ಸುಳ್ಳು ಜಾಹೀರಾತು ತಂದ ಸಂಕಷ್ಟ-ಟಿವಿಎಸ್‌ಗೆ ಕೋರ್ಟ್ ತರಾಟೆ

Written By:

ಗ್ರಾಹಕರೇ ಬೈಕ್ ಮಾರಾಟಗಾರರು ನೀಡುವ ತಪ್ಪು ಜಾಹೀರಾತುಗಳಿಗೆ ಮರುಳಾಗಿ ಮೋಸ ಹೋಗ್ಬೇಡಿ. ಯಾಕೇಂದ್ರೆ ಅಲಹಾಬಾದ್‌ನಲ್ಲೂ ಇಂತದ್ದೇ ಒಂದು ಘಟನೆ ನಡೆದಿದ್ದು, ಟಿವಿಎಸ್ ವಿರುದ್ಧ ಕೆಲವು ಗ್ರಾಹಕರು ಕೋರ್ಟ್ ಮೆಟ್ಟಿಲೇರಿದ್ದಾರೆ.

To Follow DriveSpark On Facebook, Click The Like Button
ಸುಳ್ಳು ಜಾಹೀರಾತು ತಂದ ಸಂಕಷ್ಟ-ಟಿವಿಎಸ್‌ಗೆ ಕೋರ್ಟ್ ತರಾಟೆ

ಜೂಪಿಟರ್ ಮಾರಾಟದಲ್ಲಿ ಗ್ರಾಹಕರಿಗೆ ನೀಡದ ತಪ್ಪು ಮಾಹಿತಿಯಿಂದಾಗಿ ಟಿವಿಎಸ್‌ಗೆ ಸಂಕಷ್ಟ ಎದುರಾಗಿದೆ. ಹೀಗಾಗಿ ತಪ್ಪು ಮಾಹಿತಿ ನೀಡಿದ ಬೈಕ್ ಮಾರಾಟಗಾರರ ವಿರುದ್ಧ ಕೆಲವು ಗ್ರಾಹಕರು ಕೋರ್ಟ್ ಮೆಟ್ಟಿಲೇರಿದ್ದು, ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಳು ಜಾಹೀರಾತು ತಂದ ಸಂಕಷ್ಟ-ಟಿವಿಎಸ್‌ಗೆ ಕೋರ್ಟ್ ತರಾಟೆ

ಅಲಹಾಬಾದ್‌ ನಗರದಲ್ಲಿ ಈ ಘಟನೆ ನಡೆದಿದ್ದು, ರಾಜ್‌ಕೋಟ್ ಮೂಲದ ವ್ಯಕ್ತಿಯೊಬ್ಬರು ಟಿವಿಎಸ್ ಮಾರಾಟ ಮಳಿಗೆಯಲ್ಲಿ ಕಳೆದ ವರ್ಷ ಜೂಪಿಟರ್ ಸ್ಕೂಟರ್ ಖರೀದಿಸಿದ್ದರು. ಆದ್ರೆ ಮಾರಾಟ ಮಳಿಗೆಯವರು ಮೈಲೇಜ್ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ.

ಸುಳ್ಳು ಜಾಹೀರಾತು ತಂದ ಸಂಕಷ್ಟ-ಟಿವಿಎಸ್‌ಗೆ ಕೋರ್ಟ್ ತರಾಟೆ

ಇನ್ನು ಸ್ಕೂಟರ್ ಖರೀದಿ ವೇಳೆ ಟಿವಿಎಸ್ ವಾಹನಗಳ ಮಾರಾಟಗಾರರು ಜೂಪಿಟರ್ ಆವೃತ್ತಿಯು ಪ್ರತಿ ಲೀಟರ್‌ಗೆ 66ಕಿಮಿ ಮೈಲೇಜ್ ನೀಡುವುದಾಗಿ ಸುಳ್ಳು ಜಾಹೀರಾತು ನೀಡಿದ್ದಾರೆ.

ಸುಳ್ಳು ಜಾಹೀರಾತು ತಂದ ಸಂಕಷ್ಟ-ಟಿವಿಎಸ್‌ಗೆ ಕೋರ್ಟ್ ತರಾಟೆ

ಆದ್ರೆ ಖರೀದಿ ಮಾಡಿದ ಕೆಲ ದಿನಗಳ ನಂತರ ಹೊಸ ಮಾದರಿಯ ಜೂಪಿಟರ್ ಆವೃತ್ತಿಯು ಪ್ರತಿಲೀಟರ್‌ಗೆ 40ಕಿಲೋ ಮೀಟರ್‌ಗಿಂತಲೂ ಕಡಿಮೆ ಮೈಲೇಜ್ ನೀಡುತ್ತಿರುವುದನ್ನು ತಿಳಿದು ಗ್ರಾಹಕರು ಕಂಗಾಲಾಗಿದ್ದಾರೆ.

ಸುಳ್ಳು ಜಾಹೀರಾತು ತಂದ ಸಂಕಷ್ಟ-ಟಿವಿಎಸ್‌ಗೆ ಕೋರ್ಟ್ ತರಾಟೆ

ಈ ಕುರಿತಂತೆ ಟಿವಿಎಸ್ ಮಾರಾಟಗಾರರನ್ನು ವಿಚಾರ ಮಾಡಿದಾಗ ಗ್ರಾಹಕರ ಮನವಿಗೆ ಸರಿಯಾಗಿ ಸ್ಪಂದಿಸದೇ ಅಸಡ್ಡೆ ತೊರಿದ್ದಾರೆ. ಇದರಿಂದ ಮಾರಾಟಗಾರರ ವರ್ತನೆ ಕಂಡು ಕುಪಿತಗೊಂಡಿರುವ ಗ್ರಾಹಕರು ಕೋರ್ಟ್ ಮೆಟ್ಟಿಲೇರಿ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.

ಸುಳ್ಳು ಜಾಹೀರಾತು ತಂದ ಸಂಕಷ್ಟ-ಟಿವಿಎಸ್‌ಗೆ ಕೋರ್ಟ್ ತರಾಟೆ

ತಪ್ಪು ಜಾಹೀರಾತು ವಿರುದ್ಧ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ವೇಳೆ ಟಿವಿಎಸ್ ಮಾರಾಟಗಾರರಿಗೆ ಕೋರ್ಟ್ ಚಾಟಿ ಬೀಸಿದೆ.

ಸುಳ್ಳು ಜಾಹೀರಾತು ತಂದ ಸಂಕಷ್ಟ-ಟಿವಿಎಸ್‌ಗೆ ಕೋರ್ಟ್ ತರಾಟೆ

ಯಾವುದೇ ಕಾರಣಕ್ಕೂ ತಪ್ಪು ಜಾಹೀರಾತು ನೀಡಿ ಗ್ರಾಹಕರಿಗೆ ಮೋಸ ಮಾಡದಂತೆ ಖಡಕ್ ಸೂಚನೆ ನೀಡಿರುವ ಕೋರ್ಟ್, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶ ನೀಡಿದೆ.

ಸುಳ್ಳು ಜಾಹೀರಾತು ತಂದ ಸಂಕಷ್ಟ-ಟಿವಿಎಸ್‌ಗೆ ಕೋರ್ಟ್ ತರಾಟೆ

ಕೋರ್ಟ್ ಆದೇಶದಂತೆ ರಾಜ್‌ಕೋಟ್ ನಿವಾಸಿಗೆ ಟಿವಿಎಸ್ ಮಾರಾಟಗಾರರು ಸದ್ಯ ಖರೀದಿ ಮಾಡುವಾಗ ಪಾವತಿಸಿದ್ದ ಒಟ್ಟು ಮೊತ್ತವನ್ನು ವಾಪಸ್ ಮಾಡಿದ್ದಾರೆ.

ಸುಳ್ಳು ಜಾಹೀರಾತು ತಂದ ಸಂಕಷ್ಟ-ಟಿವಿಎಸ್‌ಗೆ ಕೋರ್ಟ್ ತರಾಟೆ

ಒಟ್ಟಿನಲ್ಲಿ ಪ್ರತಿಷ್ಠಿತ ಸಂಸ್ಥೆಗಳಿಂದಲೇ ಇಂತಹ ಮೋಸ ನಡೆಯುತ್ತಿರುವುದು ಕಳವಳಕಾರಿ ಸಂಗತಿ. ಹೀಗಾಗಿ ವಾಹನ ಖರೀದಿಸುವಾಗ ಗ್ರಾಹಕರು ಎಚ್ಚರ ವಹಿಸುವುದು ಒಳಿತು.

Read more on ಟಿವಿಎಸ್ tvs
English summary
A consumer court has asked TVS Service Centre to repair the scooter to deliver the advertised mileage.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark