ಬರ್ತಿದೆ ಕೆಟಿಎಂ ಡ್ಯೂಕ್ 390 ಬೈಕಿನ ಪ್ರತಿಸ್ಪರ್ಧಿ ಬಿಎಂಡಬ್ಲ್ಯೂ ಮೊಟರ್ರಾಡ್ ಜಿ310ಆರ್

ಜರ್ಮನ್ ಮೋಟಾರ್ ಸೈಕಲ್ ತಯಾರಕ ಬಿಎಂಡಬ್ಲ್ಯೂ ಮೊಟರ್ರಾಡ್ ತನ್ನ ದೊಡ್ಡ ಸಾಮರ್ಥ್ಯದ ಮೋಟರ್ ಸೈಕಲ್‌ಗಳನ್ನು ಮತ್ತೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸೂಚನೆ ನೀಡಿದೆ.

By Girish

ಪ್ರವೇಶ ಹಂತದ ನೇಕೆಡ್ ಸ್ಟ್ರೀಟ್‌ಫೈಟರ್ ಜಿ 310 ಆರ್ ವಾಹನವನ್ನು ವಿವಿಧ ಕಾರಣಗಳಿಂದ ಮಾರಾಟವನ್ನು ಬಿಎಂಡಬ್ಲ್ಯೂ ಕಂಪನಿ ನಿಲ್ಲಿಸಿತ್ತು. ಆದರೆ, ಈಗ ಬಂದಿರುವ ಮಾಹಿತಿ ಪ್ರಕಾರ 2018ರ ದ್ವಿತೀಯಾರ್ಧದಲ್ಲಿ ಬಿಎಂಡಬ್ಲ್ಯೂ ಜಿ310ಆರ್ ಅಂತಿಮವಾಗಿ ಭಾರತಕ್ಕೆ ಬರಲಿದೆ.

ಬರ್ತಿದೆ ಕೆಟಿಎಂ ಡ್ಯೂಕ್ 390 ಬೈಕಿನ ಪ್ರತಿಸ್ಪರ್ಧಿ ಬಿಎಂಡಬ್ಲ್ಯೂ ಮೊಟರ್ರಾಡ್ ಜಿ310ಆರ್

2016ರಲ್ಲಿ ನೆಡೆದ ಆಟೋ ಎಕ್ಸ್‌ಪೋದಲ್ಲಿ ಬಿಎಂಡಬ್ಲ್ಯೂ ಕಂಪನಿಯು ಮೊಟರ್ರಾಡ್ ಜಿ 310 ಆರ್ ಮೋಟಾರ್ ಸೈಕಲ್ ಪ್ರದರ್ಶಿಸಿತ್ತು. ಸತತ ಎರಡು ವರ್ಷಗಳ ನಂತರ ಈ ಮೋಟಾರ್‌ಸೈಕಲ್ ಅಂತಿಮವಾಗಿ ಭಾರತೀಯ ರಸ್ತೆಗಿಳಿಯುತ್ತಿದೆ.

ಬರ್ತಿದೆ ಕೆಟಿಎಂ ಡ್ಯೂಕ್ 390 ಬೈಕಿನ ಪ್ರತಿಸ್ಪರ್ಧಿ ಬಿಎಂಡಬ್ಲ್ಯೂ ಮೊಟರ್ರಾಡ್ ಜಿ310ಆರ್

ವಿದೇಶಿ ಮಾರುಕಟ್ಟೆಗಳಿಗೆ ಬಲಿಷ್ಠ ಜಿ 310 ಆರ್ ವಾಹನವನ್ನು ರಫ್ತು ಮಾಡುವ ಸಲುವಾಗಿ ಭಾರತದಲ್ಲಿ ಜರ್ಮನ್ ಕಂಪನಿಯು ಟಿವಿಎಸ್ ಜೊತೆ ಸಹಭಾಗಿತ್ವವನ್ನು ಹೊಂದಿತ್ತು. ಸದ್ಯ ತನ್ನ ನಿರ್ಧಾರವನ್ನು ಬದಲಿಸಿದೆ ಎನ್ನಬಹುದು.

ಬರ್ತಿದೆ ಕೆಟಿಎಂ ಡ್ಯೂಕ್ 390 ಬೈಕಿನ ಪ್ರತಿಸ್ಪರ್ಧಿ ಬಿಎಂಡಬ್ಲ್ಯೂ ಮೊಟರ್ರಾಡ್ ಜಿ310ಆರ್

ಭಾರತದಲ್ಲಿ ಪ್ರವೇಶ ಮಟ್ಟದ ಪ್ರೀಮಿಯಂ ಮೋಟಾರ್‌ಸೈಕಲ್ ವಿಭಾಗದಲ್ಲಿ ತನ್ನ ಅಸ್ತಿತ್ವ ಸಾಧಿಸುವ ದೃಷ್ಟಿಯಿಂದ ಈ ಹೊಸ ಪ್ರಯೋಗಕ್ಕೆ ಕಂಪನಿ ಮುಂದಾಗಿದೆ. ಈ ವಿಭಾಗದಲ್ಲಿ ಪ್ರಸ್ತುತ ಕೆಟಿಎಂ ಮತ್ತು ಬಜಾಜ್ ಆಟೋ ಕಂಪನಿಗಳು ಪ್ರಾಬಲ್ಯವನ್ನು ಹೊಂದಿವೆ.

ಬರ್ತಿದೆ ಕೆಟಿಎಂ ಡ್ಯೂಕ್ 390 ಬೈಕಿನ ಪ್ರತಿಸ್ಪರ್ಧಿ ಬಿಎಂಡಬ್ಲ್ಯೂ ಮೊಟರ್ರಾಡ್ ಜಿ310ಆರ್

ಜಿ 310 ಆರ್ ಮೋಟಾರ್ ಸೈಕಲ್ ಭಾರತದಲ್ಲಿ ಸ್ಥಳೀಯವಾಗಿ ತಯಾರಿಸಲಾಗುವ ಕಾರಣ, ಈ ವಿಭಾಗದ ಯಶಸ್ವಿ ದ್ವಿಚಕ್ರ ವಾಹನಗಳಿಗೆ ಬೆಲೆಯ ವಿಚಾರದಲ್ಲಿ ಟಕ್ಕರ್ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಬರ್ತಿದೆ ಕೆಟಿಎಂ ಡ್ಯೂಕ್ 390 ಬೈಕಿನ ಪ್ರತಿಸ್ಪರ್ಧಿ ಬಿಎಂಡಬ್ಲ್ಯೂ ಮೊಟರ್ರಾಡ್ ಜಿ310ಆರ್

33.5 ಬಿಎಚ್‌ಪಿ ಮತ್ತು 28 ಎನ್‌ಎಂ ಟಾರ್ಕ್ ಉತ್ಪಾದಿಸುವ 313 ಸಿಸಿ ಏಕ ಸಿಲಿಂಡರ್ ಎಂಜಿನ್ ಆಯ್ಕೆ ಪಡೆದಿರುವ ಈ ವಾಹನ 6-ಸ್ಪೀಡ್ ಗೇರ್ ಬಾಕ್ಸ್ ಆಯ್ಕೆ ಪಡೆದುಕೊಂಡಿದೆ.ಈ ಎಂಜಿನ್ ಇತ್ತೀಚೆಗೆ ಬಿಡುಗಡೆಯಾದ ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕಿನಲ್ಲಿ ನಿಯೋಜಿಸಲಾಗಿದೆ.

ಬರ್ತಿದೆ ಕೆಟಿಎಂ ಡ್ಯೂಕ್ 390 ಬೈಕಿನ ಪ್ರತಿಸ್ಪರ್ಧಿ ಬಿಎಂಡಬ್ಲ್ಯೂ ಮೊಟರ್ರಾಡ್ ಜಿ310ಆರ್

2018ರ ದ್ವಿತೀಯಾರ್ಧದಲ್ಲಿ ಬಿಎಂಡಬ್ಲ್ಯು ಜಿ 310 ಆರ್ ಮೋಟ್‌ರಾಡ್ ಪ್ರವೇಶಿಸಲಿದ್ದು, ಭಾರತದಲ್ಲಿ ಬಿಡುಗಡೆಯ ನಂತರ ಜಿ 310 ಆರ್ ಕೆಟಿಎಂ ಡ್ಯೂಕ್ 390, ಬೆನೆಲ್ಲಿ ಟಿಎನ್‌ಟಿ 300, ಕಾವಾಸಾಕಿ ಝಡ್ 2 ಮತ್ತು ಬಜಾಜ್ ಡೊಮಿನಾರ್ 400 ಬೈಕುಗಳೊಂದಿಗೆ ಸ್ಪರ್ಧೆ ನೆಡೆಸಲಿದೆ.

Most Read Articles

Kannada
English summary
BMW Motorrad’s KTM Duke 390 Rival Is Finally Coming To India.
Story first published: Saturday, December 9, 2017, 12:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X