ಸುರಕ್ಷಾ ವಿಚಾರದಲ್ಲಿ ಗೊಂದಲ- ಏಳು ಬೈಕ್ ಮಾದರಿಗಳನ್ನು ಹಿಂಪಡೆದ ಬಿಎಂಡಬ್ಲ್ಯು

Written By:

ಬಿಎಂಡಬ್ಲ್ಯು ಸಂಸ್ಥೆಯ ಪ್ರಮುಖ ಸೂಪರ್ ಬೈಕ್ ಮಾದರಿಗಳಲ್ಲಿ ಸುರಕ್ಷಾ ವಿಚಾರದಲ್ಲಿ ಗೊಂದಲ ಸೃಷ್ಠಿಯಾಗಿದ್ದು, ಈ ಹಿನ್ನೆಲೆ ಸುರಕ್ಷಾ ಸಾಧನಗಳ ಅಳವಡಿಕೆ ಸಂಬಂಧ ಪ್ರಮುಖ ಬೈಕ್ ಮಾದರಿಗಳನ್ನು ಹಿಂದಕ್ಕೆ ಪಡೆಯಲಾಗಿದೆ.

To Follow DriveSpark On Facebook, Click The Like Button
ಸುರಕ್ಷಾ ವಿಚಾರದಲ್ಲಿ ಗೊಂದಲ-7 ಬೈಕ್ ಮಾದರಿಗಳನ್ನ ಹಿಂಪಡೆದ BMW

ಕಳೆದ ತಿಂಗಳ ಹಿಂದಷ್ಟೇ ಸುರಕ್ಷಾ ವಿಚಾರಕ್ಕೆ ಆರ್1200ಜಿಎಸ್ ಬೈಕ್ ಮಾದರಿಯನ್ನು ಹಿಂದಕ್ಕೆ ಪಡೆದಿದ್ದ ಬಿಎಂಡಬ್ಲ್ಯು ಮೋಟಾರ್ಡ್ ಸಂಸ್ಥೆಯು ಇದೀಗ ವಿವಿಧ ಮಾದರಿಯ 7 ಬೈಕ್ ಆವೃತ್ತಿಯನ್ನು ಹಿಂದಕ್ಕೆ ಪಡೆದಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದೆ.

ಸುರಕ್ಷಾ ವಿಚಾರದಲ್ಲಿ ಗೊಂದಲ-7 ಬೈಕ್ ಮಾದರಿಗಳನ್ನ ಹಿಂಪಡೆದ BMW

ಬಿಎಂಡಬ್ಲ್ಯು ಉತ್ಪಾದನೆಯ ಉನ್ನತ ಬೈಕ್ ಮಾದರಿಗಳಲ್ಲಿ ಮಾತ್ರ ಅಲ್ಯುಮಿನಿಯಂ ಕೇಸ್ ಅಳವಡಿಸಲಾಗಿದ್ದು, ಈ ಕುರಿತಂತೆ ಬೈಕ್ ಸುರಕ್ಷಾ ಸಾಧನಗಳನ್ನು ಅಳೆಯುವ ಕೆಲವು ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿವೆ.

ಸುರಕ್ಷಾ ವಿಚಾರದಲ್ಲಿ ಗೊಂದಲ-7 ಬೈಕ್ ಮಾದರಿಗಳನ್ನ ಹಿಂಪಡೆದ BMW

ಹೀಗಾಗಿ ಬಿಎಂಡಬ್ಲ್ಯು ನಿರ್ಮಾಣದ ಆರ್1200ಜಿಎಸ್, ಎಫ್800ಆರ್, ಎಫ್800ಜಿಟಿ, ಆರ್1200ಜಿಎಸ್ ಅಡ್ವೆಂಚರ್, ಎಸ್1000ಎಕ್ಸ್ಆರ್ ಮೋಟಾರ್ ಸೈಕಲ್, ಆರ್1200ಆರ್ ಮತ್ತು ಆರ್1200ಆರ್‌ಎಸ್ ಬೈಕ್ ಮಾದರಿಗಳನ್ನು ಹಿಂದಕ್ಕೆ ಪಡೆದಿದೆ.

ಸುರಕ್ಷಾ ವಿಚಾರದಲ್ಲಿ ಗೊಂದಲ-7 ಬೈಕ್ ಮಾದರಿಗಳನ್ನ ಹಿಂಪಡೆದ BMW

ಹೊಸ ನಿಯಮದ ಪ್ರಕಾರ ದುಬಾರಿ ಬೆಲೆಯ ಪ್ರತಿ ಬೈಕ್ ಮಾದರಿಗೂ ಅಲ್ಯುಮಿನಿಯಂ ಕೇಸ್ ಅಳವಡಿಸುವಂತೆ ಸೂಚನೆ ನೀಡಲಾಗಿದ್ದು, ಇದಕ್ಕೆ ಒಪ್ಪಿರುವ ಬಿಎಂಡಬ್ಲ್ಯು ಸದ್ಯದಲ್ಲೇ 29 ಸಾವಿರ ಬೈಕ್‌ಗಳಿಗೆ ಹೊಸ ಸುರಕ್ಷಾ ಸಾಧನಗಳನ್ನು ಅಳವಡಿಸಲಿದೆ.

ಸುರಕ್ಷಾ ವಿಚಾರದಲ್ಲಿ ಗೊಂದಲ-7 ಬೈಕ್ ಮಾದರಿಗಳನ್ನ ಹಿಂಪಡೆದ BMW

ಇನ್ನೊಂದು ಮುಖ್ಯ ವಿಚಾರವೆಂದರೇ ಹೊಸ ಸುರಕ್ಷಾ ವಿಧಾನಗಳನ್ನು ಉಚಿತವಾಗಿ ಅಳವಡಿಸಿಕೊಳ್ಳಲು ನಿರ್ಧರಿಸಿರುವ ಬಿಎಂಡಬ್ಲ್ಯು, ಸೆಪ್ಟೆಂಬರ್ 1ರಿಂದ ಹಂತ ಹಂತವಾಗಿ ಎಲ್ಲಾ ಬೈಕ್ ಮಾದರಿಗಳಿಗೂ ಅಲ್ಯುಮಿನಿಯಂ ಕೇಸ್‌ಗಳನ್ನು ಜೋಡಣೆ ಮಾಡಲಿದೆ.

ಸುರಕ್ಷಾ ವಿಚಾರದಲ್ಲಿ ಗೊಂದಲ-7 ಬೈಕ್ ಮಾದರಿಗಳನ್ನ ಹಿಂಪಡೆದ BMW

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಅಂತರಾಷ್ಟ್ರಿಯ ಮಟ್ಟದಲ್ಲಿ ಇತ್ತೀಚೆಗೆ ಜಾರಿಯಾಗುತ್ತಿರುವ ಕೆಲವು ಸುರಕ್ಷಾ ವಿಧಾನ ಪ್ರಕಾರ 750 ಸಿಸಿ ಮೇಲ್ಪಟ್ಟ ಬೈಕ್ ಮಾದರಿಗಳಲ್ಲಿ ಕೆಲವು ಹೊಸ ಹೊಸ ವಿಧಾನಗಳನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಇದೀಗ ಬಿಎಂಡಬ್ಲ್ಯು ತನ್ನ ಮಾದರಿಗಳನ್ನು ಹಿಂದಕ್ಕೆ ಪಡೆದು ಹೊಸ ವಿಧಾನಗಳನ್ನು ಅಳವಡಿಸುವ ನಿಟ್ಟಿನಲ್ಲಿ ನಿರ್ಧಾರ ಪ್ರಕಟಿಸಿದೆ.

English summary
Read in Kannada about BMW Motorrad Issues Yet Another Recall.
Story first published: Thursday, August 10, 2017, 11:29 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark