ಭಾರತದಲ್ಲಿ ಬಿಡುಗಡೆಯಾದ ಡುಕಾಟಿ 1299 ಪ್ಯಾನಿಗಾಲೆ ಆರ್ ಬೈಕ್ ಬೆಲೆ 59.18 ಲಕ್ಷ..!

Written By:

ಸೂಪರ್ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಡುಕಾಟಿ ಸಂಸ್ಥೆಯು ಭಾರತದಲ್ಲಿ 1299 ಪ್ಯಾನಿಗಾಲೆ ಆರ್ ಅಂತಿಮ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ವಿನೂತನ ತಂತ್ರಜ್ಞಾನ ಹೊಂದಿರುವ ಬೈಕ್ ಬೆಲೆಯನ್ನು 59.18 ಲಕ್ಷಕ್ಕೆ ನಿಗದಿಯಾಗಿದೆ.

ಬಿಡುಗಡೆಯಾದ ಡುಕಾಟಿ 1299 ಪ್ಯಾನಿಗಾಲೆ ಆರ್ ಬೈಕ್ ಬೆಲೆ 59.18 ಲಕ್ಷ

ಸೂಪರ್ ಬೈಕ್ ಮಾದರಿಗಳಲ್ಲೇ ಅತ್ಯುತ್ತಮ ಎಲ್-ಟ್ವಿನ್ ಎಂಜಿನ್‌ನೊಂದಿಗೆ ಅಭಿವೃದ್ಧಿಯಾಗಿರುವ ಡುಕಾಟಿ 1299 ಪ್ಯಾನಿಗಾಲೆ ಆರ್ ಬೈಕ್ ಭಾರತಕ್ಕೆ ಲಗ್ಗೆಯಿಟ್ಟಿದ್ದು, ಅಕ್ಟೋಬರ್‌ನಿಂದ ಸ್ಥಗಿತಗೊಳ್ಳಲಿರುವ ವಿ4 ಎಂಜಿನ್‌ ಸಾಮರ್ಥ್ಯದ ಡುಕಾಟಿ ಸ್ಥಾನಕ್ಕೆ ಲಗ್ಗೆಯಿಡುತ್ತಿದೆ.

ಬಿಡುಗಡೆಯಾದ ಡುಕಾಟಿ 1299 ಪ್ಯಾನಿಗಾಲೆ ಆರ್ ಬೈಕ್ ಬೆಲೆ 59.18 ಲಕ್ಷ

ಎಲ್-ಟ್ವಿನ್ ಎಂಜಿನ್‌ನೊಂದಿಗೆ ಉತ್ಪಾದನೆಯಾಗಿರುವ ಡುಕಾಟಿ 1299 ಪ್ಯಾನಿಗಾಲೆ ಆರ್ ಬೈಕ್ 1285 ಸಿಸಿ ಸೂಪರ್ ಕ್ವಾರ್ಡೋ ಎಂಜಿನ್ ಹೊಂದಿದ್ದು, 206.5 ಬಿಎಚ್‌ಪಿ ಮತ್ತು 142 ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ.

ಬಿಡುಗಡೆಯಾದ ಡುಕಾಟಿ 1299 ಪ್ಯಾನಿಗಾಲೆ ಆರ್ ಬೈಕ್ ಬೆಲೆ 59.18 ಲಕ್ಷ

ಇದರೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್, ಟಂಗ್‌ಸ್ಟನ್ ಬ್ಯಾಲೆನ್ಸ್ ಪ್ಯಾಡ್ ಮತ್ತು ಶಾರ್ಪ್ ಹೆಡ್‌ಲ್ಯಾಂಪ್ ಮತ್ತು ಟೈಲ್‌ಲ್ಯಾಂಪ್ ಹೊಂದಿರುವ ಡುಕಾಟಿ 1299 ಪ್ಯಾನಿಗಾಲೆ ಆರ್ ಬೈಕ್, ಯುರೋ 4 ವೈಶಿಷ್ಟ್ಯತೆಗಳನ್ನು ಹೊತ್ತು ಭಾರತಕ್ಕೆ ಪ್ರವೇಶ ಪಡೆದಿದೆ.

ಬಿಡುಗಡೆಯಾದ ಡುಕಾಟಿ 1299 ಪ್ಯಾನಿಗಾಲೆ ಆರ್ ಬೈಕ್ ಬೆಲೆ 59.18 ಲಕ್ಷ

ಇನ್ನು ಅದ್ಭುತ ಹೊರ ವಿನ್ಯಾಸಗಳೊಂದಿಗೆ ತ್ರಿವಳಿ ಬಣ್ಣವನ್ನು ಹೊಂದಿರುವ 1299 ಪ್ಯಾನಿಗಾಲೆ ಆರ್ ಬೈಕ್, ಎಕ್ಸಾಸ್ಟ್ ಮತ್ತು ಹೊರ ಭಾಗವನ್ನು ಬಹುತೇಕ ಟೈಟಾನಿಯಂನೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಬಿಡುಗಡೆಯಾದ ಡುಕಾಟಿ 1299 ಪ್ಯಾನಿಗಾಲೆ ಆರ್ ಬೈಕ್ ಬೆಲೆ 59.18 ಲಕ್ಷ

ಇದಲ್ಲದೇ ಮುಂಭಾಗದ ಚಕ್ರದಲ್ಲಿ ಟ್ವಿನ್ 330 ಎಂಎಂ ಸೆಮಿ ಡಿಸ್ಕ್ ಬ್ರೇಕ್ ವ್ಯವಸ್ಥೆಯಿದ್ದು, ಹಿಂಭಾಗದ ಚಕ್ರದಲ್ಲಿ 254 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ವ್ಯವಸ್ಥೆಯಿದೆ. ಹಾಗಿಯೇ ಮುಂಭಾಗದ ಚಕ್ರದಲ್ಲಿ ಎಂ50-4 ಪಿಸ್ಟನ್ ಕ್ಯಾಲಿಪರ್ಸ್ ಪಡೆದುಕೊಂಡಿದ್ದರೆ ಹಿಂಭಾಗದ ಚಕ್ರದಲ್ಲಿ ಸ್ಪೋರ್ಟ್ 2 ಪಿಸ್ಟನ್ ಹೊಂದಿರುವುದು ವಿಶೇಷ.

ಬಿಡುಗಡೆಯಾದ ಡುಕಾಟಿ 1299 ಪ್ಯಾನಿಗಾಲೆ ಆರ್ ಬೈಕ್ ಬೆಲೆ 59.18 ಲಕ್ಷ

ಹೀಗಾಗಿ ಸೂಪರ್ ಬೈಕ್ ವಿಭಾಗದಲ್ಲೇ ಇದೊಂದು ಅತ್ಯತ್ತಮ ಮಾದರಿಯಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ 1299 ಪ್ಯಾನಿಗಾಲೆ ಆರ್ ಮಾರಾಟ ಪ್ರಕ್ರಿಯೆ ಹೆಚ್ಚುವ ನೀರಿಕ್ಷೆ ಕೂಡಾ ಇದೆ ಎನ್ನಲಾಗಿದೆ.

Read more on ಡುಕಾಟಿ ducati
English summary
Read in Kannada about Ducati 1299 Panigale R Final Edition Launched In India.
Story first published: Thursday, July 13, 2017, 16:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark