ತಾಂತ್ರಿಕ ದೋಷ- 3 ಸಾವಿರ ಆರ್ ನೈನ್ ಟಿ ಬೈಕ್‌ಗಳನ್ನು ಹಿಂಪಡೆದ ಬಿಎಂಡಬ್ಲ್ಯು

ಸೂಪರ್ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬಿಎಂಡಬ್ಲ್ಯು ಸಂಸ್ಥೆಯ ಬಹುಬೇಡಿಕೆ ಆರ್ ನೈನ್ ಟಿ ಬೈಕ್‌ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಈ ಹಿನ್ನೆಲೆ ತಾಂತ್ರಿಕ ದೋಷ ಸರಿಪಡಿಸಲು 3 ಸಾವಿರಕ್ಕೂ ಹೆಚ್ಚು ಬೈಕ್‌ಗಳನ್ನು ಹಿಂಪಡೆದಿದೆ.

By Praveen

ಸೂಪರ್ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬಿಎಂಡಬ್ಲ್ಯು ಸಂಸ್ಥೆಯ ಬಹುಬೇಡಿಕೆ ಆರ್ ನೈನ್ ಟಿ ಬೈಕ್‌ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಈ ಹಿನ್ನೆಲೆ ತಾಂತ್ರಿಕ ದೋಷ ಸರಿಪಡಿಸಲು 3 ಸಾವಿರಕ್ಕೂ ಹೆಚ್ಚು ಬೈಕ್‌ಗಳನ್ನು ಹಿಂಪಡೆದಿದೆ.

ತಾಂತ್ರಿಕ ದೋಷ- ಆರ್ ನೈನ್ ಟಿ ಬೈಕ್‌ಗಳನ್ನು ಹಿಂಪಡೆದ ಬಿಎಂಡಬ್ಲ್ಯು

ಬಿಎಂಡಬ್ಲ್ಯು ನಿರ್ಮಾಣದ ಆರ್ ನೈನ್ ಟಿ ಆವೃತ್ತಿಯ 3368 ಬೈಕ್‌ಗಳಲ್ಲಿನ ಸ್ವಿಂಗ್ ಆರ್ಮ್ ಪೈವೊಟ್ ಪಿನ್ ವಿಭಾಗದಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಗ್ರಾಹಕರ ದೂರಿನ್ವಯ ಬಿಎಂಡಬ್ಲ್ಯು ಸಂಸ್ಥೆಯು ಸಮಸ್ಯೆ ಬಗೆಹರಿಸಲು ಮುಂದಾಗಿದೆ.

ತಾಂತ್ರಿಕ ದೋಷ- ಆರ್ ನೈನ್ ಟಿ ಬೈಕ್‌ಗಳನ್ನು ಹಿಂಪಡೆದ ಬಿಎಂಡಬ್ಲ್ಯು

ಇನ್ನು ಆರ್ ನೈನ್ ಟಿ ಆವೃತ್ತಿಯಲ್ಲಿ ಮಾತ್ರವೇ ಸ್ವಿಂಗ್ ಆರ್ಮ್ ಪೈವೊಟ್ ಪಿನ್ ದೋಷ ಕಂಡುಬಂದಿದ್ದು, ಸ್ಕ್ರ್ಯಾಂಬ್ಲರ್, ರೇಸರ್, ಅರ್ಬನ್ ಜಿ ಎಸ್ ಮತ್ತು ಪ್ಯೂರ್ ಸೂಪರ್ ಬೈಕ್ ಆವೃತ್ತಿಯಲ್ಲಿ ಯಾವುದೇ ರೀತಿಯ ದೋಷವಿಲ್ಲ ಎನ್ನಲಾಗಿದೆ.

ತಾಂತ್ರಿಕ ದೋಷ- ಆರ್ ನೈನ್ ಟಿ ಬೈಕ್‌ಗಳನ್ನು ಹಿಂಪಡೆದ ಬಿಎಂಡಬ್ಲ್ಯು

ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಎಂಡಬ್ಲ್ಯು ಕೂಡಾ ಆರ್ ನೈನ್ ಟಿ ಆವೃತ್ತಿಯಲ್ಲಿನ ದೋಷಗಳನ್ನು ಕೂಡಲೇ ಸರಿಪಡಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದು, ಉತ್ಪಾದನೆಯ ಸಂದರ್ಭದಲ್ಲಿ ಆದ ತಾಂತ್ರಿಕ ತೊಂದರೆಗೆ ವಿಷಾದ ವ್ಯಕ್ತಪಡಿಸಿದೆ.

ತಾಂತ್ರಿಕ ದೋಷ- ಆರ್ ನೈನ್ ಟಿ ಬೈಕ್‌ಗಳನ್ನು ಹಿಂಪಡೆದ ಬಿಎಂಡಬ್ಲ್ಯು

ಅಂದಹಾಗೆ ಸ್ವಿಂಗ್ ಆರ್ಮ್ ಪೈವೊಟ್ ಪಿನ್ ವಿಭಾಗದಲ್ಲಿ ಸಡಿಲಿಕೆಯಾದಲ್ಲಿ ವೇಗದಲ್ಲಿರುವ ಬೈಕ್‌ಗಳು ನಿಯಂತ್ರಣ ತಪ್ಪುವ ಮತ್ತು ಕುಸಿತಕ್ಕೆ ಕಾರಣವಾಗುತ್ತದೆ. ಹೀಗಾಗಿ ಫ್ರೇಮ್‌ಗೆ ಸ್ವಿಂಗ್ ಆರ್ಮ್ ಪೈವೊಟ್ ಪಿನ್ ಅನ್ನು ಹಿಡಿದಿಟ್ಟುಕೊಳ್ಳುವ ಬೋಲ್ಟ್‌ಗಳನ್ನು ಸರಿಗೊಳಿಬೇಕಿದೆ.

ತಾಂತ್ರಿಕ ದೋಷ- ಆರ್ ನೈನ್ ಟಿ ಬೈಕ್‌ಗಳನ್ನು ಹಿಂಪಡೆದ ಬಿಎಂಡಬ್ಲ್ಯು

ಇದಲ್ಲದೇ ಈ ಹಿಂದೆ 2016ರಲ್ಲೂ ಕೆಲವು ಬಿಎಂಡಬ್ಲ್ಯು ನಿರ್ಮಾಣದ ಕೆಲವು ಸೂಪರ್ ಬೈಕ್‌ಗಳ ಹ್ಯಾಂಡಲ್ ವಿಭಾಗದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಳ್ಳುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದ್ದಲ್ಲದೇ ಸೂಪರ್ ಬೈಕ್ ಮಾರಾಟ ಪ್ರಕ್ರಿಯೆ ಮೇಲೂ ಪರಿಣಾಮ ಬೀರಿತ್ತು.

ತಾಂತ್ರಿಕ ದೋಷ- ಆರ್ ನೈನ್ ಟಿ ಬೈಕ್‌ಗಳನ್ನು ಹಿಂಪಡೆದ ಬಿಎಂಡಬ್ಲ್ಯು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಉತ್ಪಾದನಾ ಸಂದರ್ಭದಲ್ಲಿ ತಾಂತ್ರಿಕ ದೋಷಗಳು ಕಂಡುಬರುವುದು ಸಾಮಾನ್ಯ ವಿಚಾರವಾಗಿದ್ದು, ಒಂದು ವೇಳೆ ನೀವು ಕೂಡಾ ಬಿಎಂಡಬ್ಲ್ಯು ಗ್ರಾಹಕರಾಗಿದ್ದಲ್ಲಿ ಕೂಡಲೇ ಹತ್ತಿರದ ಶೋರಂಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಿ.

Most Read Articles

Kannada
English summary
Read in Kannada about BMW R NineT Recalled.
Story first published: Wednesday, August 30, 2017, 15:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X