ಭಾರತದಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್ ಬಿಡುಗಡೆ ಕನ್ಫಮ್

ಇತ್ತೀಚೆಗೆ ಭಾರತದಲ್ಲಿ ಹೊಸ ನಮೂನೆಯ ಬೈಕ್ ಉತ್ಪನ್ನಗಳ ಮೂಲಕ ಸುದ್ಧಿ ಮಾಡುತ್ತಿರುವ ಬಿಎಂಡಬ್ಲ್ಯು ಮೋಟಾರ್ಡ್ ಸಂಸ್ಥೆಯು, ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಜಿ 310 ಜಿಎಸ್ ಬೈಕ್ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ.

By Praveen

ಭಾರತದಲ್ಲಿ ಸೂಪರ್ ಬೈಕ್‌ಗಳ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ಹಿಗ್ಗುತ್ತಿದ್ದು, ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಮುಖ ಸೂಪರ್ ಬೈಕ್ ಉತ್ಪಾದನಾ ಸಂಸ್ಥೆಯಾದ ಬಿಎಂಡಬ್ಲ್ಯು ಮೋಟಾರ್ಡ್ ಸಂಸ್ಥೆಯು ಇದೀಗ ದೇಶಿಯ ಮಾರುಕಟ್ಟೆಗೆ ಅನುಗುಣವಾಗಿ ಹೊಸ ನಮೂನೆಯ ಬೈಕ್ ಸಿದ್ಧಗೊಳಿಸಿದೆ.

ಭಾರತದಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್ ಬಿಡುಗಡೆ ಕನ್ಫಮ್

ಬಿಎಂಡಬ್ಲ್ಯು ನಿರ್ಮಾಣದ ಜಿ 310 ಜಿಎಸ್ ಬೈಕ್ ಮಾದರಿಯೂ ಅಡ್ವೆಂಚರ್ ವಿಭಾಗದಲ್ಲಿ ಅಭಿವೃದ್ದಿಗೊಂಡಿದ್ದು, 313 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಪಡೆದುಕೊಂಡಿದೆ.

ಭಾರತದಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್ ಬಿಡುಗಡೆ ಕನ್ಫಮ್

ಇನ್ನು ಹೊಸ ಮಾದರಿಯ ಜಿ 310 ಜಿಎಸ್ ಬೈಕ್ ಭಾರತದಲ್ಲೇ ಉತ್ಪಾದನೆಯಾಗಲಿದ್ದು, ಇದಕ್ಕಾಗಿ ಟಿವಿಎಸ್ ಜೊತೆ ಒಪ್ಪಂದ ಮಾಡಿರುವ ಬಿಎಂಡಬ್ಲ್ಯು ಸಂಸ್ಥೆಯು ಟಿವಿಎಸ್ ಹೊಸೂರು ಬೈಕ್ ಉತ್ಪಾದನಾ ಕೇಂದ್ರದಲ್ಲಿ ಜಿ 310 ಜಿಎಸ್ ಉತ್ಪಾದನೆ ಮಾಡಲಿದೆ.

ಭಾರತದಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್ ಬಿಡುಗಡೆ ಕನ್ಫಮ್

ಕೇವಲ ದೇಶಿವಾಗಿ ಅಷ್ಟೇ ಅಲ್ಲದೇ ಭಾರತದಿಂದಲೇ ಜಿ 310 ಜಿಎಸ್ ಬೈಕ್‌ಗಳನ್ನು ರಫ್ತು ಮಾಡಲಿರುವ ಬಿಎಂಡಬ್ಲ್ಯು, ಸೂಪರ್ ಬೈಕ್ ಮಾರಾಟ ವಿಭಾಗದಲ್ಲಿ ಹೊಸ ಕಾರ್ಯತಂತ್ರ ರೂಪಿಸಲಿದೆ.

ಭಾರತದಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್ ಬಿಡುಗಡೆ ಕನ್ಫಮ್

ಜಿ 310 ಜಿಎಸ್ ಮಾದರಿ ಕೂಡಾ ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದ್ದು, 34 ಬಿಎಚ್‌ಪಿ ಮತ್ತು 28 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ. ಇದರ ಜೊತೆಗೆ ಅತ್ಯುತ್ತಮ ಹೊರ ವಿನ್ಯಾಸಗಳನ್ನು ಕೂಡಾ ಹೊಂದಿರುವ ಜಿ 310 ಜಿಎಸ್, ಶಾರ್ಪ್ ಹೆಡ್‌ಲ್ಯಾಂಪ್, ಮಸ್ಕ್ಯೂಲರ್ ಫ್ಯೂಲ್ ಟ್ಯಾಂಕ್ ಮತ್ತು ಡ್ಯುಯಲ್ ಸ್ಪೋರ್ಟ್ ಟೈರ್‌ನೊಂದಿಗೆ ಗಮನಸೆಳೆಯುತ್ತಿದೆ.

ಭಾರತದಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್ ಬಿಡುಗಡೆ ಕನ್ಫಮ್

ಡ್ರೈವ್ ಸಾರ್ಕ್ ಅಭಿಪ್ರಾಯ

ಐಷಾರಾಮಿ ಕಾರುಗಳಷ್ಟೇ ಅಲ್ಲದೇ ಸೂಪರ್ ಬೈಕ್ ವಿಭಾಗದಲ್ಲೂ ಹೆಜ್ಜೆ ಇಟ್ಟಿರುವ ಬಿಎಂಡಬ್ಲ್ಯು ಸಂಸ್ಥೆಯು ಕಳೆದ ಕೆಲ ವರ್ಷಗಳಿಂದ ವಿವಿಧ ಮಾದರಿಯ ಬೈಕ್‌ಗಳನ್ನು ಬಿಡುಗಡೆಗೊಳಿಸಿದ್ದು, ಸದ್ಯ ಹೊಸದಾಗಿ ಸಿದ್ಧಗೊಳಿಸಿರುವ ಜಿ 310 ಜಿಎಸ್ ಬೈಕ್‌ನ್ನು 2018ರ ಮೊದಲ ತ್ರೈಮಾಸಿಕ ಅವಧಿಗೆ ಬಿಡುಗಡೆ ಮಾಡಲಿದೆ.

Most Read Articles

Kannada
English summary
Read in Kannada about BMW G 310 GS Patented In India.
Story first published: Wednesday, July 12, 2017, 19:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X