈಕಿನ ಪೇಟೆಂಟ್ ಚಿತ್ರಗಳು ಸೋರಿಕೆ

150 ಸಿಸಿ ಬೆನೆಲ್ಲಿ ಬೈಕ್ ಸ್ಪೋರ್ಟಿ ವಿಭಜಿಸಲಾದ ಸೀಟ್‌ಗಳನ್ನು ಪಡೆದುಕೊಂಡಿದ್ದು, ಹಿಂಭಾಗದಲ್ಲಿ ಅಚ್ಚುಕಟ್ಟಾದ ವಿನ್ಯಾಸ ನೀವು ನೋಡಬಹುದಾಗಿದೆ ಹಾಗು ವಿಭಜಿಸಲಾದ ಹೆಡ್‌ಲ್ಯಾಂಪ್ ವಿನ್ಯಾಸವು 2017 KTM ಡ್ಯುಕ್ 390 ಬೈಕನ್ನು ಹೋಲುತ್ತದೆ.

English summary
Read in Kannada about Italian two-wheeler manufacturer Benelli is working on a new 150cc motorcycle. Know more about this motor bike
Story first published: Monday, August 21, 2017, 14:24 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark