ಬೆನೆಲ್ಲಿ ಲೆಯೊನ್ಸಿನೊ ಸ್ಕ್ರಾಂಬ್ಲೇರ್ ಬೈಕ್ ಭಾರತದಲ್ಲಿ ಬಿಡುಗಡೆ ಬಗ್ಗೆ ಮಾಹಿತಿ

Written By:

ಇಟಾಲಿಯನ್ ಮೋಟಾರ್ ಸೈಕಲ್ ತಯಾರಕ ಸಂಸ್ಥೆಯಾದ ಬೆನೆಲ್ಲಿ ತನ್ನ ಲೆಯೊನ್ಸಿನೊ ಸ್ಕ್ರಾಂಬ್ಲೇರ್ ಬೈಕ್ ಭಾರತದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿದೆ.

ಲೆಯೊನ್ಸಿನೊ ಸ್ಕ್ರಾಂಬ್ಲೇರ್ ಬೈಕ್ ಭಾರತದಲ್ಲಿ ಬಿಡುಗಡೆ ಬಗ್ಗೆ ಮಾಹಿತಿ

ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯೊಂದು ಈ ವಿಚಾರವನ್ನು ವರದಿ ಮಾಡಿದ್ದು, ಇದೇ ವರ್ಷದ ನವೆಂಬರ್ ತಿಂಗಳಿನಲ್ಲಿ ಬೆನೆಲ್ಲಿ ಲೆಯೊನ್ಸಿನೊ ಸ್ಕ್ರಾಂಬ್ಲೇರ್ ಮೋಟಾರ್ ಸೈಕಲ್ ಪರಿಚಯಿಸಬಹುದು ಎಂಬ ನಿರೀಕ್ಷೆ ಮೂಡಿದೆ.

ಲೆಯೊನ್ಸಿನೊ ಸ್ಕ್ರಾಂಬ್ಲೇರ್ ಬೈಕ್ ಭಾರತದಲ್ಲಿ ಬಿಡುಗಡೆ ಬಗ್ಗೆ ಮಾಹಿತಿ

ಡಿಎಸ್‌ಕೆ ಮೊಟೊವೀಲ್ ಅಧ್ಯಕ್ಷರಾದ ಶಿರೀಷ್ ಕುಲಕರ್ಣಿ ಸಹ ಈ ವಿಚಾರವನ್ನು ದೃಢಪಡಿಸಿದ್ದಾರೆ ಹಾಗು ಮತ್ತೆರಡು ವಾಹನಗಳು ಈ ವರ್ಷ ಮಾರುಕಟ್ಟೆಗೆ ಅಪ್ಪಳಿಸಲಿವೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.

ಲೆಯೊನ್ಸಿನೊ ಸ್ಕ್ರಾಂಬ್ಲೇರ್ ಬೈಕ್ ಭಾರತದಲ್ಲಿ ಬಿಡುಗಡೆ ಬಗ್ಗೆ ಮಾಹಿತಿ

ಲೆಯೊನ್ಸಿನೊ ಬೆನೆಲ್ಲಿ ಒಂದು ಕೈಗೆಟುಕುವ ಮೋಟಾರ್‌ಸೈಕಲ್ ಆಗಿದ್ದು, ಬೆನೆಲ್ಲಿ ಸಂಸ್ಥೆ ಭಾರತದ ಆನ್ ರೋಡ್ ಆವೃತಿಯಾಗಿ ಈ ವಾಹನವನ್ನು ಬಿಡುಗಡೆಗೊಳಿಸಿದೆ. ಆದರೆ ಈ ಬೈಕ್ ಆಫ್ ರೋಡ್‌ನಲ್ಲಿಯೂ ಚಾಲನೆ ಮಾಡಬಹುದಾದ ಸಾಮರ್ಥ್ಯ ಪಡೆದುಕೊಂಡಿದೆ.

ಲೆಯೊನ್ಸಿನೊ ಸ್ಕ್ರಾಂಬ್ಲೇರ್ ಬೈಕ್ ಭಾರತದಲ್ಲಿ ಬಿಡುಗಡೆ ಬಗ್ಗೆ ಮಾಹಿತಿ

ಈ ಮೋಟಾರ್ ಸೈಕಲ್ ದಿನಬಳಕೆಯ ವಾಹನವಾಗಿ ಪರಿಚಯವಾಗಲಿದ್ದು, ಸಾಹಸಮಯ ಆವೃತಿಯಾಗಿರುವುದಿಲ್ಲ ಎಂದು ಡಿಎಸ್‌ಕೆ ಮೊಟೊವೀಲ್ ಅಧ್ಯಕ್ಷರಾದ ಶಿರೀಷ್ ಕುಲಕರ್ಣಿ ಸ್ಪಷ್ಟಪಡಿಸಿದ್ದಾರೆ.

ಲೆಯೊನ್ಸಿನೊ ಸ್ಕ್ರಾಂಬ್ಲೇರ್ ಬೈಕ್ ಭಾರತದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ

ಬೆನೆಲ್ಲಿ ಲೆಯೊನ್ಸಿನೊ ಅಸ್ತಿತ್ವದಲ್ಲಿರುವ 500 ಸಿಸಿ ಅವಳಿ ಸಿಲಿಂಡರ್ ಎಂಜಿನ್ ಹೊಂದಿದೆ ಮತ್ತು ಈ ಎಂಜಿನ್ 45 ಏನ್‌ಎಂ ಗರಿಷ್ಠ ಟಾರ್ಕ್ ಮತ್ತು 47 ರಷ್ಟು ಅಶ್ವಶಕ್ತಿ ಹೊಂದಿದೆ.

ಲೆಯೊನ್ಸಿನೊ ಸ್ಕ್ರಾಂಬ್ಲೇರ್ ಬೈಕ್ ಭಾರತದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ

ಈ ಬೈಕ್ 6 ಸ್ಪೀಡ್ ಗೇರ್ ಬಾಕ್ಸ್ ಜೋಡಣೆಯೊಂದಿದೆ ಬಿಡುಗಡೆಗೊಳ್ಳುತ್ತಿದ್ದು, ಮುಂಭಾಗದಲ್ಲಿ ಅಪ್‌ಸೈಡ್ ಡೌನ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ ಸಸ್ಪೆನ್‌ಷನ್ ಪಡೆದುಕೊಳ್ಳಲಿದೆ.

ಲೆಯೊನ್ಸಿನೊ ಸ್ಕ್ರಾಂಬ್ಲೇರ್ ಬೈಕ್ ಭಾರತದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ

ಬಿಡುಗಡೆಯಾಗುತ್ತಿರುವ ಬೆನೆಲ್ಲಿ ಲೆಯೊನ್ಸಿನೊ ಸುಮಾರು ರೂ. 6 ಲಕ್ಷ ಎಕ್ಸ್-ಷೋರೂಂ ಬೆಲೆ ನಿರೀಕ್ಷಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಲೆಯೊನ್ಸಿನೊ ಮೋಟಾರ್ ಸೈಕಲ್‌ಗೆ ಭಾರತೀಯ ಮಾರುಕಟ್ಟೆಯಲ್ಲಿ ಯಾವುದೇ ಪ್ರತಿಸ್ಪರ್ಧಿ ಇಲ್ಲ ಎನ್ನಬಹುದು.

English summary
Italian motorcycle manufacturer Benelli is all set to launch the Leoncino Scrambler in India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark