ಭಾರತದಲ್ಲಿ ಬಿಡುಗಡೆಯಾದ ಡುಕಾಟಿ ಸ್ಕ್ರ್ಯಾಂಬರ್ ಡಸರ್ಟ್ ಸ್ಲೆಡ್ ಎಡಿಷನ್

Written By:

ಆಪ್ ರೋಡಿಂಗ್‌ ಪ್ರಿಯರಿಗಾಗಿ ಹೊಸ ಬಗೆಯ ಡಸರ್ಟ್ ಸ್ಲೆಡ್ ಸ್ಕ್ರ್ಯಾಂಬರ್ ಆವೃತ್ತಿಯನ್ನು ಡುಕಾಟಿ ಸಂಸ್ಥೆಯು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಸುಧಾರಿತ ತಂತ್ರಜ್ಞಾನ ಸೇರಿದಂತೆ ಆಪ್ ರೋಡಿಂಗ್ ಕೌಲಶ್ಯಕ್ಕೆ ಬೇಕಾದ ಹಲವು ಸುರಕ್ಷಾ ವಿಧಾನಗಳನ್ನು ಹೊಸ ಬೈಕಿನಲ್ಲಿ ಒದಗಿಸಲಾಗಿದೆ.

To Follow DriveSpark On Facebook, Click The Like Button
ಭಾರತದಲ್ಲಿ ಬಿಡುಗಡೆಯಾದ ಡುಕಾಟಿ ಸ್ಕ್ರ್ಯಾಂಬರ್ ಡಸರ್ಟ್ ಸ್ಲೆಡ್ ಎಡಿಷನ್

ಗ್ರಾಹಕರ ಬೇಡಿಕೆಗೆ ತಕ್ಕಂತೆ ರೆಡ್ ಮಸ್ಕ್ ಶೆಡ್ ಮತ್ತು ವೈಟ್ ಮಿರಾಜ್ ಶೆಡ್ ಮಾದರಿಗಳನ್ನು ಬಿಡುಗಡೆಗೊಳಿಸಿರುವ ಡುಕಾಟಿಯೂ ಕ್ರಮವಾಗಿ ರೂ.9.32 ಲಕ್ಷ ಮತ್ತು ರೂ.9.45 ಲಕ್ಷಕ್ಕೆ ಸ್ಕ್ರ್ಯಾಂಬರ್ ಡಸರ್ಟ್ ಸ್ಲೆಡ್ ಎಡಿಷನ್ ಅನ್ನು ಗ್ರಾಹಕರಿಗೆ ಪರಿಚಯಿಸಿದೆ.

ಭಾರತದಲ್ಲಿ ಬಿಡುಗಡೆಯಾದ ಡುಕಾಟಿ ಸ್ಕ್ರ್ಯಾಂಬರ್ ಡಸರ್ಟ್ ಸ್ಲೆಡ್ ಎಡಿಷನ್

ಅಮೆರಿಕದಲ್ಲಿ 1960-70ರ ದಶಕದ ಅವಧಿಯಲ್ಲಿ ಸ್ಕ್ರ್ಯಾಂಬರ್ ಡಸರ್ಟ್ ಸ್ಲೆಡ್ ಆವೃತ್ತಿಗಳಿಗೆ ಭಾರೀ ಬೇಡಿಕೆ ಇತ್ತು. ಇದನ್ನೇ ಪ್ರೇರಣಿಯಾಗಿಟ್ಟುಕೊಂಡಿರುವ ಡುಕಾಟಿ ಸಂಸ್ಥೆಯೂ ಪ್ರಸ್ತುತ ತಂತ್ರಜ್ಞಾನದೊಂದಿಗೆ ಅಭಿವೃದ್ಧಿ ಹೊಂದಿರುವ ಸ್ಕ್ರ್ಯಾಂಬರ್ ಡಸರ್ಟ್ ಸ್ಲೆಡ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಭಾರತದಲ್ಲಿ ಬಿಡುಗಡೆಯಾದ ಡುಕಾಟಿ ಸ್ಕ್ರ್ಯಾಂಬರ್ ಡಸರ್ಟ್ ಸ್ಲೆಡ್ ಎಡಿಷನ್

ಎಂಜಿನ್ ಸಾಮರ್ಥ್ಯ

ಯುರೋ 4 ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಹೊಂದಿರುವ ಸ್ಕ್ರ್ಯಾಂಬರ್ ಡಸರ್ಟ್ ಸ್ಲೆಡ್ ಎಡಿಷನ್ ಮಾದರಿಗಳು 803 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದ್ದು, 74 ಬಿಎಚ್‌ಪಿ 68 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿವೆ.

ಭಾರತದಲ್ಲಿ ಬಿಡುಗಡೆಯಾದ ಡುಕಾಟಿ ಸ್ಕ್ರ್ಯಾಂಬರ್ ಡಸರ್ಟ್ ಸ್ಲೆಡ್ ಎಡಿಷನ್

ಹೀಗಾಗಿ 4.5ಸೇಕೆಂಡ್‌ಗಳಲ್ಲಿ ಸೊನ್ನೆಯಿಂದ ನೂರು ಕಿ.ಮಿ ವೇಗವನ್ನು ಪಡೆಯುವ ಸ್ಕ್ರ್ಯಾಂಬರ್ ಡಸರ್ಟ್ ಸ್ಲೆಡ್ ಎಡಿಷನ್, ಉನ್ನತ ಮಟ್ಟದಲ್ಲಿ ಪ್ರತಿಗಂಟೆಗೆ 200ಕಿ.ಮಿ ವೇಗದಲ್ಲಿ ಚಲಿಸುವ ಗುಣಹೊಂದಿವೆ.

ಭಾರತದಲ್ಲಿ ಬಿಡುಗಡೆಯಾದ ಡುಕಾಟಿ ಸ್ಕ್ರ್ಯಾಂಬರ್ ಡಸರ್ಟ್ ಸ್ಲೆಡ್ ಎಡಿಷನ್

ಇದರ ಜೊತೆ 9.1 ಎಂಪಿ ಎಬಿಎಸ್ ಕಂಟ್ರೋಲರ್ ಹೊಂದಿರುವ ಸ್ಕ್ರ್ಯಾಂಬರ್ ಡಸರ್ಟ್ ಸ್ಲೆಡ್ ಎಡಿಷನ್, ಮುಂಭಾಗದ ಚಕ್ರದಲ್ಲಿ ನಾಲ್ಕು ಪಿಸ್ಟನ್‌ನೊಂದಿಗೆ 330ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ 245ಎಂಎಂ ಡಿಸ್ಕ್ ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾದ ಡುಕಾಟಿ ಸ್ಕ್ರ್ಯಾಂಬರ್ ಡಸರ್ಟ್ ಸ್ಲೆಡ್ ಎಡಿಷನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಇತ್ತೀಚೆಗೆ ಆಪ್ ರೋಡಿಂಗ್ ಕೌಶಲ್ಯಗಳು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಿರುವ ಡುಕಾಟಿ ಸಂಸ್ಥೆಯು ಆಪ್ ರೋಡಿಂಗ್ ಪ್ರಿಯರಿಗಾಗಿ ಮೊಟ್ಟ ಮೊದಲ ಬಾರಿಗೆ ಸ್ಕ್ರ್ಯಾಂಬರ್ ಡಸರ್ಟ್ ಸ್ಲೆಡ್ ಎಡಿಷನ್ ದೇಶದಲ್ಲಿ ಬಿಡುಗಡೆ ಮಾಡಿದೆ.

Read more on ಡುಕಾಟಿ ducati
English summary
Read in Kannada about Ducati India Launches The Desert Sled Edition Of The Scrambler At A Starting Price Of Rs 9.32 Lakh.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark