ರಾಯಲ್ ಏನ್‌ಫೀಲ್ಡ್‌ಗೆ ಸ್ಪರ್ಧೆ ನೀಡುತ್ತೆ ಈ 'ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್'

Written By:

ಇತ್ತೀಚಿನ ವರ್ಷಗಳಲ್ಲಿ, ಜಾಗತಿಕ ಮೋಟಾರ್ ಸೈಕಲ್ ತಯಾರಕರು ಅತಿ ಹೆಚ್ಚು ಬೆಳೆವಣಿಗೆ ಕಾಣುತ್ತಿರುವ ಭಾರತೀಯ ಮಾರುಕಟ್ಟೆಗೆ ತಮ್ಮ ಪ್ರವೇಶಿಸುತ್ತಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ.

ರಾಯಲ್ ಏನ್‌ಫೀಲ್ಡ್‌ಗೆ ಸ್ಪರ್ಧೆ ನೀಡುತ್ತೆ ಈ 'ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್'

ಈಗಾಗಲೇ ಬಹಳಷ್ಟು ಐಷಾರಾಮಿ ಬೈಕ್ ತಯಾರಕ ಸಂಸ್ಥೆಗಳು ಭಾರತದಲ್ಲಿ ನೆಲೆ ಕಂಡುಕೊಂಡಿದ್ದು, ಈ ಸಾಲಿಗೆ ಹೊಸ ಸೇರ್ಪಡೆ 'ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್' ಎನ್ನಬಹುದು. ಈಗಾಗಲೇ ಡುಕಾಟಿ, ಹಾರ್ಲೆ ಡೇವಿಡ್ಸನ್, ಬಿಎಂಡಬ್ಲ್ಯು ಮೊಟ್ರಾಡ್ ಮತ್ತು ಟ್ರಯಂಪ್ ಕಂಪನಿಗಳು ಈಗಾಗಲೇ ದೇಶದಲ್ಲಿ ಕಾರ್ಯನಿರ್ವಹಿಸುತ್ತವೆ.

ರಾಯಲ್ ಏನ್‌ಫೀಲ್ಡ್‌ಗೆ ಸ್ಪರ್ಧೆ ನೀಡುತ್ತೆ ಈ 'ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್'

ಅಮೆರಿಕನ್ ಮೋಟಾರ್‌ಸೈಕಲ್ ತಯಾರಕ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಇದೇ ವರ್ಷದ ಜುಲೈ 2017ರೊಳಗೆ ಭಾರತೀಯ ಮಾರುಕಟ್ಟೆಯಲ್ಲಿ ಪ್ರವೇಶಿಸಲು ಸಿದ್ಧವಾಗಿದೆ.

ರಾಯಲ್ ಏನ್‌ಫೀಲ್ಡ್‌ಗೆ ಸ್ಪರ್ಧೆ ನೀಡುತ್ತೆ ಈ 'ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್'

ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಈ ಉದ್ಯಮಕ್ಕೆ ಹೊಸ ಪರಿಚಯ ಎನ್ನಬಹುದು. ಹೌದು, ಈ ಕಂಪನಿಯು 2009ರಲ್ಲಿ ಸ್ಥಾಪನೆಯಾಯಿತು, ಮತ್ತು 2010ರಲ್ಲಿ ಮೊದಲ ಮೋಟಾರ್‌ಸೈಕಲ್ ಬಿಡುಗಡೆಗೊಳಿಸಿತು.

ರಾಯಲ್ ಏನ್‌ಫೀಲ್ಡ್‌ಗೆ ಸ್ಪರ್ಧೆ ನೀಡುತ್ತೆ ಈ 'ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್'

ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಈ ಉದ್ಯಮಕ್ಕೆ ಹೊಸದಾದರೂ ಸಹ ಸುಮಾರು 25 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಬೈಕಿನ ಬಹುತೇಕ ಭಾಗಗಳನ್ನು ಚೀನಾ ದೇಶದಲ್ಲಿ ತಯಾರು ಮಾಡಲಾಗುತ್ತದೆ ಮತ್ತು ಈ ಸಂಸ್ಥೆ 125ಸಿಸಿ ಇಂದ 450ಸಿಸಿ ಇರುವ ಮೋಟಾರ್‌ಸೈಕಲ್ ತಯಾರು ಮಾಡುತ್ತದೆ.

ರಾಯಲ್ ಏನ್‌ಫೀಲ್ಡ್‌ಗೆ ಸ್ಪರ್ಧೆ ನೀಡುತ್ತೆ ಈ 'ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್'

ಎಲ್ಲಾ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಮೋಟರ್ ಸೈಕಲ್‌ಗಳು ಹಳೆಯ ಹೋಂಡಾ ಎಂಜಿನ್‌ಗಳ ಆಧಾರದ ಮೇಲೆ ಅಭಿವೃದ್ಧಿಗೊಳಿಸಲಾಗಿದ್ದು, ಎಲ್ಲಾ ಬೈಕುಗಳು ಸಿಂಗಲ್ ಸಿಲಿಂಡರ್ ಇಂಜಿನ್ ಹೊಂದಿವೆ.

ರಾಯಲ್ ಏನ್‌ಫೀಲ್ಡ್‌ಗೆ ಸ್ಪರ್ಧೆ ನೀಡುತ್ತೆ ಈ 'ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್'

ಹೈದರಾಬಾದ್ ಮೂಲದ ಕಂಪೆನಿಯಾದ ಲೈಶ್-ಮ್ಯಾಡಿಸನ್ ಸೈಕಲ್‌ವೆರ್ಕ್ಸ್ (ಎಲ್ಎಂಎಂಡಬ್ಲ್ಯೂ) ಕಂಪನಿಯ ಸಹಯೋಗದೊಂದಿಗೆ ಮೋಟಾರ್‌ಸೈಕಲ್ ಭಾರತಕ್ಕೆ ಪ್ರವೇಶಿಸಲಿದೆ.

ರಾಯಲ್ ಏನ್‌ಫೀಲ್ಡ್‌ಗೆ ಸ್ಪರ್ಧೆ ನೀಡುತ್ತೆ ಈ 'ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್'

ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಕಂಪನಿ ಭಾರತದಲ್ಲಿಯೇ ತನ್ನ ಮೋಟಾರ್‌ಸೈಕಲ್‌ ಜೋಡಿಸಲು ಯೋಜಿಸಿದೆ ಮತ್ತು ಕಂಪನಿ ತೆಲಂಗಾಣದಲ್ಲಿ ಒಂದು ಘಟಕ ಸ್ಥಾಪಿಸುವ ಗುರಿ ಹೊಂದಿದೆ.

ರಾಯಲ್ ಏನ್‌ಫೀಲ್ಡ್‌ಗೆ ಸ್ಪರ್ಧೆ ನೀಡುತ್ತೆ ಈ 'ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್'

ಭಾರತಕ್ಕೆ ಪ್ರವೇಶಿಸುತ್ತಿರುವ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಸಂಸ್ಥೆ ಹಾಯಿಸ್ಟ್, ಏಸ್, ಮಿಸ್‌ಫಿಟ್, ಎಫ್ಎಕ್ಸ್ಆರ್ ಮತ್ತು ಹೂಲಿಗನ್ ಎಂಬ ಐದು ಮಾದರಿಗಳಲ್ಲಿ ಬಿಡುಗಡೆಗೊಳಿಸಿದೆ ಎನ್ನಲಾಗಿದೆ.

English summary
American motorcycle manufacturer Cleveland CycleWerks is set to enter the Indian market by July 2017.
Story first published: Tuesday, June 13, 2017, 17:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark