ಟಿಎನ್‌ಟಿ 125 ಮಿನಿ ಮೋಟಾರ್ ಸೈಕಲ್ ಬಿಡುಗಡೆ ಮಾಡಲಿದೆ ಬೆನೆಲ್ಲಿ

Written By:

ಸೂಪರ್ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಇಟಾಲಿಯನ್ ಪ್ರತಿಷ್ಠಿತ ಬೆನೆಲ್ಲಿ ಸಂಸ್ಥೆಯು ಮುಂಬರುವ ದಿನಗಳಲ್ಲಿ ಟಿಎನ್‌ಟಿ 125 ಮಿನಿ ಮೋಟಾರ್ ಸೈಕಲ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ವಿನೂತನ ಮಾದರಿಯಲ್ಲಿ ಸಿದ್ಧಗೊಂಡ ಹೊಸ ಬೈಕ್ ಸಂಪೂರ್ಣ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ಟಿಎನ್‌ಟಿ 125 ಮಿನಿ ಮೋಟಾರ್ ಸೈಕಲ್ ಬಿಡುಗಡೆ ಮಾಡಲಿದೆ ಬೆನೆಲ್ಲಿ

ಸೂಪರ್ ಬೈಕ್ ಮಾದರಿಗಳಲ್ಲಿ ತನ್ನದೇ ಆದ ಬೇಡಿಕೆ ಹೊಂದಿರುವ ಬೆನೆಲ್ಲೆ ಸಂಸ್ಥೆಯು ಮುಂಬರುವ ದಿನಗಳಲ್ಲಿ ಟಿಎನ್‌ಟಿ 125 ಮಿನಿ ಮೋಟಾರ್ ಸೈಕಲ್ ಅನ್ನು ಬಿಡುಗಡೆ ಮಾಡುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಟಿಎನ್‌ಟಿ 25 ಬೈಕ್ ಹೋಲಿಕೆಯನ್ನೇ ಪಡೆದುಕೊಂಡಿದೆ.

ಟಿಎನ್‌ಟಿ 125 ಮಿನಿ ಮೋಟಾರ್ ಸೈಕಲ್ ಬಿಡುಗಡೆ ಮಾಡಲಿದೆ ಬೆನೆಲ್ಲಿ

ಮುಂಭಾಗದ ವಿನ್ಯಾಸಗಳು ಕೂಡಾ ಟಿಎಟಿ 25 ಬೈಕ್ ವೈಶಿಷ್ಟ್ಯತೆಗಳನ್ನು ಟಿಎನ್‌ಟಿ 125 ಪಡೆದುಕೊಂಡಿದ್ದು, ಹೆಡ್‌ಲ್ಯಾಂಪ್ ಮತ್ತು ಹ್ಯಾಂಡಲ್ ಬಾರ್‌ ವಿನ್ಯಾಸದಲ್ಲಿ ಸಾಕಷ್ಟು ತೀಕ್ಷ್ಣ ಮತ್ತು ಆಕ್ರಮಣಕಾರಿ ಲುಕ್ ನೀಡಲಾಗಿದೆ.

Recommended Video
MV Agusta Brutale Launched In India | In Kannada - DriveSpark ಕನ್ನಡ
ಟಿಎನ್‌ಟಿ 125 ಮಿನಿ ಮೋಟಾರ್ ಸೈಕಲ್ ಬಿಡುಗಡೆ ಮಾಡಲಿದೆ ಬೆನೆಲ್ಲಿ

ಹೀಗಾಗಿ ಬೆನೆಲ್ಲಿ ಜನಪ್ರಿಯ ಮಾದರಿ ಟಿಎನ್‌ಟಿ ಸರಣಿಗಳಲ್ಲೇ ಹೆಚ್ಚು ವಿಭಿನ್ನತೆಯನ್ನು ಹೊಂದಲಿರುವ ಟಿಎನ್‌ಟಿ 125 ಮಿನಿ ಮೋಟಾರ್ ಸೈಕಲ್ ಮಾದರಿಯು ಡ್ಯುಯಲ್ ಎಕ್ಸಾಸ್ಟ್, ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್, ಉಕ್ಕಿನ ಹಂದರದ ಚೌಕಟ್ಟನ್ನು ಪಡೆದುಕೊಂಡಿದೆ.

ಟಿಎನ್‌ಟಿ 125 ಮಿನಿ ಮೋಟಾರ್ ಸೈಕಲ್ ಬಿಡುಗಡೆ ಮಾಡಲಿದೆ ಬೆನೆಲ್ಲಿ

ಇನ್ನು ಹೆಸರೇ ಸೂಚಿಸುವಂತೆ ಟಿಎನ್‌ಟಿ 125 ಮಿನಿ ಮೋಟಾರ್ ಸೈಕಲ್ ಆವೃತ್ತಿಯು 125-ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಲ್ ಇಂಜೆಕ್ಟೆಡ್ ಎಂಜಿನ್ ಹೊಂದಿರಲಿದ್ದು, 11-ಬಿಎಚ್‌ಪಿ ಮತ್ತು 10-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಟಿಎನ್‌ಟಿ 125 ಮಿನಿ ಮೋಟಾರ್ ಸೈಕಲ್ ಬಿಡುಗಡೆ ಮಾಡಲಿದೆ ಬೆನೆಲ್ಲಿ

ಜೊತೆಗೆ 124 ಕೆಜಿ ಭಾರ ಹೊಂದಿರುವ ಟಿಎನ್‌ಟಿ 125 ಮಿನಿ ಮೋಟಾರ್ ಸೈಕಲ್, 7.2-ಲೀಟರ್ ಫ್ಯೂಲ್ ಟ್ಯಾಂಕ್‌ನೊಂದಿಗೆ ಹಿಂಬದಿಯ ಚಕ್ರದಲ್ಲಿ 220ಎಂಎಂ ಮತ್ತು ಮುಂಬದಿಯ ಚಕ್ರದಲ್ಲಿ 190ಎಂಎಂ ಡಿಸ್ಕ್ ಬ್ರೇಕ್ ಅಳವಡಿಕೆ ಹೊಂದಿದೆ.

ಟಿಎನ್‌ಟಿ 125 ಮಿನಿ ಮೋಟಾರ್ ಸೈಕಲ್ ಬಿಡುಗಡೆ ಮಾಡಲಿದೆ ಬೆನೆಲ್ಲಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪ್ರಸ್ತುತ ಮಾರುಕಟ್ಟೆಯಲ್ಲಿ ಬೆನೆಲ್ಲಿ ಸಂಸ್ಥೆಯು ಟಿಎನ್‌ಟಿ ಸರಣಿಗಳ ಮೂಲಕ ಭಾರೀ ಜನಪ್ರಿಯತೆ ಗಳಿಸಿದ್ದು, ಮಧ್ಯಮ ವರ್ಗಗಳ ಗ್ರಾಹಕರನ್ನು ಸೆಳೆಯುವ ಉದ್ದೇಶಗಳೊಂದಿಗೆ ಟಿಎನ್‌ಟಿ 125 ಮಿನಿ ಮೋಟಾರ್ ಸೈಕಲ್ ಹೊರ ತರುತ್ತಿದೆ.

English summary
Read in Kannada about Benelli Unveils TNT 125 Mini Motorcycle.
Story first published: Monday, September 4, 2017, 11:28 [IST]
Please Wait while comments are loading...

Latest Photos