ಸದ್ಯದಲ್ಲೇ ಬರಲಿದೆ ಬಿಎಂಡಬ್ಲ್ಯು ಹಾರುವ ಬೈಕ್- ಚಾಣಕ್ಷ ಬೈಕ್ ವಿಶೇಷತೆ ಏನು ಗೊತ್ತಾ..?

Written By:

ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಬಿಎಂಡಬ್ಲ್ಯು, ಅತ್ಯದ್ಭುತ ಸಾಹಿಸಿ ಬೈಕ್‌ವೊಂದನ್ನು ಆವಿಷ್ಕಾರ ಮಾಡಿದೆ. ಲೆಗೋ ಕಂಪನಿಯ ಹೊವರ್ ಬೈಕ್ ಸ್ಪೂರ್ತಿಯೊಂದಿಗೆ ಸಿದ್ಧಗೊಂಡಿರುವ ಬಿಎಂಡಬ್ಲ್ಯು ಆರ್ 1200 ಜಿಎಸ್ ಹಲವು ಕೌತುಕಗಳ ಆಗರವಾಗಿದೆ.

ಈ ಹಿಂದೆ ಹೊವರ್ ಬೈಕ್ (ಹಾರುವ ಬೈಕ್) ನಿರ್ಮಾಣ ಮಾಡಿ ಸೈ ಎನ್ನಿಸಿಕೊಂಡಿದ್ದ ಲೆಗೋ ಇದೀಗ ಮತ್ತೆ ಸುದ್ಧಿಯಲ್ಲಿದೆ. 603-ಲೆಗೋ ಕಿಟ್‌ನೊಂದಿಗೆ ಸಿದ್ಧಗೊಂಡಿರುವ ಬಿಎಂಡಬ್ಲ್ಯು ಆರ್ 1200 ಜಿಎಸ್ ಹಾರುವ ಬೈಕ್ ಕೂಡಾ ಬೈಕ್ ಪ್ರಿಯರ ಗಮನ ಸೆಳೆಯುತ್ತಿದೆ.

ಬಿಎಂಡಬ್ಲ್ಯು ಆರ್ 1200 ಜಿಎಸ್ ಹಾರುವ ಬೈಕ್ ಮೂಲ ಲೆಗೋ ಟೆಕ್ನಿಕ್ ವಿನ್ಯಾಸದೊಂದಿಗೆ ಸಿದ್ಧಗೊಳಿಸಲಾಗಿದ್ದರು, ಎಂಜಿನ್ ಮತ್ತು ಜಿಎಸ್ ಪ್ರೋಫೈಲ್ ಅಂಶಗಳನ್ನು ಬಿಎಂಡಬ್ಲ್ಯು ಸಂಸ್ಥೆಯೇ ವಿನ್ಯಾಸಗೊಳಿಸಿದೆ. ಹೀಗಾಗಿ
ಭಾರೀ ನೀರಿಕ್ಷೆ ಹುಟ್ಟುಹಾಕಿರುವ ಬೈಕ್ ಬೆಲೆಯನ್ನು ರೂ. 4026 ಗಳಿಗೆ ನಿಗದಿಗೊಳಿಸಲಾಗಿದೆ. 

ಹತ್ತು ಹಲವು ಸಂಶೋಧನೆಗಳು ಮತ್ತು ಆವಿಷ್ಕಾರಗಳ ಫಲವಾಗಿ ಹಾರುವ ಬೈಕ್ ನಿರ್ಮಾಣವಾಗಿದ್ದು, 'ಹೊವರ್ ರೈಡ್ ಡಿಸೈನ್' ಪರಿಕಲ್ಪನೆ ಅಡಿ ಬಿಎಂಡಬ್ಲ್ಯು ಆರ್ 1200 ಜಿಎಸ್ ಸಿದ್ಧಗೊಂಡಿದೆ. ಮ್ಯೂನಿಚ್‌ನ ಬಿಎಂಡಬ್ಲ್ಯು ಜೂನಿಯರ್ ಇಂಜನಿಯರ್ಸ್ ಇದನ್ನು ಆವಿಷ್ಕಾರ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಬಿಎಂಡಬ್ಲ್ಯು ಆರ್ 1200 ಜಿಎಸ್ ಹಾರುವ ಬೈಕಿನ ವಿನ್ಯಾಸ ಅದ್ಭುತವಾಗಿದೆ. ಬೈಕಿನ ಮುಂಭಾಗ ಚಕ್ರವೇ ಪ್ರೊಪೆಲ್ಲರ್ ಆಗಿದ್ದು, ಎರಡು ಸಿಲಿಂಡರ್ ಎಂಜಿನ್ ಬೈಕ್ ಸಾಮರ್ಥ್ಯವನ್ನು ಹೆಚ್ಚಿಸಿದೆ.

ಲೆಗೋ ಪರಿಕಲ್ಪನೆಯೊಂದಿಗೆ ಸಿದ್ಧಗೊಂಡಿರುವ ಬಿಎಂಡಬ್ಲ್ಯು ಆರ್ 1200 ಜಿಎಸ್ ಹಾರುವ ಬೈಕ್, ಮೂವಿಂಗ್ ಹ್ಯಾಂಡಲ್ ಮತ್ತು ಹೊಂದಾಣಿಕೆಯ ಗಾಜುಗಳನ್ನು ಹೊಂದಿದೆ. ಬ್ಲ್ಯಾಕ್ ಸ್ಪೋಕ್ ವೀಲ್ಹ್‌ಗಳ ವ್ಯವಸ್ಥೆ ಕೂಡಾ ಇದ್ದು ಚಿತ್ರದಲ್ಲಿ ಹೊಸ ವಿನ್ಯಾಸಗಳನ್ನು ನಾವು ಗುರುತಿಸಬಹುದಾಗಿದೆ.

ಸದ್ಯದಲ್ಲೇ ಬಿಎಂಡಬ್ಲ್ಯು ಲೆಗೋ ಪ್ರೇರಿತ ಬಿಎಂಡಬ್ಲ್ಯು ಆರ್ 1200 ಜಿಎಸ್ ಹಾರುವ ಬೈಕ್ ನಿಮ್ಮ ಕೈ ಸೇರಲಿದ್ದು, ಅದಕ್ಕೂ ಮೊದಲು ಭಾರತದಲ್ಲಿ ಬಿಡುಗಡೆಗೆ ಕಾಯ್ದಿರುವ ಹೋಂಡಾ ಆಫ್ರಿಕಾ ಅವಳಿ ಸಾಹಸ ಬೈಕ್ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
BMW Motorrad has built a full sized version of BMW R 1200GS hoverbike concept inspired from a Lego set.
Please Wait while comments are loading...

Latest Photos